ನನ್ನ ಕುಟುಂಬದವರೇ ಅಡ್ಜಸ್ಟ್​ ಮಾಡ್ಕೋ ಅಂದ್ರು... ಮದುವೆ ಬೆನ್ನಲ್ಲೇ ಶಾಕಿಂಗ್​ ಹೇಳಿಕೆ ನೀಡಿದ ಮೊನಾಲಿಸಾ! Monalisa

ನನ್ನ ಕುಟುಂಬದವರೇ ಅಡ್ಜಸ್ಟ್​ ಮಾಡ್ಕೋ ಅಂದ್ರು... ಮದುವೆ ಬೆನ್ನಲ್ಲೇ ಶಾಕಿಂಗ್​ ಹೇಳಿಕೆ ನೀಡಿದ ಮೊನಾಲಿಸಾ! Monalisa
ನನ್ನ ಕುಟುಂಬದವರೇ ಅಡ್ಜಸ್ಟ್​ ಮಾಡ್ಕೋ ಅಂದ್ರು... ಮದುವೆ ಬೆನ್ನಲ್ಲೇ ಶಾಕಿಂಗ್​ ಹೇಳಿಕೆ ನೀಡಿದ ಮೊನಾಲಿಸಾ! Monalisa
Published on

ಪ್ರಮುಖ ಮುಖ್ಯಾಂಶಗಳು

  • ರಾತ್ರೋರಾತ್ರಿ ಫೇಮಸ್​ ಆದವರಲ್ಲಿ ಮೊನಾಲಿಸಾ ಭೋಸ್ಲೆ ಕೂಡ ಒಬ್ಬರು
  • ಕಳೆದ ವರ್ಷ ನಡೆದ ಮಹಾ ಕುಂಭಮೇಳದಲ್ಲಿ ರುದ್ರಾಕ್ಷ ಮಾಲೆಗಳನ್ನು ಮಾರುತ್ತಿದ್ದ ಮೊನಾಲಿಸಾ
  • ಕ್ಯಾಮೆರಾ ಕಣ್ಣಿಗೆ ಬಿದ್ದು ತನ್ನ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆದು, ರಾತ್ರೋರಾತ್ರಿ ಫೇಮಸ್
  • ಇದೇ ಮೊನಾಲಿಸಾ ಇದೀಗ ತನ್ನ ವೈಯಕ್ತಿಕ ಜೀವನ ಕಾರಣಕ್ಕೆ ಭಾರಿ ಸುದ್ದಿಯಾಗಿದ್ದಾಳೆ
ತಿರುವನಂತಪುರ : ಈ ಸೋಶಿಯಲ್​ ಮೀಡಿಯಾ ಜಮಾನದಲ್ಲಿ ರಾತ್ರೋರಾತ್ರಿ ಫೇಮಸ್​ ಆದವರಲ್ಲಿ ಮೊನಾಲಿಸಾ ಭೋಸ್ಲೆ ( Monalisa ) ಕೂಡ ಒಬ್ಬರು. ಕಳೆದ ವರ್ಷ ನಡೆದ ಮಹಾ ಕುಂಭಮೇಳದಲ್ಲಿ ರುದ್ರಾಕ್ಷ ಮತ್ತು ಮುತ್ತಿನ ಮಾಲೆಗಳನ್ನು ಮಾರುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದು ತನ್ನ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆದು, ರಾತ್ರೋರಾತ್ರಿ ಫೇಮಸ್​ ಆದಳು. ಎಷ್ಟರಮಟ್ಟಿಗೆ ಅಂದರೆ, ಬಾಲಿವುಡ್​ನಿಂದ ಸಿನಿಮಾ ಅವಕಾಶ ಪಡೆಯುವಷ್ಟು. ಇದೇ ಮೊನಾಲಿಸಾ ಇದೀಗ ತನ್ನ ವೈಯಕ್ತಿಕ ಜೀವನ ಕಾರಣಕ್ಕೆ ಭಾರಿ ಸುದ್ದಿಯಾಗಿದ್ದಾಳೆ.
ಹೌದು, ಮೊನಾಲಿಸಾ, ಇತ್ತೀಚೆಗೆ ಉತ್ತರ ಪ್ರದೇಶ ಮೂಲದ ಫರ್ಮಾನ್​ ಖಾನ್​ ಎಂಬ ಯುವಕನನ್ನು ಮದುವೆಯಾಗಿದ್ದಾಳೆ. ಇಬ್ಬರದು ಪ್ರೇಮ ವಿವಾಹ. ಕೇರಳದಲ್ಲಿ ಮದುವೆಯಾದರು. ಇದೊಂದು ಅಂತರ್ಧಮೀಯ ಮದುವೆಯಾಗಿದ್ದು, ಲವ್​ ಜಿಹಾದ್​ ಎಂಬ ಆರೋಪದಿಂದಾಗಿ ವಿವಾದಕ್ಕೆ ಗುರಿಯಾಯಿತು. ಆದರೆ, ತಾನು ಇಷ್ಟಪಟ್ಟು ಮದುವೆಯಾಗಿದ್ದೇನೆ ಎಂದು ಮೊನಾಲಿಸಾ ಹೇಳಿಕೆ ನೀಡಿದ ಬಳಿಕ ವಿವಾದ ತಣ್ಣಾಗಾಗಿದೆ. ಇದರ ನಡುವೆ ಮೊನಾಲಿಸಾ ಅವರು ನಿರ್ದೇಶಕ ಸನೋಜ್​ ಮಿಶ್ರಾ ಹಾಗೂ ತಮ್ಮ ಕುಟುಂಬದ ವಿರುದ್ಧ ಒಂದು ಗಂಭೀರ ಆರೋಪ ಮಾಡಿದ್ದಾರೆ.
ಕೊಚ್ಚಿಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೊನಾಲಿಸಾ, ಶೂಟಿಂಗ್ ಸೆಟ್‌ನಲ್ಲಿ ಸನೋಜ್ ಮಿಶ್ರಾ ತಮ್ಮೊಂದಿಗೆ ಬಹಳ ಅಸಭ್ಯವಾಗಿ ವರ್ತಿಸಿದರು ಮತ್ತು ಪದೇ ಪದೇ ನನ್ನ ದೇಹವನ್ನು ಮುಟ್ಟುತ್ತಿದ್ದರು ಮತ್ತು ಕಿರುಕುಳ ನೀಡುತ್ತಿದ್ದರು. ನಿರ್ದೇಶಕರ ವರ್ತನೆಯನ್ನು ನನ್ನಿಂದ ಸಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. 
ನಿರ್ದೇಶಕರು ಕಿರುಕುಳ ನೀಡುವುದನ್ನು ನನ್ನ ಕುಟುಂಬಕ್ಕೆ ತಿಳಿಸಿದ್ದೆ. ಆದರೆ, ಅದು ನನ್ನ ಮೊದಲ ಚಿತ್ರವಾದ್ದರಿಂದ ಸಾರ್ವಜನಿಕವಾಗಿ ಎಲ್ಲೂ ಮಾತನಾಡದಂತೆ ಮತ್ತು ಎಲ್ಲವನ್ನು ಸಹಿಸಿಕೊಂಡು, ಹೊಂದಾಣಿಕೆ ಮಾಡಿಕೊಳ್ಳುವಂತೆ ಹೇಳಿದರು ಎಂದು ಮೊನಾಲಿಸಾ ಬೇಸರ ಹೊರಹಾಕಿದರು. 
ಇದೀಗ ನೋಡಿದರೆ, ಸನೋಜ್ ಮಿಶ್ರಾ ಅವರೇ ನನ್ನ ವಿರುದ್ಧ ಇಲ್ಲಸಲ್ಲದ ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ. ಈ ಬಗ್ಗೆ ಔಪಚಾರಿಕ ದೂರು ದಾಖಲಿಸಲು ಯೋಚಿಸುತ್ತಿದ್ದೇನೆ ಎಂದು ಮೊನಾಲಿಸಾ ಹೇಳಿದರು. 
ಇದೇ ಸಮಯದಲ್ಲಿ ಫರ್ಮಾನ್ ಖಾನ್, ತನ್ನನ್ನು ಅಪಹರಿಸಿದ್ದಾರೆ ಎಂಬ ಆರೋಪಗಳನ್ನು ಮೊನಾಲಿಸಾ ನಿರಾಕರಿಸಿದರು. ನಾನು 18 ವರ್ಷಕ್ಕಿಂತ ಮೇಲ್ಪಟ್ಟವಳಾಗಿದ್ದು, ತಮ್ಮ ಸಂಬಂಧ ಧರ್ಮವನ್ನು ಆಧರಿಸಿಲ್ಲ ಎಂದು ಮೊನಾಲಿಸಾ ಹೇಳಿದ್ದಾರೆ. ತಮ್ಮ ಹಳೆಯ ಮತ್ತು ಹೊಸ ಆಧಾರ್ ಕಾರ್ಡ್‌ಗಳನ್ನು ಹಾಜರುಪಡಿಸಿ, ಎರಡೂ ದಾಖಲೆಗಳಲ್ಲಿ ತಮ್ಮ ಜನ್ಮ ದಿನಾಂಕ ಒಂದೇ ಆಗಿರುತ್ತದೆ ಎಂದು ಮೊನಾಲಿಸಾ ಪ್ರತಿಪಾದಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net