

2015ರ ಬಳಿಕ ಈಗ ಪರಿಷ್ಕರಣೆ: ಕೇಂದ್ರ ಸರ್ಕಾರವು ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ಗಳನ್ನು ಒಳಗೊಂಡ ಕಾನೂನು ಅಧಿಕಾರಿಗಳಲ್ಲದೆ, ನ್ಯಾಯಾಂಗ ವೇದಿಕೆಗಳಲ್ಲಿ ತನ್ನ ಪರವಾಗಿ ವಾದ ಮಂಡಿಸಲು ವಕೀಲರನ್ನು ನೇಮಿಸಿಕೊಳ್ಳುತ್ತದೆ. ಸರ್ಕಾರಿ ವಕೀಲರಿಗೆ ಪಾವತಿಸಬೇಕಾದ ಶುಲ್ಕವನ್ನು ಕೊನೆಯದಾಗಿ 2015ರ ಅಕ್ಟೋಬರ್ನಲ್ಲಿ ಪರಿಷ್ಕರಿಸಲಾಗಿತ್ತು.
‘ನನ್ನ ಅಧಿಕಾರಾವಧಿಯಲ್ಲಿ ಪ್ರಾರಂಭಿಸಲಾದ ಕೇಂದ್ರ ಸರ್ಕಾರಿ ವಕೀಲರ ಶುಲ್ಕ ಪರಿಷ್ಕರಣೆ ಪ್ರಕ್ರಿಯೆ ಈಗ ಜಾರಿಗೆ ಬಂದಿದೆ. ಎಲ್ಲ ವಕೀಲರಿಗೂ ಅಭಿನಂದನೆಗಳು. ಇದು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಬಾಕಿ ಉಳಿದಿತ್ತು’ ಎಂದು ಮಾಜಿ ಕೇಂದ್ರ ಕಾನೂನು ಕಾರ್ಯದರ್ಶಿ ಅಂಜು ರಾಠಿ ರಾಣಾ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.