2022, 2023 ಮತ್ತು 2024 ರಲ್ಲಿ ಸಿಬಿಐ ಸಲ್ಲಿಸಿದ್ದ ಮೂರು ಪ್ರತ್ಯೇಕ ಆರೋಪಪಟ್ಟಿಗಳನ್ನು ಪ್ರಶ್ನಿಸಿ ಲಾಲು ಯಾದವ್ ನ್ಯಾಯಾಲಯದ ಮೊರೆ ಹೋಗಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17A ಅಡಿಯಲ್ಲಿ ಸಿಬಿಐ ತನ್ನ ತನಿಖೆಗೆ ಅಗತ್ಯವಾದ ಪೂರ್ವಾನುಮತಿಯನ್ನು ಪಡೆದಿಲ್ಲ, ಆದ್ದರಿಂದ ಈ ತನಿಖೆ ಮತ್ತು ಎಫ್‌ಐಆರ್ ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂಬುದು ಲಾಲು ಯಾದವ್ ಪರ ವಕೀಲರ ಪ್ರಮುಖ ವಾದವಾಗಿತ್ತು.