ಚಿರತೆ ಹಲ್ಲು ಪೆಂಡೆಂಟ್​ ಆಗಿ ಬಳಕೆ ದೃಢ; ರ‍್ಯಾಪರ್ ವೇದನ್ ವಿರುದ್ಧ ಹೊಸ ಚಾರ್ಜ್​ಶೀಟ್ ಸಲ್ಲಿಸಲು ಮುಂದಾದ ಅರಣ್ಯ ಇಲಾಖೆ | Rapper Vedan

ರ‍್ಯಾಪರ್ ವೇದಾನ್
ರ‍್ಯಾಪರ್ ವೇದಾನ್
Published on
ಕೊಚ್ಚಿ: ಮಲಯಾಳಂ ರ‍್ಯಾಪರ್ ವೇದಾನ್​ಗೆ(Rapper Vedan) ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣದಲ್ಲಿ ಹಿನ್ನಡೆಯಾಗಿದ್ದು, ಕಳೆದ ವರ್ಷ ಬಂಧನದ ನಂತರ ವಶಪಡಿಸಿಕೊಳ್ಳಲಾದ ಅವರ ಪೆಂಡೆಂಟ್‌ನಲ್ಲಿದ್ದ ಚಿರತೆಯ ಹಲ್ಲು ನಿಜವಾದದ್ದು ಎಂದು ಪ್ರಯೋಗಾಲಯ ಪರೀಕ್ಷೆಯು ದೃಢಪಡಿಸಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಅವರಿಂದ ವಶಪಡಿಸಿಕೊಂಡ ಹಲ್ಲಿನ ಮಾದರಿಯು ಕೋಲ್ಕತ್ತಾದ ಭಾರತೀಯ ಅರಣ್ಯ ಸಮೀಕ್ಷೆಯ ಪ್ರಾಣಿಶಾಸ್ತ್ರ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯ ನಂತರ ವನ್ಯಜೀವಿ ವಸ್ತುವನ್ನು ಅಕ್ರಮವಾಗಿ ಹೊಂದಿದ್ದಕ್ಕಾಗಿ ವೇದನ್ ವಿರುದ್ಧ ಹೊಸ ಆರೋಪಪಟ್ಟಿ ತಯಾರಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ತ್ರಿಪುನಿತುರದಲ್ಲಿ ಬಾಡಿಗೆ ಫ್ಲಾಟ್‌ವೊಂದರಲ್ಲಿ 6 ಗ್ರಾಂ ಗಾಂಜಾ ಹೊಂದಿದ್ದಕ್ಕಾಗಿ ಹಿಲ್ ಪ್ಯಾಲೇಸ್ ಪೊಲೀಸರು ಗಾಯಕ ಮತ್ತು ಅವರ ಎಂಟು ಸ್ನೇಹಿತರನ್ನು ಬಂಧಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಕೊಡನಾಡ್ ವಲಯದ ಅರಣ್ಯ ಅಧಿಕಾರಿಗಳು ವೇದನ್ ಪೆಂಡೆಂಟ್ ಆಗಿ ಧರಿಸಿದ್ದ ಚಿರತೆ ಹಲ್ಲನ್ನು ವಶಪಡಿಸಿಕೊಂಡರು.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ವೇದಾನ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ತನೆಗೆ ಶ್ರೀಲಂಕಾದ ಮೂಲದವರು ಚಿರತೆ ಹಲ್ಲನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವೇದನ್ ಹೇಳಿಕೊಂಡಿದ್ದಾರೆ. ಬಳಿಕ ಹಲ್ಲನ್ನು ಪ್ರಯೋಗ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಬಳಿಕ ಅವರಿಗೆ ಕೋರ್ಟ್ ಜಾಮೀನು ನೀಡಿತ್ತು.
ವೇದನ್ ಬಂಧನ ಮತ್ತು ನಂತರ ಕೊಡನಾಡ್ ರೇಂಜ್ ಆಫೀಸರ್ ಆರ್. ಅತೀಶ್ ಅವರು ಮಾಧ್ಯಮಗಳಿಗೆ ನೀಡಿದ ಸಂದರ್ಶನವು ಸರ್ಕಾರವನ್ನು, ವಿಶೇಷವಾಗಿ ಸಿಪಿಎಂ ಮತ್ತು ಸಿಪಿಐ ಕಾರ್ಯಕರ್ತರನ್ನು ಕೆರಳಿಸಿತು. ಅರಣ್ಯ ಸಚಿವ ಎ.ಕೆ. ಸಸೀಂದ್ರನ್ ಅವರು ಅಧಿಕಾರಿಯನ್ನು ಎರ್ನಾಕುಲಂ ಜಾಗೃತ ಘಟಕಕ್ಕೆ ವರ್ಗಾಯಿಸಲು ಆದೇಶಿಸಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net