ವಿಜಯ್ ಸರ್ಕಾರ ರಚಿಸಲಿ; ನಾವು ತಡೆಯಲ್ಲ, 6 ತಿಂಗಳವರೆಗೆ ಕಾಯುತ್ತೇವೆ; ಎಂ.ಕೆ.ಸ್ಟಾಲಿನ್ | M K Stalin

ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್
ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್
Published on
ಚೆನ್ನೈ: ತಮಿಳುನಾಡಿನಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದೇ ಸರ್ಕಾರ ರಚಿಸಲು ಸೂಪರ್ ಸ್ಟಾರ್ ದಳಪತಿ ವಿಜಯ್ ಒದ್ದಾಡುತ್ತಿರುವ ನಡುವೆ, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್(M K Stalin)​, ಟಿವಿಕೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಅವರು ಸರ್ಕಾರ ರಚಿಸಲಿ, ನಾವು ತಡೆಯಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಚುನಾವಣೆಯಲ್ಲಿ ಟಿವಿಕೆ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ವಿಜಯ್ ಅವರ ಆರು ತಿಂಗಳ ಆಡಳಿತವನ್ನು ನೋಡಿದ ನಂತರವೇ ತಾವು ಮಾತನಾಡುವುದಾಗಿ ಹೇಳಿದ್ದು, ತಮ್ಮ ಪಕ್ಷವು ಮತ್ತೆ ಚುನಾವಣೆಗೆ ಹೋಗುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಟಿವಿಕೆ ಮಹಿಳೆಯರಿಗೆ 2,500 ರೂ. ನೀಡುವುದು ಅಸಾಧ್ಯ ಎಂದಿರುವ ಅವರು, ಹಿಂದೆ ನೀಡಿದ್ದಂತೆ 1000 ರೂ. ನೀಡಿ, ಡಿಎಂಕೆ ತಂದ ಕಲ್ಯಾಣ ಯೋಜನೆಗಳನ್ನು ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.
ಏತನ್ಮಧ್ಯೆ, ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಸಂದಿಗ್ಧತೆ ಇದೆ. ಸರ್ಕಾರ ರಚನೆಗೆ ಮ್ಯಾಜಿಕ್ ಫಿಗರ್ 118. ಆದಾಗ್ಯೂ, ಪ್ರಸ್ತುತ ಸಮೀಕರಣಗಳ ಪ್ರಕಾರ, ಟಿವಿಕೆ ಬಲ 108 ಸ್ಥಾನಗಳು. ವಿಜಯ್ ಎರಡು ಸ್ಥಾನಗಳನ್ನು ಗೆದ್ದ ಕಾರಣ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಆದ್ದರಿಂದ, ಟಿವಿಕೆ ಬಲವು 107 ಕುಸಿಯಲಿದೆ. ಕಾಂಗ್ರೆಸ್​​​ನ ಐವರು ಶಾಸಕರು ಬೆಂಬಲಿಸಿದ್ದು, 112ಕ್ಕೆ ಆಗಿದೆ. ಪಕ್ಷಕ್ಕೆ ಇನ್ನೂ 6 ಶಾಸಕರ ಬೆಂಬಲ ಬೇಕಾಗುತ್ತದೆ.
ಸರ್ಕಾರ ರಚಿಸಲು ಹಕ್ಕು ಮಂಡಿಸಿರುವ ವಿಜಯ್​ಗೆ ರಾಜ್ಯಪಾಲರು ಹಸಿರು ನಿಶಾನೆ ತೋರಿಸಿಲ್ಲ. ಪೂರ್ಣ ಬಹುಮತ ತೋರಿಸಿದ ಬಳಿಕವೇ ಸರ್ಕಾರ ರಚನೆಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಇಂದು ನಡೆಯಬೇಕಿದ್ದ ಪ್ರಮಾಣವಚನ ಕಾರ್ಯಕ್ರಮ ಮುಂದೂಡಲಾಗಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net