ಮೈಮೇಲೆ ದೇವರು ಬಂದಂತೆ ವರ್ತಿಸಿದ ವಿದೇಶಿ ಮಹಿಳೆ: ವೈರಲ್​ ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು! Foreign Woman

ಮೈಮೇಲೆ ದೇವರು ಬಂದಂತೆ ವರ್ತಿಸಿದ ವಿದೇಶಿ ಮಹಿಳೆ: ವೈರಲ್​ ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು! Foreign Woman
ಮೈಮೇಲೆ ದೇವರು ಬಂದಂತೆ ವರ್ತಿಸಿದ ವಿದೇಶಿ ಮಹಿಳೆ: ವೈರಲ್​ ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು! Foreign Woman
Published on

ಪ್ರಮುಖ ಮುಖ್ಯಾಂಶಗಳು

  • ಮೈಮೇಲೆ ದೇವರು ಬಂದಂತೆ ವರ್ತಿಸಿದ ವಿದೇಶಿ ಮಹಿಳೆ
  • ಕೇರಳದ ಕೊಡುಂಗಲ್ಲೂರ್ ಭರಣಿ ಉತ್ಸವದಲ್ಲಿ ನಡೆದ ಘಟನೆ
  • ವಿಡಿಯೋದಲ್ಲಿರುವ ಮಹಿಳೆ ಸ್ಪೇನ್​ ದೇಶದ ವ್ಲಾಗರ್‌ ಎಂದು ತಿಳಿದುಬಂದಿದೆ
Foreign Woman : ಕೇರಳದ ಕೊಡುಂಗಲ್ಲೂರ್ ಭರಣಿ ಉತ್ಸವದ ಸಮಯದಲ್ಲಿ ವಿದೇಶಿ ಮಹಿಳೆಯೊಬ್ಬರು ಮೈಮೇಲೆ ದೇವರು ಬಂದಂತೆ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವಿಡಿಯೋ ನೋಡಿದವರು ಹುಬ್ಬೇರಿಸಿದ್ದು, ಆ ಮಹಿಳೆ ಯಾರು ಎಂಬ ಹುಡುಕಾಟದಲ್ಲಿ ತೊಡಗಿದ್ದಾರೆ.
ಅಂದಹಾಗೆ, ವಿಡಿಯೋದಲ್ಲಿರುವ ಮಹಿಳೆ ಸ್ಪೇನ್​ ದೇಶದ ವ್ಲಾಗರ್‌ ಎಂದು ತಿಳಿದುಬಂದಿದೆ. ಆಕೆಯ ಹೆಸರು ನಿತ್ಯಶ್ರೀ ಪೌಲಾ ಸೇಗರಾ. ಆಕೆ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ ಮತ್ತು ಆಗಾಗ್ಗೆ ಹಿಂದೂ ಆಚರಣೆಗಳು ಮತ್ತು ದೇವಾಲಯಗಳ ವಿಡಿಯೋಗಳನ್ನು ಚಿತ್ರೀಕರಿಸುತ್ತಾರೆ ಮತ್ತು ಆ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. 
ಕೇರಳದ ತ್ರಿಸ್ಸೂರು ಜಿಲ್ಲೆಯ ಕೊಡುಂಗಲ್ಲೂರ್​ನಲ್ಲಿ ಪ್ರತಿ ವರ್ಷ ಕೊಡುಂಗಲ್ಲೂರ್​ ಅಮ್ಮ ಉತ್ಸವ ನಡೆಯುತ್ತದೆ. ಇದಕ್ಕಾಗಿ ಸ್ಪೇನ್​ ಮಹಿಳೆ, ಕೆಂಪು ಸೀರೆ ಧರಿಸಿ ಕೊಡಂಗಲ್ಲೂರ್‌ಗೆ ಆಗಮಿಸಿದರು. ತನ್ನ ಮೊಬೈಲ್​ ಕ್ಯಾಮೆರಾ ಮೂಲಕ ದೇವರ ಉತ್ಸವವನ್ನು ರೆಕಾರ್ಡ್​ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಮೈ ಮೇಲೆ ದೈವ ಆವಾಹನೆ ಆದಂತೆ ಕುಣಿದು ಕುಪ್ಪಳಿಸಿದಳು. ಎಷ್ಟೇ ಮಂದಿ ಆಕೆಯನ್ನು ಹಿಡಿದುಕೊಂಡರು ಕೂಡ ಸುಮ್ಮನಾಗಲಿಲ್ಲ. ಅಂತಿಮವಾಗಿ ಆಕೆಗೆ ನೀರು ಕುಡಿಸಿ ಸಮಾಧಾನ ಮಾಡಲಾಯಿತು.
ಸ್ಪೇನ್​ ಮಹಿಳೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವಿಡಿಯೋ ನೋಡಿದವರು ಬಗೆಬಗೆಯ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ. ಕೆಲವರು ಇದೆಲ್ಲ ನಾಟಕ ಎಂದು ಟೀಕಿಸುತ್ತಿದ್ದಾರೆ. ಇನ್ನು ಕೆಲವರು ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಳ್ಳಲು ದೈವದ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಜರಿದಿದ್ದಾರೆ. ಇನ್ನು ಕೆಲವರು ಆ ಮಹಿಳೆಯ ಬೆಂಬಲಕ್ಕೆ ನಿಂತಿದ್ದಾರೆ. ನಮ್ಮ ದೇಶದ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಆಕೆಯನ್ನು ನೋಡಿ ನಾವು ಕಲಿಯುವು ಬೇಕಷ್ಟಿದೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.
ಅಂದಹಾಗೆ, ವಿದೇಶಿ ಮಹಿಳೆಯ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net