2025ರ ಟಾಪ್ ಸ್ಟೈಲಿಶ್ ಲಿಸ್ಟ್‌ನಲ್ಲಿ ಕಿಂಗ್ ಖಾನ್ ಶಾರುಖ್ಗೆ ಸ್ಥಾನ! | Stylish List
Shah Rukh Khan
Published on:
Copied
Follow Us
ನವದೆಹಲಿ: ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ 2025ರ 67 ಅತ್ಯಂತ ಸ್ಟೈಲಿಶ್ ವ್ಯಕ್ತಿಗಳ ಪಟ್ಟಿಯಲ್ಲಿ(Stylish List) ಬಾಲಿವುಡ್‌ನ ಸೂಪರ್ಸ್ಟಾರ್ ಬಾದಶಾ ಶಾರುಖ್ಖಾನ್ ಸ್ಥಾನ ಪಡೆದಿದ್ದಾರೆ.
ಈ ಪಟ್ಟಿಯಲ್ಲಿ ಸಬ್ರಿನಾ ಕಾರ್ಪೆಂಟರ್, ಡೋಚಿ, ವಿವಿಯನ್ ವಿಲ್ಸನ್, ನಿಕೋಲ್ ಶೆರ್ಜಿಂಗರ್, ವಾಲ್ಟನ್ ಗೊಗ್ಗಿನ್ಸ್, ಜೆನ್ನಿಫರ್ ಲಾರೆನ್ಸ್, ಶೈ ಗಿಲ್ಜಿಯಸ್-ಅಲೆಕ್ಸಾಂಡರ್, ಕೋಲ್ ಎಸ್ಕೋಲಾ ಮತ್ತು ನೋಹ್ ವೈಲ್ ಸೇರಿದಂತೆ ಇತರ ಸೆಲೆಬ್ರಿಟಿಗಳ ಹೆಸರುಗಳು ಪಟ್ಟಿಯಲ್ಲಿ ಸ್ಥಾನ ಅಲಂಕರಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ಮೆಟ್ ಗಾಲಾದಲ್ಲಿ 60 ವರ್ಷದ ನಟ ಶಾರುಖ್ ಖಾನ್ ಕಾಣಿಸಿಕೊಂಡಿದ್ದರು. ಶಾರುಖ್ಗೆ ಪ್ರಸಿದ್ಧ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ ಅವರು ವಿನ್ಯಾಸ ಮಾಡಿದ್ದ ಉಡುಪು ಧರಿಸಿದ್ದರು. ಈ ವಿಶಿಷ್ಠ ಉಡುಪು ಧರಿಸಿ ಶಾರುಖ್ ಹೆಜ್ಜೆ ಹಾಕಿದ್ದರು. ಈ ಮೆಟ್ ಗಾಲಾದಲ್ಲಿ ಕಾಣಿಸಿಕೊಂಡದ್ದರಿಂದ 2025ರ 67 ಅತ್ಯಂತ ಸ್ಟೈಲಿಶ್ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಸ್ಥಾನ ಪಡೆಸಿದ್ದಾರೆ.
ಮೊದಲ ಭಾರತೀಯ ನಟ
ಶಾರುಖ್ ಖಾನ್ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜ ವಿನ್ಯಾಸಗೊಳಿಸಿದ ಬ್ಲಾಕ್ ಸ್ಟೈಲೀಶ್ ಸೂಟ್‌ನಲ್ಲಿ ಮಿಂಚಿದ್ದರು. ಇನ್ನು ಡ್ರೆಸ್‌ಗೆ `K’ ಎಂಬ ಲಾಕೆಟ್ ಇರುವ ಚೈನ್ ಮ್ಯಾಚ್ ಮಾಡಿದ್ದರು. ಅಲ್ಲದೆ, ಮೆಟ್ ಗಾಲಾದ ಬ್ಲೂ ಕಾರ್ಪೆಟ್‌ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಬಾಲಿವುಡ್‌ನ ಕಿಂಗ್ ಖಾನ್ ಪಾತ್ರರಾಗಿದ್ದರು,(ಏಜೆನ್ಸೀಸ್).