ತೆಲುಗು ಹಿರಿಯ ನಟ ಮೋಹನ್ ಬಾಬು ಮತ್ತು ಪುತ್ರ ಮಂಚು ವಿಷ್ಣು ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲು | Mohan Babu

ಮೋಹನ್ ಬಾಬು ಮತ್ತು ಪುತ್ರ ಮಂಚು ವಿಷ್ಣು
ಮೋಹನ್ ಬಾಬು ಮತ್ತು ಪುತ್ರ ಮಂಚು ವಿಷ್ಣು
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವವಿದ್ಯಾಲಯದಲ್ಲಿ ಶುಲ್ಕ ವಸೂಲಿ ಮತ್ತು ಅಕ್ರಮ ಮಾಹಿತಿ
  • ವಿವಿ ವಿರುದ್ಧ ತನಿಖೆ ನಡೆಸುವಂತೆ ವಿದ್ಯಾರ್ಥಿಗಳಿಂದ ಪ್ರತಿಭಟನೆ
  • ಎಸ್​ಎಫ್​ಐ ಪ್ರಧಾನ ಕಾರ್ಯದರ್ಶಿ ಅಕ್ಬರ್ ಮತ್ತು ವಿನೋದ್ ಕಿಡ್ನಾಪ್
ತಿರುಪತಿ: ಆಂಧ್ರಪ್ರದೇಶದ ತಿರುಪತಿಯಲ್ಲಿ ತೆಲುಗು ಹಿರಿಯ ನಟ ಮೋಹನ್ ಬಾಬು(Mohan Babu) ಮತ್ತು ಅವರ ಪುತ್ರ ಮಂಚು ವಿಷ್ಣು ವಿರುದ್ಧ ವಿದ್ಯಾರ್ಥಿ ನಾಯಕರ ಅಪಹರಣ ಪ್ರಕರಣ ದಾಖಲಿಸಲಾಗಿದೆ ಎಂದು ಬುಧವಾರ(ಫೆ. 04) ವರದಿಯಾಗಿದೆ.
ಚಂದ್ರಗಿರಿ ಮಿತಿಯಲ್ಲಿರುವ ಮೋಹನ್ ಬಾಬು ಅವರ ವಿಶ್ವವಿದ್ಯಾಲಯದಲ್ಲಿ ಶುಲ್ಕ ವಸೂಲಿ ಮತ್ತು ಅಕ್ರಮಗಳ ಕುರಿತು ಮಾಹಿತಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಲು ತಿರುಪತಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಎಸ್​ಎಫ್​ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು ಎನ್ನಲಾಗಿದೆ. 
ಪ್ರತಿಭಟನೆ ನೇತೃತ್ವ ವಹಿಸಲು ತೆರಳುತ್ತಿದ್ದ ಎಸ್​ಎಫ್​ಐ ಪ್ರಧಾನ ಕಾರ್ಯದರ್ಶಿ ಅಕ್ಬರ್ ಮತ್ತು ಎಸ್‌ವಿಯು ವಿದ್ಯಾರ್ಥಿ ನಾಯಕ ವಿನೋದ್ ಅವರನ್ನು ಸುಮಾರು 30 ಜನರ ತಂಡವೊಂದು ವಾಹನದಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿತ್ತು ಎನ್ನಲಾಗಿದೆ.
ಈ ವಿಷಯ ತಿಳಿದ ಸಿಪಿಎಂ ನಾಯಕ ಕಂದರಪು ಮುರಳಿ, ಎಸ್ಪಿ ಸುಬ್ಬರಾಯಡು ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ತಿರುಚಾನೂರು ಸಿಐ ಸುನೀಲ್ ಕುಮಾರ್ ನೇತೃತ್ವದ ಮೂರು ತಂಡಗಳು ಅಪಹರಣಕಾರರನ್ನು ಬೆನ್ನಟ್ಟಿ ಒಂದೂವರೆ ಗಂಟೆಯೊಳಗೆ ವಿದ್ಯಾರ್ಥಿ ನಾಯಕರನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 
ಇನ್ನೂ ಅಪಹರಣಕ್ಕೊಳಗಾದ ವಿದ್ಯಾರ್ಥಿ ನಾಯಕರ ದೂರಿನನ್ವಯ ಪೊಲೀಸರು ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್​ಐಆರ್​ನಲ್ಲಿ ಮೋಹನ್​ ಬಾಬು ಎ, ಅವರ ಪುತ್ರ ಮಂಚು ವಿಷ್ಣು ಎ3 ಹಾಗೂ ವಿಶ್ವವಿದ್ಯಾಲಯದ ಪಿಆರ್​ಓ ಸತೀಶ್ ಅವರನ್ನು ಎ1 ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net