ನನಗೆ ಚಪ್ಪಲಿಯಿಂದ ಹೊಡೆಯಲು ಮುಂದಾಗಿದ್ರು... : ಮನೆ ತೊರೆಯಲು ಆಶ್ಚರ್ಯಕರ ಕಾರಣ ಬಿಚ್ಚಿಟ್ಟ ಲಾಲೂ ಪುತ್ರಿ!

ಮಾಜಿ ಸಿಎಂ ಲಾಲೂ ಪ್ರಸಾದ್​ ಯಾದವ್​ ಪುತ್ರಿ ರೋಹಿಣಿ ಆಚಾರ್ಯ
ಮಾಜಿ ಸಿಎಂ ಲಾಲೂ ಪ್ರಸಾದ್​ ಯಾದವ್​ ಪುತ್ರಿ ರೋಹಿಣಿ ಆಚಾರ್ಯ
Published on

ಪ್ರಮುಖ ಮುಖ್ಯಾಂಶಗಳು

  • ಬಿಹಾರ ಚುನಾವಣೆಯಲ್ಲಿ RJD ಪಕ್ಷ ಹೀನಾಯ ಸೋಲು
  • ಅಸಭ್ಯ ನಿಂದನೆ, ಚಪ್ಪಲಿಯಿಂದ ಹೊಡೆಯಲು ಮುಂದಾಗಿದ್ರು: ರೋಹಿಣಿ ಆಚಾರ್ಯ ಆರೋಪ
ಬಿಹಾರ: 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ RJD ಪಕ್ಷ ಹೀನಾಯ ಸೋಲು ಕಂಡ ಬಳಿಕ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಕುಟುಂಬದಲ್ಲಿನ ವೈಯಕ್ತಿಕ ಜಗಳಗಳು ಒಂದೊಂದಾಗಿ ಇದೀಗ ಹೊರಬರುತ್ತಿವೆ.
ಲಾಲೂ ಮಗಳು ರೋಹಿಣಿ ಆಚಾರ್ಯ ರಾಜಕೀಯವನ್ನು ತ್ಯಜಿಸುವ ಮತ್ತು ಕುಟುಂಬದೊಂದಿಗೆ ಸಂಬಂಧವನ್ನು ಕಡಿದುಕೊಳ್ಳುವ ನಿರ್ಧಾರವನ್ನು ಘೋಷಿಸಿದ ಬಳಿಕ ತಾನು ಮನೆಯಿಂದ ಹೊರ ಬರಲು ಮತ್ತು ರಾಜಕೀಯದಿಂದ ದೂರ ಉಳಿಯಲು ಆಶ್ಚರ್ಯಕರ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
"ನಾನು ರಾಜಕೀಯವನ್ನು ತೊರೆಯುತ್ತಿದ್ದೇನೆ ಮತ್ತು ನನ್ನ ಕುಟುಂಬವನ್ನು ತ್ಯಜಿಸುತ್ತಿದ್ದೇನೆ. ಸಂಜಯ್ ಯಾದವ್ ಮತ್ತು ರಮೀಜ್ ಅವರ ಸಲಹೆಯ ಮೇರೆಗೆ ನಾನು ಇದನ್ನು ಮಾಡುತ್ತಿದ್ದೇನೆ" ಎಂದು ಅವರು ಟ್ವೀಟ್ ಮಾಡಿದ್ದರು. ಇದೀಗ ಮನೆಯಲ್ಲಿದ್ದ ತನ್ನ ಪರಿಸ್ಥಿತಿ ಮತ್ತು ತನ್ನ ಮೇಲೆ ದಬ್ಬಾಳಿಕೆ ಹೇಗೆ ಆಗುತ್ತಿತ್ತು ಎಂಬುದನ್ನು ತಮ್ಮ ಹೊಸ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಹೊಸ ಪೋಸ್ಟ್​ನಲ್ಲೇನಿದೆ..?

"ನಿನ್ನೆ ಒಬ್ಬ ಮಗಳು, ಸಹೋದರಿ, ವಿವಾಹಿತ ಮಹಿಳೆ, ತಾಯಿಯನ್ನು ಅವಮಾನಿಸಲಾಯಿತು. ಅವರ ಮೇಲೆ ಕೆಟ್ಟ ನಿಂದನೆಗಳನ್ನು ಮಾಡಲಾಯಿತು. ಅವಳನ್ನು ಹೊಡೆಯಲು ಚಪ್ಪಲಿಯನ್ನು ಎತ್ತಲಾಯಿತು. ನಾನು ನನ್ನ ಸ್ವಾಭಿಮಾನದ ಮೇಲೆ ರಾಜಿ ಮಾಡಿಕೊಳ್ಳಲಿಲ್ಲ, ನಾನು ಸತ್ಯವನ್ನು ಬಿಟ್ಟುಕೊಡಲಿಲ್ಲ ಮತ್ತು ಈ ಕಾರಣದಿಂದಾಗಿಯೇ ನಾನು ಈ ಅವಮಾನವನ್ನು ಸಹಿಸಿಕೊಳ್ಳಬೇಕಾಯಿತು" ಎಂದು ಬರೆದಿದ್ದಾರೆ.
ತನ್ನ ಹೆತ್ತವರು ಮತ್ತು ಸಹೋದರಿಯರು ಮನೆಯಿಂದ ಹೊರಡುವಾಗ ಅಳುತ್ತಿದ್ದರು ಮತ್ತು ಯಾವುದೇ ಕುಟುಂಬಕ್ಕೂ ತನ್ನಂತಹ ಮಗಳು ಸಿಗಬಾರದೆಂದು ಅವರು ಬಯಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.
ಒಬ್ಬ ಮಗಳು, ಬಲವಂತದಿಂದ ಅಳುತ್ತಿದ್ದ ಹೆತ್ತವರು ಮತ್ತು ಸಹೋದರಿಯರನ್ನು ಬಿಟ್ಟು ಬಂದಳು. ಅವರು ನನ್ನನ್ನು ನನ್ನ ತಾಯಿಯ ಮನೆಯಿಂದ ಕಿತ್ತುಹಾಕಿದರು. ಅವರು ನನ್ನನ್ನು ಅನಾಥನನ್ನಾಗಿ ಮಾಡಿದರು. ನಿಮ್ಮಲ್ಲಿ ಯಾರೂ ನನ್ನ ಹಾದಿಯಲ್ಲಿ ನಡೆಯದಿರಲಿ, ಯಾವುದೇ ಕುಟುಂಬಕ್ಕೆ ರೋಹಿಣಿಯಂತಹ ಮಗಳು-ಸಹೋದರಿ ಸಿಗದಿರಲಿ" ಎಂದು ಆಚಾರ್ಯ ಅವರ ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಆರ್​ಜೆಡಿ ವಿರುದ್ಧ ಬಿಜೆಪಿ ಕಿಡಿ

ಆಚಾರ್ಯ ಅವರ ಮನೆ ತೊರೆದಿರುವುದರ ಬಗ್ಗೆ ಆರ್‌ಜೆಡಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಲಾಲು ಯಾದವ್ ತಮ್ಮ ಮಗಳಿಂದ ಮೂತ್ರಪಿಂಡ ಪಡೆದಿದ್ದರೂ ಅವರ ಮಗ ತೇಜಸ್ವಿಗೆ ಒಲವು ತೋರಿದ್ದಾರೆ. ಲಾಲು ಯಾದವ್ ಕುಟುಂಬವು "ಪಿತೃಪ್ರಧಾನ, ಮಹಿಳಾ ವಿರೋಧಿ ಮತ್ತು ಪುರುಷ ಪ್ರಾಬಲ್ಯದ ಮನಸ್ಥಿತಿ" ಹೊಂದಿದೆ ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net