ದೆಹಲಿ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಷ್ಕರ್ ಸಂಬಂಧಿತ ಭಯೋತ್ಪಾದಕ ಮಾಡ್ಯೂಲ್ ಅನ್ನು ಭದ್ರತಾ ಸಂಸ್ಥೆಗಳು ಪತ್ತೆಹಚ್ಚಿದ ಕೆಲವೇ ದಿನಗಳಲ್ಲಿ ಈ ಬಂಧನ ನಡೆದಿದೆ. ಆರೋಪಿ ಲೋನ್, ಲಷ್ಕರ್-ಎ-ತೊಯ್ಬಾದಿಂದ ತರಬೇತಿ ಪಡೆದ ಉಗ್ರಗಾಮಿಯಾಗಿದ್ದು, ಮುಜಫರಾಬಾದ್‌ನ ಭಯೋತ್ಪಾದಕ ಶಿಬಿರದಲ್ಲಿ ದೌರಾ-ಎ-ಆಮ್ (ಮೂಲ) ಮತ್ತು ದೌರಾ-ಎ-ಖಾಸ್ (ಸುಧಾರಿತ) ತರಬೇತಿಯನ್ನು ಪಡೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಘಟನೆಯ ಉನ್ನತ ನಾಯಕತ್ವದೊಂದಿಗೆ ಸುಮಾರು ಎರಡು ದಶಕಗಳಿಂದ ಸಂಪರ್ಕ ಹೊಂದಿದ್ದಾನೆಂದು ತಿಳಿದುಬಂದಿದೆ.