'ವಿದ್ಯಾರ್ಥಿಗಳ ಮನವಿ ಆಲಿಸಿ'; ಕಾಕ್ರೋಚ್​ ಜನತಾ ಪಾರ್ಟಿ ಪ್ರತಿಭಟನೆ ಪರ ನಿಂತ ಬಾಲಿವುಡ್​ ಸೆಲಬ್ರೆಟಿಗಳು..CJP Protest

bollywood celebrities on Delhi CJP protest
bollywood celebrities on Delhi CJP protest
Published on

ಪ್ರಮುಖ ಮುಖ್ಯಾಂಶಗಳು

  • ಕಾಕ್ರೋಚ್​ ಜನತಾ ಪಾರ್ಟಿ ಮೇಲೆ ಪೋಲಿಸರಿಂದ ಹಲ್ಲೆ?.
  • ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮನವಿ ಕೇಳಿ ಎಂದ ಬಾಲಿವುಡ್​ ತಾರೆಯರು.
  • ನಾವು ನಿಮ್ಮ ಪರವಿದ್ದೇವೆ ಎಂದ ನಟಿ ದಿಯಾ ಮಿರ್ಜಾ, ಸೋನಾಕ್ಷಿ, ದಿಲ್ಜಿತ್ ದೋಸಾಂಜ್.
bollywood celebrities on Delhi CJP protest: ಮುಂಗಾರು ಸಂಸತ್​ ಅಧಿವೇಶನದ ಹಾಗೂ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಹೊತ್ತಲೇ ಕಾಕ್ರೋಚ್​ ಜನತಾ ಪಾರ್ಟಿ ನೇತೃತ್ವದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ದೆಹಲಿಯು ರಣರಂಗವಾಗಿ ಬದಲಾಗಿತ್ತು. ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಮಾಡಿದ ಹಲ್ಲೆ ವಿರೋಧಿಸಿ ಬೆಂಬಲ ಸೂಚಿಸುತ್ತಿರುವ ಚಿತ್ರರಂಗದ ಗಣ್ಯರು ಹಾಗೂ ಸೆಲೆಬ್ರಿಟಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆಗಳಲ್ಲಿ ಉಂಟಾದ ಲೋಪದೋಷದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್​ ಜನತಾ ಪಾರ್ಟಿ ನೇತೃತ್ವದಲ್ಲಿ ದೆಹಲಿಯ ಜಂತರ್​ ಮಂತರ್​ ಬಳಿ ನಡೆದ ಪ್ರತಿಭಟನೆಯು ಹಿಂಸಾತ್ಮಕವಾಗಿ ಮಾರ್ಪಾಡಯಿತು. ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯ, ಗುಂಪು ಚದುರಿಸಲು ಆಶ್ರುವಾಯು ಸಿಡಿಸಿದ್ದು, ಸೇರಿದಂತೆ ನಾನಾ ವಿಚಾರಗಳನ್ನು ಉಲ್ಲೇಖಿಸಿ ನಟ-ನಟಿಯರು ಮತ್ತು ಗಾಯಕರು ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದು, ಸರ್ಕಾರದೊಂದಿಗೆ ಮಾತುಕತೆ ನಡೆಸುವಂತೆ ಮನವಿ ಮಾಡಿದ್ದಾರೆ.

ಸೋನಾಕ್ಷಿ ಏನಂದ್ರು?

ವಿದ್ಯಾರ್ಥಿಗಳು ತಮ್ಮ ಬೇಡಿಯನ್ನು ಶಾಂತವಾಗಿ, ಗೌರವದಿಂದ, ಹಿಂಸಾಚಾರವಿಲ್ಲದೆ ಮುಂದಿಟ್ಟಿದ್ದಾರೆ. ದೇಶದ ಶಕ್ತಿ ಈಗ ಯುವ ಜನತೆಯ ಕೈನಲ್ಲಿದೆ. ಅವರ ಈ ಪ್ರತಿಭಟನೆ, ಒಗ್ಗಟ್ಟು ಕಂಡು ನಿಜ ಎಂದು ಎನಿಸುತ್ತದೆ. ಅಸ್ವಸ್ಥತೆ, ನಿರಾಶೆ ಮತ್ತು ತೊಂದರೆಗಳ ನಂತರವೂ, ನೀವು ನಿಮ್ಮ ನಂಬಿಕೆಗಳನ್ನು ಹಿಡಿದಿಟ್ಟುಕೊಂಡಿರುವ ರೀತಿ, ನಿಮಗೆ ಹ್ಯಾಟ್ಸ್ ಆಫ್ ಎಂದು ಸೋನಾಕ್ಷಿ ಮಾತನಾಡಿದರು.

ದಿಯಾ ಮಿರ್ಜಾ ಹೇಳಿದ್ದಿಷ್ಟು

ನಾನು ಈ ದೇಶದ ವಿದ್ಯಾರ್ಥಿಗಳ ಜೊತೆಗಿದ್ದೇನೆ. ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಬೆಂಬಲಿಸುತ್ತೇನೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಸುಧಾರಣೆಗಳ ಬೇಡಿಕೆಗೆ ನಾನು ಬದ್ಧನಾಗಿದ್ದೇನೆ. ಸೋನಮ್ ವಾಂಗ್ಚುಕ್, ನೇಹಾ ಮತ್ತು ಅಮೀನ್ ಮತ್ತು ಮನೀಶ್ ಜೊತೆಗಿದ್ದೇನೆ" ಎಂದು ದಿಯಾ ಮಿರ್ಜಾ ಬರೆದುಕೊಂಡಿದ್ದಾರೆ.

ಗಾಯಕ ದಿಲ್ಜಿತ್ ದೋಸಾಂಜ್ ಹೀಗಂದ್ರು

ಆರಂಭದಲ್ಲಿ ಈ ಪ್ರತಿಭಟನೆಯಿಂದ ದೂರವಿದ್ದ ಪಂಜಾಬಿ ನಟ ಹಾಗೂ ಗಾಯಕ ದಿಲ್ಜಿತ್ ದೋಸಾಂಜ್, ಮಂಗಳವಾರ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿದ್ದಾರೆ.ಏನೆಲ್ಲಾ ನಡೆದಿದೆಯೋ ಅದು ಅತ್ಯಂತ ಬೇಸರ ತಂದಿದೆ. ವಿದ್ಯಾರ್ಥಿಗಳನ್ನು ಈ ರೀತಿ ನಡೆಸಿಕೊಳ್ಳಬಾರದು" ಎಂದು ಸಿಂಗರ್ ಮಂಗಳವಾರ ಬೆಳಿಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಧಿಕಾರಿಗಳು ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಆಲಿಸಬೇಕು ಎಂದು ಒತ್ತಾಯಿಸಿದ್ದಾರೆ. ರೈತರ ಹೋರಾಟದ ಸಮಯದಲ್ಲಿ ಮಾತನಾಡಿದ್ದಕ್ಕೆ ದೇಶದ್ರೋಹಿ ಎಂದು ಕರೆಯಲಾಗಿತ್ತು. ಇದರಿಂದ ನಾನು ಸಾಕಷ್ಟು ತೊಂದರೆ ಅನುಭವಿಸಿದ್ದೆ. ಈಗ ಮತ್ತೆ ನನ್ನನ್ನು ದೇಶದ್ರೋಹಿ ಎಂದು ಕರೆಯಬಹುದು ಎಂದು ನಟ ಹಾಗೂ ಗಾಯಕ ದಿಲ್ಜಿತ್ ದೋಸಾಂಜ್ ಅಸಮಾಧಾನ ವ್ಯಕ್ತಪಡಿಸಿದರು.

ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ಬೆಂಬಲ

ನಟ ರಿತೇಶ್ ದೇಶ್‌ಮುಖ್ ಮತ್ತು ನಟಿ ಜೆನಿಲಿಯಾ ಡಿಸೋಜಾ ಕೂಡ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದಾರೆ.
ನಾವು ನಮ್ಮ ದೇಶದ ಯುವಜನತೆಯ ಪರವಾಗಿ ನಿಲ್ಲುತ್ತೇವೆ. ಅವರ ಧ್ವನಿಯನ್ನು ಯಾವುದೇ ಭಯವಿಲ್ಲದೇ ಸ್ಪಷ್ಟವಾಗಿ ಮತ್ತು ಗಟ್ಟಿಯಾಗಿ ಆಲಿಸಬೇಕಾಗಿದೆ. ಅವರು ನಮ್ಮ ಪ್ರಜಾಪ್ರಭುತ್ವದ ಸ್ಪಂದನ ಮತ್ತು ದೇಶದ ಭವಿಷ್ಯದ ನಿಜವಾದ ಶಿಲ್ಪಿಗಳು. ನಾವು ಅವರ ಮನವಿಯನ್ನು ಆಲಿಸೋಣ, ಬೆಂಬಲಿಸೋಣ ಮತ್ತು ಸಶಕ್ತಗೊಳಿಸೋಣ. ನಮ್ಮ ಯುವಜನರ ಶಕ್ತಿ, ಧೈರ್ಯ ಮತ್ತು ಕನಸುಗಳು ನಾವು ನಿರ್ಮಿಸಲು ಬಯಸುವ ಭಾರತವನ್ನು ರೂಪಿಸುತ್ತವೆ ಎಂದು ಎಕ್ಸ್​​ನಲ್ಲಿ ಬರೆದುಕೊಂಡಿದ್ದಾರೆ.

ಹಿರಿಯ ನಟಿ ಶಬಾನಾ ಅಜ್ಮಿ ಮತ್ತು ನಟ-ನಿರ್ದೇಶಕ ಪ್ರಕಾಶ್ ರಾಜ್ ಬೆಂಬಲ

ಇಲ್ಲಿಗೆ ಬಂದಿರುವ ನಾವೆಲ್ಲರೂ ನಮ್ಮ ದೇಶದ ಸಂವಿಧಾನ ನಮಗೆ ನೀಡಿದ ಹಕ್ಕನ್ನು ಚಲಾಯಿಸಲು, ಶಾಂತಿಯುತ ಪ್ರತಿಭಟನೆಗಾಗಿ ಬಂದಿದ್ದೇವೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುವುದು ಹೇಗೆ ಎಂಬುದನ್ನು ಮಹಾತ್ಮ ಗಾಂಧೀಜಿಯವರು ನಮಗೆ ಕಲಿಸಿಕೊಟ್ಟಿದ್ದಾರೆ, ಅದೇ ಅಡಿಪಾಯದ ಮೇಲೆ ನಾವು ಇಲ್ಲಿದ್ದೇವೆ. ನಮಗೆ ಯಾವುದೇ ರೀತಿಯ ಹಿಂಸಾಚಾರವನ್ನು ಉಂಟುಮಾಡುವ ಉದ್ದೇಶವಿಲ್ಲ ಎಂದು ಶಬಾನಾ ಅಜ್ಮಿ ಹೇಳಿದರು

ಟಾಕ್ಸಿಕ್​ ಚೆಲುವೆ ಹೇಳಿದ್ದು ಹೀಗೆ

ನಟಿ ಹುಮಾ ಖುರೇಷಿ ಮಾತನಾಡಿ, ಪ್ರತಿಭಟನೆಯ ದೃಶ್ಯಗಳು ತಮ್ಮ ಮನಸ್ಸಿನಲ್ಲಿ "ಬಹಳ ದಿನಗಳ ಕಾಲ ಉಳಿಯುತ್ತವೆ" ಎಂದಿದ್ದಾರೆ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ "ಇಷ್ಟೊಂದು ಕ್ರೂರ ಬಲಪ್ರಯೋಗ ಮತ್ತು ಲಾಠಿಚಾರ್ಜ್" ಮಾಡಿದ್ದನ್ನು ಕಂಡು ತಮಗೆ ತೀವ್ರ ಬೇಸರವಾಗಿದೆ ಎಂದು ಹೇಳಿದ್ದಾರೆ.

ಯಾರು ಏನಂದ್ರು

ಚಿತ್ರಕಥೆಗಾರ್ತಿ ಸುತಪಾ ಸಿಕ್ದರ್ ಬರೆಯುತ್ತಾ, ಪ್ರತಿಭಟನಾಕಾರರಲ್ಲಿ ಹೆಚ್ಚಿನವರು "ಖಾತರಿಯಲ್ಲಿ ₹20 ಇಟ್ಟುಕೊಂಡು" ಉತ್ತರದಾಯಿತ್ವವನ್ನು ಕೇಳಲು ಪೂರ್ಣ ಭರವಸೆಯೊಂದಿಗೆ ಬಂದಿದ್ದ ವಿದ್ಯಾರ್ಥಿಗಳು. ಅವರ್ಯಾರೂ "ಶ್ರೀಮಂತ, ಪ್ರಭಾವಿ ಅಪ್ಪಂದಿರ ಮಕ್ಕಳಲ್ಲ ಮತ್ತು ಅವರನ್ನು ರಕ್ಷಿಸಲು ಯಾರೂ ಬರಲಿಲ್ಲ. ಬಸ್, ರೈಲು, ಪ್ರವೇಶಾತಿ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಂತಹ ಸಮಸ್ಯೆಗಳಿಗೆ ಕಾಯುತ್ತಾ ಜೀವನಪೂರ್ತಿ ಹೋರಾಡಿದಂತೆಯೇ, ಇಲ್ಲೂ ಅವರು ತಮ್ಮ ಹಕ್ಕಿಗಾಗಿ ಗಟ್ಟಿಯಾಗಿ ನಿಂತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ನಟಿ ಮತ್ತು ಚಲನಚಿತ್ರ ನಿರ್ಮಾಪಕಿ ನಂದಿತಾ ದಾಸ್ ನಟಿ ಭೂಮಿ ಪೆಡ್ನೇಕರ್ ,ಸೋನಿ ರಜ್ದಾನ್, ಜೀನತ್ ಅಮಾನ್, ಅಭಯ್ ಡಿಯೋಲ್, ಅದಿತಿ ರಾಯ್​​ ನಾಸಿರುದ್ದೀನ್ ಶಾ, ರತ್ನ ಪಾಠಕ್ ಶಾ, ಓಮಿ ವೈದ್ಯ ಸೇರಿದಂತೆ ಇತರ ಪ್ರಮುಖರು ಈ ಚಳವಳಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದು, ಶಾಂತಿಯುತ ಪ್ರತಿಭಟನೆಗೆ ಮನವಿ ಮಾಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net