ಪೊಲೀಸ್ ತನಿಖೆಯ ಪ್ರಕಾರ, ಆರೋಪಿ ಆಯುಷಿ ತನ್ನ ಸೋದರಸಂಬಂಧಿ ಬಲರಾಮ್ ಸಹಾಯದೊಂದಿಗೆ ತಾಯಿಯನ್ನು ಮುಗಿಸಲು 7 ಲಕ್ಷ ರೂ. ಕೊಟ್ಟು ಕೊಲೆಗೆ ಸುಪಾರಿ ನೀಡಿದ್ದಳು. ಜುಲೈ 3ರಂದು ನೀರಜ್ ಶರ್ಮಾ ಅವರು ತಮ್ಮ ಕಿರಿಯ ಮಗನನ್ನು ಕೋಚಿಂಗ್ ಸೆಂಟರ್‌ಗೆ ಬಿಟ್ಟು ವಾಪಸ್ ಬರುತ್ತಿದ್ದಾಗ, ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ಅವರಿಗೆ ಡಿಕ್ಕಿ ಹೊಡೆಯಿತು. ರಸ್ತೆ ಅಪಘಾತದಂತೆ ಬಿಂಬಿಸಲು ಸಂಚು ರೂಪಿಸಲಾಗಿತ್ತು. ಇದಕ್ಕೂ ಒಂದು ತಿಂಗಳ ಮುಂಚೆಯೇ ಕೊಲೆಗೈಯಲು ಪ್ರಯತ್ನಿಸಲಾಗಿತ್ತು. ಆದ್ರೆ, ಟ್ರಾಫಿಕ್ ಸಮಸ್ಯೆಯಿಂದ ಆ ಪ್ರಯತ್ನ ವಿಫಲವಾಗಿತ್ತು ಎಂಬುದು ಶಾಕಿಂಗ್ ಸಂಗತಿ,(ಏಜೆನ್ಸೀಸ್).