ನವದೆಹಲಿ: ನಾಲ್ಕು ಕಾರ್ಮಿಕ ಸಂಹಿತೆಗಳು 2026ರ ಏಪ್ರಿಲ್ 1ರಿಂದ ಸಂಪೂರ್ಣ ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದ್ದು, ಸಚಿವಾಲಯ ಈಗಾಗಲೇ ಅಧಿಸೂಚಿತ ಕಾನೂನಿನಡಿ ನಿಯಮಗಳನ್ನು ಜಾರಿಗೊಳಿಸುವ ಪ್ರಕ್ರಿಯೆ ಆರಂಭಿಸಿದೆ.
ವೇತನ ಸಂಹಿತೆ 2019, ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಸಾಮಾಜಿಕ ಸುರತಾ ಸಂಹಿತೆ 2020 ಹಾಗೂ ವೃತ್ತಿಪರ ಸುರತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳ ಸಂಹಿತೆ 2020& ಈ ನಾಲ್ಕನ್ನೂ ನ.21ರಂದು ಅಧಿಸೂಚಿಸಲಾಗಿದೆ. ಕಾನೂನನ್ನು ಜಾರಿಗೆ ತರಲು ಅದರಡಿ ನಿಯಮಗಳನ್ನು ಅಧಿಸೂಚಿಸಬೇಕು.
ಅದಕ್ಕೂ ಮುನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕರಡು ನಿಯಮಗಳನ್ನು ಸಾರ್ವಜನಿಕ ಅಭಿಪ್ರಾಯಕ್ಕಾಗಿ ಪ್ರಕಟಿಸಬೇಕು. ಸಿಐಐ ಇಂಡಿಯಾ ಎಡ್ಜ್ 2025 ಸಮಾವೇಶದಲ್ಲಿ ಮಾತನಾಡಿದ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವೀಯ, ನಾಲ್ಕು ಸಂಹಿತೆಗಳ ಕರಡು ನಿಯಮಗಳನ್ನು ಶ್ರೀವೇ ಪ್ರಕಟಿಸಲಾಗುವುದು ಎಂದು ತಿಳಿಸಿದರು.