ಸ್ವಾಮಿ ಅಭೇದಾನಂದರು ಹೀಗೆ ಹೇಳುತ್ತಾರೆ, ಸ್ವಾಮಿ ವಿವೇಕಾನಂದರು ತೀರಿ ಹೋಗಿಲ್ಲ, ಅವರು ಈಗಲೂ ಎಂದೆಂದಿಗೂ ನಮ್ಮೊಡನಿದ್ದಾರೆ. ಅವರು ಇಡೀ ಜಗತ್ತಿಗೆ ಹಿರಿಯಣ್ಣ. ಸ್ವಾಮಿ ವಿವೇಕಾನಂದರು ಕೇವಲ ನಮ್ಮ ಹೃದಯದಲ್ಲಿ ಮಾತ್ರ ನೆಲೆಸಿರುವುದಲ್ಲ, ಅವರು ಎಲ್ಲೆಲ್ಲಿಯೂ ನೆಲೆಸಿದ್ದಾರೆ- ಧಾರ್ವಿುಕ ಕ್ಷೇತ್ರದಲ್ಲಿ, ಸಾಮಾಜಿಕ ವ್ಯವಸ್ಥೆಯಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ರಾಜಕೀಯ ವಲಯದಲ್ಲಿ, ವಿಶ್ವ ಚಿಂತನೆಯಲ್ಲಿ, ಎಲ್ಲೆಲ್ಲಿಯೂ ಅವರು ತಮ್ಮ ಮುದ್ರೆಯನ್ನು ಒತ್ತಿ ಹೋಗಿದ್ದಾರೆ. ಸರ್ವತಹಃ ಪಾಣಿಪಾದಂ ಸರ್ವತೋಕ್ಷಿ ಶಿರೋಮುಖಂ ಆಗಿ ಅವರು ಎಲ್ಲೆಲ್ಲಿಯೂ ವಾಸಿಸುತ್ತಿದ್ದಾರೆ.