ಕೆಲವೇ ಕ್ಷಣಗಳಲ್ಲಿ ಹೋಯ್ತು ಮಹಿಳೆಯ ಜೀವ! ಇನ್ಯಾವತ್ತು ಲಿಫ್ಟ್​ ಹತ್ತೋದೇ ಬೇಡ ಎನ್ನುವಂತಿದೆ ದುರಂತದ ಘೋರ ದೃಶ್ಯ

ಲಿಫ್ಟ್ ದುರಂತದ ದೃಶ್ಯ
ಲಿಫ್ಟ್ ದುರಂತದ ದೃಶ್ಯ
Published on

ಪ್ರಮುಖ ಮುಖ್ಯಾಂಶಗಳು

  • ಓಪನ್ ಆಗಿದ್ದ ಲಿಫ್ಟ್‌ನ ಬಾಗಿಲು ಕ್ಲೋಸ್​ ಆಗುವ ಮುನ್ನವೇ ದಿಢೀರ್​ ಕುಸಿತ
  • ಲಿಫ್ಟ್​ ಕೆಳಗೆ ಚಲಿಸಿದ್ದರಿಂದ ಗಾಬರಿಗೊಂಡ ಮಹಿಳೆಯ ಹೊರಬರಲು ಯತ್ನಿಸಿದಾಗ ದುರಂತ
  • ತಲೆ ಸಿಲುಕಿ ಸಹಾಯಕ್ಕಾಗಿ ಕೋರಿದರು ತಕ್ಷಣಕ್ಕೆ ಸಿಗಲಿಲ್ಲ ಸಹಾಯ
ಆಂಧ್ರಪ್ರದೇಶ: ಓಪನ್ ಆಗಿದ್ದ ಲಿಫ್ಟ್‌ನ ಬಾಗಿಲು ಕ್ಲೋಸ್​ ಆಗುವ ಮುನ್ನವೇ ದಿಢೀರ್​ ಕುಸಿದ ಕಾರಣ ಮಹಿಳೆಯೊಬ್ಬರು ದಾರುಣವಾಗಿ ಸಾವಿಗೀಡಾದ ಘಟನೆ ಪ್ರಕಾಶಂ ಜಿಲ್ಲೆಯ ಅಪಾರ್ಟ್​ಮೆಂಟ್​ನಲ್ಲಿ ವರದಿಯಾಗಿದೆ.
ಮೃತ ಮಹಿಳೆಯನ್ನು ವನಿತಾ (50) ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ಸೇರಿಸುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ವರದಿಗಳ ಪ್ರಕಾರ, ಮಗಳು ಮತ್ತು ಮೊಮ್ಮಕ್ಕಳೊಂದಿಗೆ ಲಿಫ್ಟ್‌ನಲ್ಲಿ ಬಂದ ವನಿತಾ, ಪುತ್ರಿ ಮತ್ತು ಮೊಮ್ಮಗನ ಬಳಿಕ ಹೊರಬರಲು ಮುಂದಾದಾಗ ಲಿಫ್ಟ್​ ದಿಢೀರ್​ ಡೋರ್​ ಮುಚ್ಚದೆಯೇ ಕೆಳಗೆ ಕುಸಿದಿದೆ. ಇದಕ್ಕಿದ್ದಂತೆ ಲಿಫ್ಟ್​ ಕೆಳಗೆ ಚಲಿಸಿದ್ದರಿಂದ ಗಾಬರಿಗೊಂಡ ಮಹಿಳೆಯ ಹೊರಗೆ ಬರಲು ಯತ್ನಿಸಿದ್ದಾರೆ. ಈ ವೇಳೆ ಅವರ ಕತ್ತು ಹೊರಗೆ ಸಿಲುಕಿ, ದಾರುಣವಾಗಿ ಸಾವನ್ನಪ್ಪಿದ್ದಾರೆ.
ವನಿತಾ ಮತ್ತು ಅವರ ಪುತ್ರಿ ಸಹಾಯಕ್ಕಾಗಿ ಚೀರಾಡಿದ ಬೆನ್ನಲ್ಲೇ ಅಪಾರ್ಟ್​ಮೆಂಟ್​ನ ನಿವಾಸಿಗಳು ಮತ್ತು ಇತರರು ತಕ್ಷಣ ಸ್ಥಳಕ್ಕೆ ಓಡಿಬಂದು, ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ತುರ್ತು ಚಿಕಿತ್ಸೆಗೆಂದು ಆಸ್ಪತ್ರೆಗೆ ರವಾನಿಸಿದರು. ಆದರೆ, ಅದಾಗಲೇ ಉಸಿರು ಚೆಲ್ಲಿದ್ದ ವನಿತಾ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಈ ಘಟನೆಯು ಲಿಫ್ಟ್ ಸುರಕ್ಷತೆ, ನಿರ್ವಹಣೆ ಮತ್ತು ಅಪಾರ್ಟ್‌ಮೆಂಟ್ ಕಟ್ಟಡಗಳಲ್ಲಿನ ಸುರಕ್ಷತಾ ಕಾರ್ಯವಿಧಾನಗಳ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.
ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಲಿಫ್ಟ್​ಗೆ ಅಗತ್ಯವಿರುವ ಎಲ್ಲಾ ಸುರಕ್ಷತಾ ಕ್ರಮಗಳಿಗೆ ಮತ್ತು ನಿರ್ವಹಣೆ ತಪಾಸಣೆಗೆ ಒಳಪಟ್ಟಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಯಾವುದೇ ನಿರ್ಲಕ್ಷ್ಯ ಅಥವಾ ತಾಂತ್ರಿಕ ವೈಫಲ್ಯವು ಅಪಘಾತಕ್ಕೆ ಕಾರಣವೇ ಎಂಬುದನ್ನೂ ತನಿಖೆ ಮಾಡಲಾಗುತ್ತಿದ್ದು, ಸಾಬೀತಾದರೆ ಅಪಾರ್ಟ್​ಮೆಂಟ್​ ಮಾಲೀಕರು ಅಥವಾ ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net