ಬ್ರಿಟನ್​, ಕೆನಡಾ, ಆಸ್ಟ್ರೇಲಿಯಾ... ಪೇಪರ್​ ಬದಲಿಗೆ ಪಾಲಿಮರ್​ ನೋಟು ಬಳಸುತ್ತಿರುವ ರಾಷ್ಟ್ರಗಳ ಪಟ್ಟಿ ಇಲ್ಲಿದೆ

ಪಾಲಿಮರ್​ ನೋಟುಗಳು
ಪಾಲಿಮರ್​ ನೋಟುಗಳು
Published on

ಪ್ರಮುಖ ಮುಖ್ಯಾಂಶಗಳು

  • ಮಹತ್ವದ ನಿರ್ಧಾರಕ್ಕೆ ಮುಂದಾಗಿರುವ ಆರ್​ಬಿಐ
  • ಪ್ರಸ್ತುತ ಚಲಾವಣೆಯಲ್ಲಿರುವ ಪೇಪರ್​ ನೋಟುಗಳ ಬದಲಿಗೆ ಪಾಲಿಮರ್ ನೋಟುಗಳು ಶೀಘ್ರದಲ್ಲೇ ಚಲಾವಣೆಗೆ
  • ಪ್ರಸ್ತುತ ಯಾವ ರಾಷ್ಟ್ರಗಳಲ್ಲಿ ಈ ಪಾಲಿಮರ್​ ನೋಟುಗಳು ಚಲಾವಣೆಯಲ್ಲಿದೆ?
Polymer Notes: ಭಾರತೀಯ ರಿಸರ್ವ್ ಬ್ಯಾಂಕ್ (RBI) ಶೀಘ್ರದಲ್ಲೇ ದೇಶದಲ್ಲಿ ಪಾಲಿಮರ್ (ಪ್ಲಾಸ್ಟಿಕ್) ಕರೆನ್ಸಿ ನೋಟುಗಳನ್ನು ಪರಿಚಯಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ. ಹೀಗಿರುವಾಗಲೇ ಹಲವರಿಗೆ ಈ ಪ್ಲಾಸ್ಟಿಕ್​ ನೋಟುಗಳು ಭಾರತದಲ್ಲೂ ಬಂದರೆ ಹೇಗೆ? ಯಾವೆಲ್ಲ ರಾಷ್ಟ್ರಗಳು ಇಂತಹ ಕರೆನ್ಸಿಯನ್ನು ಚಲಾವಣೆಗೆ ತಂದಿವೆ ಎಂಬ ಕುತೂಹಲಕಾರಿ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
ರಾಷ್ಟ್ರದಲ್ಲಿ ಕರೆನ್ಸಿ ಬಳಕೆಯನ್ನು ಹೆಚ್ಚಿಸುವುದು, ನಕಲಿ ನೋಟುಗಳ ಸಮಸ್ಯೆಯನ್ನು ಹತೋಟಿಗೆ ತರುವುದು ಮತ್ತು ನೋಟುಗಳ ಜೀವಿತಾವಧಿಯನ್ನು ಹೆಚ್ಚಿಸುವ ಉದ್ದೇಶಗಳೊಂದಿಗೆ ಶೀಘ್ರದಲ್ಲೇ ಪಾಲಿಮರ್ ನೋಟುಗಳನ್ನು ಚಲಾವಣೆಗೆ ತರಲು ಆರ್‌ಬಿಐ ತನ್ನ ಪ್ರಯತ್ನಗಳನ್ನು ಚುರುಕುಗೊಳಿಸಿದೆ. ಆರಂಭದಲ್ಲಿ, ಆರ್​ಬಿಐ ಪೈಲಟ್ ಯೋಜನೆಯಾಗಿ 10 ಮತ್ತು 20 ಮುಖಬೆಲೆಯ ನೋಟುಗಳನ್ನು ಪರಿಚಯಿಸಲಿದ್ದು, 2027ರ ವೇಳೆಗೆ ಸಂಪೂರ್ಣವಾಗಿ ಪಾಲಿಮರ್ ನೋಟುಗಳನ್ನು ಪರಿಚಯಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಸಾಮಾನ್ಯ ಕಾಗದದ ನೋಟುಗಳಿಗೆ ಹೋಲಿಸಿದರೆ ಪಾಲಿಮರ್ ನೋಟುಗಳು ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿರಲಿವೆ ಎನ್ನಲಾಗಿದೆ. ಇವು ವಾಟರ್​ಪ್ರೂಫ್​, ಹರಿದುಹೋಗುವ ಸಾಧ್ಯತೆ ಕಡಿಮೆ. ಅಂತೆಯೇ, ಈ ನೋಟುಗಳನ್ನು ಸುಧಾರಿತ ಭದ್ರತಾ ಕ್ರಮಗಳೊಂದಿಗೆ ಮಾಡಲಾಗಿರುವುದರಿಂದ, ನಕಲಿ ನೋಟುಗಳನ್ನು ಪರಿಶೀಲಿಸುವ ಹೆಚ್ಚಿನ ಮಟ್ಟದ ಸಾಧ್ಯತೆಯಿದೆ. ನೋಟುಗಳ ಮುದ್ರಣ ಮತ್ತು ವಿನಿಮಯ ವೆಚ್ಚವೂ ಕಡಿಮೆಯಾಗುವ ಭರವಸೆಯನ್ನು ನೀಡಲಾಗಿದೆ.
ಪ್ರಸ್ತುತ, ಇಂತಹ ನೋಟುಗಳು ಆಸ್ಟ್ರೇಲಿಯಾ, ಕೆನಡಾ, ಯುಕೆ ಸೇರಿ ಅನೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಪಾಲಿಮರ್ ನೋಟುಗಳ ಪ್ರಯೋಗಗಳನ್ನು ಭಾರತದಲ್ಲಿ ಈ ಹಿಂದೆ ಸೀಮಿತ ಪ್ರಮಾಣದಲ್ಲಿ ನಡೆಸಲಾಗಿದ್ದರೂ, ಇದುವರೆಗೆ ರಾಷ್ಟ್ರವ್ಯಾಪಿ ಯಶಸ್ವಿಯಾಗಿ ಜಾರಿಗೊಳಿಸಿಲ್ಲ. ಈಗ ಪ್ರಸ್ತಾವನೆ ಆಗಿರುವಂತೆ ಏನಾದರೂ ನೋಟುಗಳು ಬಂದರೆ ದೇಶದಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗಳು ಆಗೋದಂತು ಅಕ್ಷರಶಃ ಸತ್ಯ.

ಪ್ರಸ್ತುತ ಯಾವೆಲ್ಲ ರಾಷ್ಟ್ರಗಳಲ್ಲಿ ಚಲಾವಣೆ?

1. ಆಸ್ಟ್ರೇಲಿಯಾ
2. ಕೆನಡಾ
3. ನ್ಯೂಜಿಲೆಂಡ್
4. ರೊಮೇನಿಯಾ
5. ವಿಯೆಟ್ನಾಂ
6. ಬ್ರೂನಿ
7. ಪಪುವಾ ನ್ಯೂ ಜಿನೆವಾ
8. ಮಾಲ್ಡೀವ್ಸ್
9. ಮಾರಿಟಾನಿಯ
10. ನಿಕರಾಗುವಾ
11. ವನವಾಟು
12. ಪೂರ್ವ ಕೆರಿಬಿಯನ್ ರಾಜ್ಯಗಳು
13. ಯುನೈಟೆಡ್ ಕಿಂಗ್ಡಮ್
14. ಬಾರ್ಬಡಸ್
15. ಓಮನ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net