ಭಾರತ ಬಣಕ್ಕೆ ಪಾಠ; ಬಿಹಾರ ಸೋಲಿನ ಬಗ್ಗೆ ತಮಿಳುನಾಡು ಸಿಎಂ ಸ್ಟಾಲಿನ್​ ಹೇಳಿದ್ದೇನು..? Bihar Elections

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್
Published on
ಚೆನ್ನೈ: ಬಿಹಾರಯ ಚುನಾವಣೆಯ(Bihar Elections) ಫಲಿತಾಂಶವು ಭಾರತ ಮೈತ್ರಿಕೂಟಕ್ಕೆ ದೊಡ್ಡ ಪಾಠವಾಗಿದೆ. ಅಲ್ಲದೆ, ಚುನಾವಣಾ ಆಯೋಗದ (ECI) ದುಷ್ಕೃತ್ಯದಿಂದ ಎನ್​ಡಿಎ ಗೆದ್ದಿದೆ ಎಂದು ಶನಿವಾರ (ನ.15) ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ಟಾಲಿನ್​, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್​ರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ, ದೇಶದಲ್ಲಿ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಕುಸಿಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಡಿಎಂಕೆ ವಿರೋಧ ಪಕ್ಷದ ಭಾರತ ಬಣದ ಭಾಗವಾಗಿದೆ.

ಸ್ಟಾಲಿನ್ ಹೇಳಿದ್ದೇನು?

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ತಮಿಳುನಾಡು ಮುಂಖ್ಯಮಂತ್ರಿ ಸ್ಟಾಲಿನ್​, ಹಿರಿಯ ಜೆಡಿ(ಯು) ಮುಖ್ಯಸ್ಥ ನಿತೀಶ್ ಕುಮಾರ್ ಬಿಹಾರದ ಜನರ ವಿಶ್ವಾಸವನ್ನು ಗಳಿಸಿದ್ದಾರೆ. ವಿರೋಧ ಪಕ್ಷಗಳ ಮೈತ್ರಿಕೂಟದ ಒಟ್ಟಾರೆ ಕಳಪೆ ಪ್ರದರ್ಶನದ ಹೊರತಾಗಿಯೂ ಉತ್ಸಾಹಭರಿತ ಮತ್ತು ಶಕ್ತಿಯುತ ಪ್ರಚಾರವನ್ನು ಮುನ್ನಡೆಸಿದ್ದಕ್ಕಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್​ರನ್ನು ಶ್ಲಾಘಿಸಿದ್ದಾರೆ.
ಮುಂದುವರೆದು ಮಾತನಾಡಿದ ಸ್ಟಾಲಿನ್, ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆಯೋಗವು ಪಕ್ಷಪಾತಿ ಧೋರಣೆ ಮಾಡುತ್ತಿದೆ. ಇಸಿಐನ ಖ್ಯಾತಿ ಅತ್ಯಂತ ಕೆಳಮಟ್ಟದಲ್ಲಿದೆ. ಮತದಾರರು ಬಲವಾದ ಮತ್ತು ಹೆಚ್ಚು ನಿಷ್ಪಕ್ಷಪಾತ ಸಂಸ್ಥೆಗೆ ಅರ್ಹರರಾಗಿದ್ದಾರೆ. ಇಸಿಐನ ನಡವಳಿಕೆಯು ಸೋತ ಅಭ್ಯರ್ಥಿಗಳಲ್ಲಿಯೂ ಸಹ ವಿಶ್ವಾಸವನ್ನು ಪ್ರೇರೇಪಿಸಬೇಕು ಎಂದು ಹೇಳಿದರು.
ಚುನಾವಣಾ ಫಲಿತಾಂಶಗಳು ಕಲ್ಯಾಣ ಕಾರ್ಯಕ್ರಮಗಳು, ಸೈದ್ಧಾಂತಿಕ ಸ್ಪಷ್ಟತೆ ಮತ್ತು ಸ್ಥಿರವಾದ ಪ್ರಚಾರ ನಿರ್ವಹಣೆಯಿಂದ ರೂಪುಗೊಳ್ಳುತ್ತವೆ. ಮುಂಬರುವ ರಾಜಕೀಯ ಯುದ್ಧಗಳಿಗೆ ಸಿದ್ಧವಾಗುವಾಗ ಭಾರತ ಬಣವು ಈ ಎಲ್ಲಾ ಪಾಠಗಳನ್ನು ಕಲಿಯಬೇಕು ಎಂದು ಸ್ಟಾಲಿನ್​ ತಿಳಿಸಿದ್ದಾರೆ.

ಬಿಹಾರ ತೀರ್ಪು

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ೨೪೩ ಸ್ಥಾನಗಳಲ್ಲಿ ೨೦೨ ಸ್ಥಾನಗಳನ್ನು ಪಡೆದುಕೊಂಡಿದೆ. ಭಾರತೀಯ ಜನತಾ ಪಕ್ಷವು ೮೯ ಸ್ಥಾನಗಳನ್ನು ಪಡೆಯುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಮಿತ್ರ ಪಕ್ಷವಾದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ೮೫ ಸ್ಥಾನಗಳನ್ನು ಗೆದ್ದಿದೆ.
ಬಿಹಾರದಲ್ಲಿ ವಿರೋಧ ಪಕ್ಷ ಮಹಾಘಟಬಂಧನ್ ಪ್ರಭಾವ ಬೀರಲು ಹೆಣಗಾಡಿದೆ. ರಾಷ್ಟ್ರೀಯ ಜನತಾ ದಳ ಕೇವಲ 25 ಸ್ಥಾನಗಳನ್ನು ಗಳಿಸಿತು. ಆದರೆ ಕಾಂಗ್ರೆಸ್ ಕೇವಲ ಆರು ಸ್ಥಾನಗಳನ್ನು ಗಳಿಸಿತು. AIMIM ಐದು ಸ್ಥಾನಗಳನ್ನು ಗಳಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net