'ವಿಜಯ್ ಹೊಸ​ ಸರ್ಕಾರ ರಚಿಸಲಿ..6 ತಿಂಗಳವರೆಗೂ ನಾವೇನು ಮಾತನಾಡೋದಿಲ್ಲ, ತೊಂದ್ರೆ ಕೊಡಲ್ಲ': M K Stalin

M K Stalin
M K Stalin
Published on

ಪ್ರಮುಖ ಮುಖ್ಯಾಂಶಗಳು

  • ವಿಜಯ್​ ಸರ್ಕಾರ ರಚನೆ ಮಾಡಲಿ, ಆರು ತಿಂಗಳ ನಂತರ ಮಾತಾಡ್ತೇವೆ: ಎಂಕೆ ಸ್ಟಾಲಿನ್​
  • ವರ್ಷಕ್ಕೆ ಆರು ಸಿಲಿಂಡರ್ ಪಡಿತರ ಚೀಟಿ ಹೊಂದಿದವರಿಗೆ​ ಪೂರೈಕೆ ಮಾಡುವುದು ಕಷ್ಟ ಎನಿಸುತ್ತದೆ
  • ನಮ್ಮ ಡಿಎಂಕೆಯ ಆಡಳಿತದ ಅವಧಿಯಲ್ಲಿ ಜಾರಿ ಮಾಡಿದ್ದ ಯೋಜನೆ ಮುಂದುವರೆಸಬೇಕು
ಚೆನ್ನೈ: 'ವಿಜಯ್​ ನೇತೃತ್ವದ ಹೊಸ ಸರ್ಕಾರಕ್ಕೆ 6 ತಿಂಗಳು ಯಾವುದೇ ತೊಂದರೆ ಕೊಡಲ್ಲ. ಅವರು ಸರ್ಕಾರ ರಚನೆ ಮಾಡಲಿ ನಾವು ಅವರ ಆಡಳಿತ ಕಾರ್ಯವೈಖರಿಯನ್ನು ಸುಮ್ಮನೇ ಗಮನಿಸುತ್ತೇವೆ' ಹೀಗೆಂದು ಪರೋಕ್ಷವಾಗಿ ಟಿವಿಕೆ ಸರ್ಕಾರಕ್ಕೆ ವಾರ್ನಿಂಗ್​ ಕೊಟ್ಟಿದ್ದು ಮಾಜಿ ಸಿಎಂ ಎಂಕೆ ಸ್ಟಾಲಿನ್​
ತಮಿಳುನಾಡಿನಲ್ಲಿ ಮೊದಲ ಬಾರಿ ಚುನಾವಣೆಗೆ ನಿಂತು ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್​​ ಭರ್ಜರಿಯಾಗಿ ಗೆಲುವು ಕಂಡಿದ್ದಾರೆ. 15 ವರ್ಷದ ನಂತರ ಹೊಸತನದತ್ತ ಮುಖ ಮಾಡಿದ ತಮಿಳಿಗರು ವಿಜಯ್​​ ಮಾಡುವ ಕಮಾಲ್​ನತ್ತ ನೋಡುತ್ತಿದ್ದಾರೆ. ಈ ಮಧ್ಯೆ ಹೀನಾಯವಾಗಿ ಸೋಲು ಕಂಡ ಡಿಎಂಕೆ, ಎಚ್ಚರಿಕೆ ಜೊತೆಗೆ ಟಿವಿಕೆಗೆ ಗಡುವನ್ನು ಕೊಟ್ಟಿದೆ.

ಸ್ಟಾಲಿನ್​ ಏನಂದ್ರು?

ಖಾಸಗಿ ಮಾಧ್ಯಮದ ಜೊತೆಗೆ ಮಾತನಾಡಿರುವ ಎಂಕೆ ಸ್ಟಾಲಿನ್​ ಅವರು, ಮತ್ತೊಂದು ಚುನಾವಣೆ ನಡೆಸಬೇಕು ಎನ್ನುವ ಆಸಕ್ತಿ ಇಲ್ಲ. ಡಿಎಂಕೆ ಆಡಳಿತದಲ್ಲಿದ್ದ ಕಾಲದಲ್ಲಿ ಜಾರಿ ಮಾಡಲಾದ ಹಲವಾರು ಮಹತ್ವದ ಯೋಜನೆಯನ್ನು ಕಾರ್ಯರೂಪಕ್ಕೆ ಟಿವಿಕೆ ತರುತ್ತದೆ ಎಂದು ನಾನು ಭಾವಿಸಿದ್ದೇನೆ. ಅಲ್ಲದೇ ಅವರು ತಮ್ಮ ಪ್ರಣಾಳಿಕೆಯಲ್ಲಿ ಜನರಿಗೆ ಕೊಟ್ಟಿರುವ ಭರವಸೆಯನ್ನು ಈಡೇರಿಸುತ್ತಾರೆಯೇ ಎನ್ನುವುದನ್ನು ಆರು ತಿಂಗಳ ಕಾಲ ಕಂಡು ನಂತರ ಮುಂದೇನು ಮಾಡಬೇಕೋ ಅದನ್ನು ಕಾರ್ಯ ರೂಪಕ್ಕೆ ತರುತ್ತೇವೆ ಎಂದು ಪರೋಕ್ಷವಾಗಿ ಸ್ಟಾಲಿನ್​ ಎಚ್ಚರಿಕೆ ಕೊಟ್ಟಿದ್ದಾರೆ .

ಏನೆಲ್ಲ ಭರವಸೆ ಕಾರ್ಯರೂಪಕ್ಕೆ ತರ್ತಾರೋ ನೋಡ್ತೀವಿ

ಈ ಟಿವಿಕೆಯ ಸರ್ಕಾರವು ಶಾಲಾ ಮಕ್ಕಳಿಗೆ ಉಚಿತ ಆಹಾರ ವಿತರಣೆ ಮಾಡುವ ಯೋಜನೆನ್ನು ಮುಂದುವರೆಸಬೇಕು. ಕುಟುಂಬದ ಮುಖ್ಯಸ್ಥರಾದ ಮಹಿಳೆಯರಿಗೆ ನೀಡುತ್ತಿದ್ದ 1,000 ರೂ. ಭತ್ಯೆಯನ್ನು ನೀಡುವುದು ಮುಂದುವರೆಸಬೇಕು ಎಂದು ಹೇಳಿದರು
ವಿಜಯ್​ ತಮ್ಮ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ 2,500 ರೂ. ನೆರವು ನೀಡೋದಾಗಿ ವಿಜಯ್​​​ ಭರವಸೆ ಕೊಟ್ಟಿದ್ದಾರೆ. ಅದು ಕಾರ್ಯ ರೂಪಕ್ಕೆ ತರುತ್ತಾರೆಯೇ ಎನ್ಮುವುದೇ ಅನುಮಾನ. ಹೀಗಾಗಿ ಕನಿಷ್ಠ ನಮ್ಮ ಸರ್ಕಾರ ಜಾರಿಗೆ ತಂದಿದ್ದ ಕಲೈಗ್ನರ್ ಮಗಲಿರ್ ಉರಿಮೈ ತೊಗೈ ಅನ್ನು ಅಳವಡಿಕೆ ಮಾಡಿಕೊಂಡು. ಇದರಡಿ 1,000 ರೂ. ನೀಡುತ್ತಿದ್ದೆವು. ಇದನ್ನಾ ದರೂ ಕೊಡಲಿ ಎಂದರು.

ಎಲ್​ಪಿಜಿ ನೀಡೋಕೆ ಅಸಾಧ್ಯ

ನಮಗೆ ಯಾವುದು ಸಾಧ್ಯವೋ ಆ ಯೋಜನೆಗಳನ್ನು ಮಾತ್ರ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದೇವೆ. ಟಿವಿಕೆ ಪಡಿತರ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಆರು ಉಚಿತ ಎಲ್‌ಪಿಜಿ ನೀಡುತ್ತೇವೆ ಎಂದಿದೆ. ಆದರೆ, ಈ ಯೋಜನೆಯನ್ನು ತರುವುದು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಲ್ಲ. ಅಕಸ್ಮಾತ್​ ಕೊಟ್ಟರೆ ಖಂಡಿತ ಸಂತೋಷ ಎಂದರು.
2021ರಲ್ಲಿ ನಾವು ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಲ್ಲಿ ಶೇ.90ರಷ್ಟನ್ನು ಈಡೇರಿಸಿದ್ದೇವೆ. ನೀಟ್​ ರದ್ಧತಿ ನಮ್ಮಿಂದ ಸಾಧ್ಯವಾಗಲಿಲ್ಲ. ಏಕೆಂದರೆ ಇದು ಕೇಂದ್ರದ ನಿಯಂತ್ರಣದಲ್ಲಿದೆ ಎಂದು ಮಾಜಿ ಸಿಎಂ ಸ್ಟಾಲಿನ್​ ಮಾತನಾಡಿದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net