ಏನಿದು ಟ್ವಿಸ್ಟ್​! ವೈರಲ್​ ಬೆಡಗಿ ಮೊನಾಲಿಸಾ ನಾಪತ್ತೆ? ವಿಡಿಯೋ ಹರಿಬಿಟ್ಟು ಪತಿ ಫರ್ಮಾನ್​ ಅಳಲು

ವೈರಲ್​ ಬೆಡಗಿ ಮೊನಾಲಿಸಾ
ವೈರಲ್​ ಬೆಡಗಿ ಮೊನಾಲಿಸಾ
Published on

ಪ್ರಮುಖ ಮುಖ್ಯಾಂಶಗಳು

  • ಕುಂಭಮೇಳ ವೈರಲ್​ ಹುಡುಗಿಯ ಮದುವೆ ವಿಷಯದಲ್ಲಿ ದಿನಕ್ಕೊಂದು ಟ್ವಿಸ್ಟ್​
  • ಅಜ್ಮೀರ್ ಪ್ರವಾಸದ ವೇಳೆ ಪತ್ನಿ ಮೊನಾಲಿಸಾ ಕಣ್ಮರೆ
  • ಇತ್ತೀಚೆಗಷ್ಟೇ ಮೊನಾಲಿಸಾ ಅಪ್ರಾಪ್ತ ವಯಸ್ಕ ಬಾಲಕಿ ಎಂಬ ಆರೋಪ
  • ಪತ್ನಿಯ ನಾಪತ್ತೆ ಬೆನ್ನಲ್ಲೇ ಪತಿ ಫರ್ಮಾನ್​ ವಿಡಿಯೋ
ಕೇರಳ: ಮಹಾಕುಂಭಮೇಳದಿಂದ ವೈರಲ್ ಆಗಿ ರಾತ್ರೋ ರಾತ್ರಿ ಸ್ಟಾರ್​ ಆದ ಮೊನಾಲಿಸಾ, ಚಿಕ್ಕ ವಯಸ್ಸಿಗೆ ಮದುವೆಯಾಗಿ ಇದೀಗ ದೊಡ್ಡ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಮಲಯಾಳಂ ಚಿತ್ರರಂಗದಿಂದ ಬಂದ ಆಫರ್​ಗೆ ಅಸ್ತು ಎಂದಿದ್ದ ಹುಡುಗಿ, ಚಿತ್ರೀಕರಣಕ್ಕೆ ಕೇರಳಕ್ಕೆ ಹೋಗಿದ್ದಾಗ, ಆರು ತಿಂಗಳಿನಿಂದ ಪ್ರೀತಿಸುತ್ತಿದ್ದ ಫರ್ಮಾನ್ ಖಾನ್​ ಜೊತೆ ಮದುವೆಯಾದರು. ಪೋಷಕರ ಮಾತನ್ನು ಧಿಕ್ಕರಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೊನಾಲಿಸಾಗೆ ಇದೀಗ ಒಂದಲ್ಲ, ಒಂದು ಸಂಕಷ್ಟಗಳು ಎದುರಾಗುತ್ತಿವೆ.
ಮೊನ್ನೆಯಷ್ಟೇ ಮೊನಾಲಿಸಾ ಇನ್ನೂ ಅಪ್ರಾಪ್ತಳು. ಆಕೆ ಕಾನೂನಿನ ವಿರುದ್ಧವಾಗಿ ಮದುವೆಯಾಗಿದ್ದಾಳೆ ಎಂದು ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗ (NCST), ಆಕೆಯ ಗಂಡ ಫರ್ಮಾನ್​ ಖಾನ್​ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) ಅಡಿಯಲ್ಲಿ ಪ್ರಕರಣ ದಾಖಲಿಸಿತು. ಇದಾಗಿ ಎರಡೇ ದಿನಕ್ಕೆ ಮೊನಾಲಿಸಾ ಮತ್ತು ಫರ್ಮಾನ್​ ದಂಪತಿ ಊರು ಬಿಟ್ಟರು. ಈಗ ನೋಡಿದರೆ, ವೈರಲ್ ಹುಡುಗಿ ನಾಪತ್ತೆ ಎಂದು ಹೇಳಲಾಗಿದೆ.
ಪತಿ ಫರ್ಮಾನ್ ಸೆಲ್ಫಿ ವಿಡಿಯೋ ಮೂಲಕ ಆಕೆ ಕೆಲವು ಗಂಟೆಗಳಿಂದ ಕಾಣಿಸುತ್ತಿಲ್ಲ. ರಾಜಸ್ಥಾನದ ಅಜ್ಮೀರ್‌ಗೆ ಪ್ರವಾಸಕ್ಕೆ ಹೋದಾಗಿನಿಂದ ಆಕೆ ನಾಪತ್ತೆಯಾಗಿದ್ದಾಳೆ. ಅವಳ ಸುಳಿವಿನ ಬಗ್ಗೆ ನಿಜವಾಗಿಯೂ ನನಗೆ ಮಾಹಿತಿ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ವಿರುದ್ಧ ಈಗಾಗಲೇ ಹಲವು ಕಾನೂನು ಪರಿಣಾಮಗಳಿರುವುದರಿಂದ, ಈ ಕಣ್ಮರೆ ಸುದ್ದಿ ಸದ್ಯ ದೊಡ್ಡ ಸಂಚಲನ ಸೃಷ್ಟಿಸಿದೆ.
ಇಲ್ಲಿ ಮೊನಾಲಿಸಾ ಸ್ವಇಚ್ಛೆಯಿಂದ ಎಲಾದರೂ ಹೋಗಿದ್ದಾರೋ ಅಥವಾ ಯಾರಾದರೂ ಆಕೆಯನ್ನು ಅಪಹರಿಸಿದ್ದಾರೋ ಎಂಬ ಅನುಮಾನಗಳು ಮೂಡಿವೆ. ವೈರಲ್ ಹುಡುಗಿ ನಾಪತ್ತೆಯಾಗಿದ್ದಾಳೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಪ್ರಕರಣಕ್ಕೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ನೀಡುತ್ತಿದೆ. ಈ ಬಗ್ಗೆ ಪೊಲೀಸರು ಏನು ಹೇಳಲಿದ್ದಾರೆ? ನಿಜಕ್ಕೂ ಆಕೆ ಮಿಸ್ ಆಗಿದ್ದಾಳಾ? ಎಂಬುದರ ಸ್ಪಷ್ಟ ಮಾಹಿತಿ ಇನ್ನೂ ಲಭಿಸಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net