ಬಾಂಗ್ಲಾದಲ್ಲಿ ಖೋಕೋನ್ ಚಂದ್ರ ದಾಸ್ ಬರ್ಬರ ಹತ್ಯೆ : ಪೆಟ್ರೋಲ್ ಸುರಿದು ಸುಟ್ಟ ಮತಾಂಧರು | Khokon Chandra Das

ಡಿಸೆಂಬರ್ 31 ರಂದು ಬಾಂಗ್ಲಾದೇಶದಲ್ಲಿ ಗುಂಪೊಂದು ಖೋಕೋನ್ ದಾಸ್ ಎಂಬ ಹಿಂದೂ ಉದ್ಯಮಿಯನ್ನು ಬೆಂಕಿ ಹಚ್ಚಿತು
ಡಿಸೆಂಬರ್ 31 ರಂದು ಬಾಂಗ್ಲಾದೇಶದಲ್ಲಿ ಗುಂಪೊಂದು ಖೋಕೋನ್ ದಾಸ್ ಎಂಬ ಹಿಂದೂ ಉದ್ಯಮಿಯನ್ನು ಬೆಂಕಿ ಹಚ್ಚಿತು
Published on
ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾತ್ಮಕ ದಾಳಿ ಮುಂದುವರೆದಿದ್ದು, 50 ವರ್ಷದ ಉದ್ಯಮಿ ಖೋಕೋನ್ ಚಂದ್ರ ದಾಸ್(Khokon Chandra Das) ನಿಧನರಾಗಿದ್ದರಿಂದ ಬಾಂಗ್ಲಾದ ಹಿಂದೂ ಸಮುದಾಯ ನಲುಗಿದೆ. ಅಲ್ಲದೆ, ಇದು ಕೇವಲ 21 ದಿನಗಳಲ್ಲಿ ಹಿಂದೂಗಳ ಮೇಲೆ ನಡೆದ ನಾಲ್ಕನೇ ಮಾರಕ ದಾಳಿಯಾಗಿದೆ.

ಮಾರಕ ಆಕ್ರಮಣ

ಬಾಂಗ್ಲಾದ ಶರಿಯತ್‌ಪುರ ಜಿಲ್ಲೆಯ ದಾಮುದ್ಯ ಉಪಜಿಲ್ಲಾದಲ್ಲಿ ಹೊಸ ವರ್ಷದ ಕಳೆದ ಡಿಸೆಂಬರ್ 31 ಈ ದಾಳಿ ಸಂಭವಿಸಿದೆ. ಕುರ್ಭಂಗಾ ಬಜಾರ್‌ನಲ್ಲಿ ಔಷಧಾಲಯ ಮತ್ತು ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದ್ದ ಖೋಕೋನ್ ದಾಸ್ ರಾತ್ರಿ 9:30 ರ ಸುಮಾರಿಗೆ ಆಟೋರಿಕ್ಷಾದಲ್ಲಿ ಮನೆಗೆ ಹಿಂತಿರುಗುತ್ತಿದ್ದರು.
ಅಲ್ಲದೆ, ಈ ವೇಳೆ ದುಷ್ಕರ್ಮಿಗಳ ಗುಂಪೊಂದು ವಾಹನವನ್ನು ಅಡ್ಡಗಟ್ಟಿ, ದಾಸ್‌ನನ್ನು ಹೊರಗೆಳೆದು, ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿತು. ನಂತರ ದಾಳಿಕೋರರು ಆತನ ತಲೆ ಮತ್ತು ಮುಖದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು.

ಕಳೆದ 3 ವಾರಗಳಲ್ಲಿ 4 ಘಟನೆಗಳು

ಡಿಸೆಂಬರ್ ಮಧ್ಯಭಾಗದಿಂದ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುವ ಗುಂಪು ನ್ಯಾಯದಲ್ಲಿ ಭಯಾನಕ ಏರಿಕೆ ಕಂಡುಬಂದಿದೆ.
ಕಳೆದ ಡಿಸೆಂಬರ್ 18 ಮೈಮೆನ್ಸಿಂಗ್​ನಲ್ಲಿ ದೇವದೂಷಣೆ ಆರೋಪದ ಮೇಲೆ 25 ವರ್ಷದ ದೀಪು ಚಂದ್ರ ದಾಸ್​ರನ್ನು ಗುಂಪೊಂದು ಹೊಡೆದು ಕೊಂದಿತು.ಅವನ ದೇಹವನ್ನು ಮರಕ್ಕೆ ಕಟ್ಟಿ ಬೆಂಕಿ ಹಚ್ಚಲಾಯಿತು.
ಅಲ್ಲದೆ, 2025ರ ಡಿಸೆಂಬರ್ 24 ರಂದು ರಾಜ್‌ಬರಿ ಸುಲಿಗೆ ಆರೋಪದ ಮೇಲೆ ಅಮೃತ್ ಮಂಡಲ್ ಎಂಬ ಯುವಕನನ್ನು ಗುಂಪೊಂದು ಥಳಿಸಿ ಕೊಂದಿತ್ತು. ಮತ್ತೊಬ್ಬ ಹಿಂದೂ ವ್ಯಕ್ತಿ ಬಜವೇಂದ್ರ ಬಿಸ್ವಾಸ್​ರನ್ನು ಡಿಸೆಂಬರ್ 29ರಂದು ಸಹೋದ್ಯೋಗಿಯೊಬ್ಬರು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿತ್ತು.

ಘಟನೆಯ ಬಗ್ಗೆ ತನಿಖೆಗಳು

ಈ ಬಗ್ಗೆ ಹತ್ಯೆಯಾದ ಖೋಕೋನ್ ಪತ್ನಿ ಸಿಮಾ ದಾಸ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದು, ತನ್ನ ಪತಿ ಕನಿಷ್ಠ ಇಬ್ಬರು ದಾಳಿಕೋರರನ್ನು ಗುರುತಿಸಿದ್ದಾರೆ. ಇದು ಅಪರಾಧದ ಸಾಕ್ಷಿಯನ್ನು ಕೊಲ್ಲುವ ಪ್ರಯತ್ನವಾಗಿರಬಹುದು ಎಂದು ತಿಳಿಸಿದ್ದಾರೆ. ಅಲ್ಲದೆ, ರಬ್ಬಿ ಮತ್ತು ಸೊಹಾಗ್ ಎಂದು ಗುರುತಿಸಲಾದ ಇಬ್ಬರು ಸ್ಥಳೀಯ ನಿವಾಸಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಉಸ್ತುವಾರಿ ಅಧಿಕಾರಿ ಮೊಹಮ್ಮದ್ ರಬಿಯುಲ್ ಹಕ್ ದೃಢಪಡಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net