ಮತ್ತೊಂದೆಡೆ, ಭಾನುವಾರ ಮಧ್ಯಾಹ್ನ ನಡೆದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಜಯಭೇರಿ ಬಾರಿಸುತ್ತಿದ್ದಂತೆ, ಅಜಿಂಕ್ಯ ರಹಾನೆ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಲೇಆಫ್ ತಲುಪುವ ಎಲ್ಲಾ ಆಸೆಗಳು ಅಧಿಕೃತವಾಗಿ ಕಮರಿಹೋಗಿದ್ದವು. ಹೀಗಾಗಿ, ತವರೂರಿನ ಪ್ರೇಕ್ಷಕರ ಮುಂದೆ ಕೇವಲ ಪ್ರತಿಷ್ಠೆಗಾಗಿ ಕಣಕ್ಕಿಳಿದ ಕೆಕೆಆರ್ ತಂಡ, ಬೌಲಿಂಗ್‌ನಲ್ಲೂ ಸಂಪೂರ್ಣ ವಿಫಲವಾಗಿ ಭಾರಿ ಹಿನ್ನಡೆ ಅನುಭವಿಸಿದೆ.