Rahul Gandhi Berlin Trip | ರಾಹುಲ್ ವಿದೇಶ​ ಪ್ರವಾಸಕ್ಕೆ ಬಿಜೆಪಿ ಟೀಕೆ; ಪ್ರಧಾನಿ ಅರ್ಧದಷ್ಟು ಅವಧಿಯನ್ನು ದೇಶದ ಹೊರಗೆ ಕಳೆಯುತ್ತಾರೆ ಅಂದ್ರು ಪ್ರಿಯಾಂಕಾ ಗಾಂಧಿ

Rahul Gandhi Berlin Trip
Rahul Gandhi Berlin Trip
Published on
ದೆಹಲಿ: ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದ ಮಧ್ಯೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಜರ್ಮನಿಗೆ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗಿದ್ದು, ಇದು ಬಿಜೆಪಿ ನಾಯಕರು ಟೀಕೆಗೆ ಗುರಿಯಾಗಿತ್ತು, ಇದಕ್ಕೆ ತಿರುಗೇಟು ನೀಡಿರುವ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ನರೇಂದ್ರ ಮೋದಿ ವಿದೇಶಗಳಿಗೆ ಭೇಟಿ ನೀಡುವುದನ್ನು ಉಲ್ಲೇಖಿಸಿದ್ದಾರೆ.
ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ಮೋದಿ ತಮ್ಮ ಕೆಲಸದ ಸಮಯದ ಅರ್ಧದಷ್ಟನ್ನು ದೇಶದ ಹೊರಗೆ ಕಳೆಯುತ್ತಾರೆ. ಹೀಗಿದ್ದಾಗ ವಿರೋಧ ಪಕ್ಷದ ನಾಯಕರ ಪ್ರಯಾಣದ ಬಗ್ಗೆ ಪ್ರಶ್ನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದರು. ಇದೇ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ಚುನಾವಣಾ ಅಕ್ರಮಗಳ ಕುರಿತು ರಾಹುಲ್ ಗಾಂಧಿ ಪ್ರಶ್ನೆಗಳಿಗೆ ಬಿಜೆಪಿಯವರ ಬಳಿ ಉತ್ತರವಿಲ್ಲ, ಆದ್ದರಿಂದಲೇ ನಮ್ಮ ನಾಯಕರನ್ನು ದೂಷಿಸುವ ಮಾರ್ಗ ಹಿಡಿದಿದ್ದಾರೆ ಎಂದು ಆರೋಪಿಸಿದರು.
ಡಿಸೆಂಬರ್ 15 ರಿಂದ 20 ರವರೆಗೆ ರಾಹುಲ್​ ಬರ್ಲಿನ್‌ನಲ್ಲಿ ನಡೆಯಲಿರುವ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಚಳಿಗಾಲದ ಅಧಿವೇಶನ ಡಿಸೆಂಬರ್ 19 ರಂದು ಅಂತ್ಯವಾಗುತ್ತದೆ.

ಬಿಜೆಪಿ ಟೀಕೆ..

ರಾಹುಲ್ ಗಾಂಧಿ ವಿದೇಶ ಪ್ರವಾಸವನ್ನು ಟೀಕಿಸಿರುವ​ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ, ರಾಹುಲ್​ ಎಲ್​ಒಪಿ ಎಂದರೆ ಪ್ರವಾಸೋದ್ಯಮದ ನಾಯಕ ಮತ್ತು ಪಕ್ಷದ ನಾಯಕ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರೊಬ್ಬ ಗಂಭೀರ ರಾಜಕಾರಣಿಯೇ ಅಲ್ಲ, ಜನರು ಕೆಲಸದ ಮೂಡ್‌ನಲ್ಲಿದ್ದರೆ, ಇವರು ಶಾಶ್ವತ ರಜೆಯ ಮೂಡ್‌ನಲ್ಲಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ಬಿಹಾರ ಚುನಾವಣೆಯ ಸಮಯದಲ್ಲಿ ರಾಹುಲ್​ ಜಂಗಲ್ ಸಫಾರಿಯಲ್ಲಿದ್ದರು. ಈ ಮೂಲಕ ಆದ್ಯತೆಗಳು ಯಾವವು ಎನ್ನುವುದು ಸ್ಪಷ್ಟವಾಗಿವೆ. ಅವರು ಯಾವ ಕಾರಣಕ್ಕಾಗಿ ಜರ್ಮನಿಗೆ ಹೋಗುತ್ತಿದ್ದಾರೆ ನನಗೆ ಗೊತ್ತಿಲ್ಲ, ಅದರ ಹಿಂದೆ ಭಾರತದ ವಿರುದ್ಧ ವಿಷ ಕಾರಲು ಕಾರಣವು ಇರಬಹುದು. ಇದು ಭಾರತ್ ಬದ್ನಾಮಿ ಬ್ರಿಗೇಡ್ ಮತ್ತು ಭಾರತ್ ಬದ್ನಾಮಿ ಪ್ರವಾಸ. ಆದ್ದರಿಂದ ಅವರು ಮತ್ತೊಮ್ಮೆ ತಮ್ಮ ರಜೆಗಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ ಮತ್ತು ಭಾರತವನ್ನು ದೂಷಿಸಲು ಹೋಗುತ್ತಿದ್ದಾರೆ ಎಂದು ಪೂನವಾಲಾ ಬರೆದುಕೊಂಡಿದ್ದಾರೆ(ಏಜೆನ್ಸೀಸ್​).

ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಎಕ್ಸ್‌ ಪೋಸ್ಟ್‌...

ಇದೇ ಡಿಸೆಂಬರ್ 17 ರಂದು ಬರ್ಲಿನ್‌ನಲ್ಲಿ ಭಾರತೀಯ ವಲಸಿಗರೊಂದಿಗೆ ತೊಡಗಿಸಿಕೊಳ್ಳಲಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಸಂಸತ್ ಸದಸ್ಯ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ನಮಗೆ ಗೌರವವಾಗಿದೆ. ಈ ಕಾರ್ಯಕ್ರಮವು ಯುರೋಪಿನಾದ್ಯಂತದ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಎಲ್ಲಾ ಅಧ್ಯಕ್ಷರನ್ನು ಒಟ್ಟುಗೂಡಿಸುತ್ತದೆ, ರಾಹುಲ್ ಗಾಂಧಿ ಅವರೊಂದಿಗೆ ಪ್ರಮುಖ ವಿಷಯಗಳನ್ನು ಚರ್ಚಿಸಲು ಇದು ಅನನ್ಯ ವೇದಿಕೆಯನ್ನು ಒದಗಿಸುತ್ತದೆ, ವಿಶೇಷವಾಗಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದು, ಎನ್‌ಆರ್‌ಐ ಸಮಸ್ಯೆಗಳು ಮತ್ತು ಪಕ್ಷಕ್ಕೆ ಹೆಚ್ಚಿನ ಜನರನ್ನು ಸಂಪರ್ಕಿಸುವಲ್ಲಿ ಮತ್ತು ಅದರ ಸಿದ್ಧಾಂತವನ್ನು ಹರಡುವಲ್ಲಿ ಐಒಸಿ ಹೇಗೆ ಪ್ರಮುಖ ಪಾತ್ರ ವಹಿಸಬಹುದು ಎಂಬುದನ್ನು ಮತ್ತಷ್ಟು ಅನ್ವೇಷಿಸುವುದು ಎಂದು ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net