ಕೇವಲ 15 ಸೆಕೆಂಡ್ಗಳ ವಿಡಿಯೋ ಕ್ಲಿಪ್‌ನಲ್ಲಿ ಸಿಯಾ, ತನಗೆ ಬಂದ ದೂರವಾಣಿ ಕರೆಗೆ "ಯಾರಿದು? ಎಂದು ಮಾತು ಆರಂಭಿಸಿ, ಜೋರು ಮ್ಯೂಸಿಕ್ನ ನಡುವೆಯೂ ಸಂಭಾಷಣೆ ನಡೆಸಿದ್ದಾಳೆ. ಈ ವೇಳೆ, ಅಸಭ್ಯ ಪದಗಳಲ್ಲಿ ಬೈದು, ಮೊದಲು ನನಗೆ ದ್ರೋಹ ಬಗೆದು. ಈಗ ಕಾಲ್ ಮಾಡುತ್ತಾನೆ ಎಂದು ಹೇಳಿರುವುದು ರೆಕಾರ್ಡ್ ಆಗಿದೆ. ಪೊಲೀಸರಲ್ಲಿ ಈಗ ಅನುಮಾನ ಹೆಚ್ಚಾಗಿದ್ದು, ಮೋಸ ಮಾಡಿದ ಎನ್ನಲಾದ ವ್ಯಕ್ತಿ ಯಾರು? ಆತ ಈಕೆಯ ಬಾಯ್ಫ್ರೆಂಡ್ ಅಥವಾ ಮೃತ ಕೇತನ್? ಇಲ್ಲ ಇನ್ಯಾರಾದರೂ ಆಗಿರಬಹುದಾ? ಎಂದು ಶಂಕಿಸಿದ್ದಾರೆ.