`ಕಿರುಕುಳಕ್ಕೆ ಬಟ್ಟೆಯಲ್ಲ, ವಿಕೃತ ಮನಸ್ಥಿತಿ ಕಾರಣ'; ರೈಲಿನಲ್ಲಿ ಕೆಟ್ಟದಾಗಿ ನೋಡ್ತಿದ್ದ ವ್ಯಕ್ತಿ ವಿರುದ್ಧ ದೂರು ಕೊಟ್ಟ ಲೇಡಿ..​Kerala Train Harassment

Kerala Train Harassment
Kerala Train Harassment
Published on

ಪ್ರಮುಖ ಮುಖ್ಯಾಂಶಗಳು

  • ಕೇರಳದ ರೈಲಿನಲ್ಲಿ 50ಕ್ಕೂ ಹೆಚ್ಚು ವರ್ಷದ ವ್ಯಕ್ತಿಯಿಂದ ಅಸಭ್ಯ ವರ್ತನೆ
  • ಎರ್ನಾಕುಲಂ ಸೌತ್ ಆರ್‌ಪಿಎಫ್ ಪೊಲೀಸರಿಗೆ ದೂರು ಸಲ್ಲಿಕೆ.
  • ಲೈಂಗಿಕ ಸನ್ನೆ, ಕೆಟ್ಟ ನೋಟ ಬೀರುತ್ತಿದ್ದ ವ್ಯಕ್ತಿ ವಿಡಿಯೋ ಚಿತ್ರೀಕರಿಸಿದ ಯುವತಿ ​
ತಿರುವನಂತಪುರಂ: ವ್ಯಕ್ತಿಯೊಬ್ಬ ನನ್ನನ್ನು ಕೆಟ್ಟದಾಗಿ ನೋಡ್ತಿದ್ದ ಎಂದು ಯಾರ ಬಳಿಯಾದರೂ ಮಾತನಾಡಿದ್ರೆ, ನಿನ್ನ ಬಟ್ಟೆ ಸರಿ ಇಲ್ಲ ಅಂತ ಕಾಣತ್ತೆ ಎಂದು ನಮ್ಮನ್ನೇ ದೂರುತ್ತಾರೆ. ಅತ್ಯಾಚಾರ ಆಗೋಕೆ ಆಕೆಯ ಬಟ್ಟೆ ಕಾರಣ ಅಂತಾರೆ. ಆದರೆ, ವಿಚಾರ ಅದಲ್ಲ ನಾನು ರೈಲಿನಲ್ಲಿ ಪ್ರಯಾಣಿಸುವಾಗ ಕುರ್ತಾ ಧರಿಸಿದ್ದೆ ಆದರೂ ನನನ್ನು ನೋಡಿ ಲೈಂಗಿಕ ಸನ್ನೆ (Kerala Train Harassment) ಮಾಡುತ್ತಿದ್ದ. ನಮ್ಮನ್ನು ನೋಡುವ ಮನಸ್ಥಿತಿ ಸರಿ ಇರಬೇಕು ಅಷ್ಟೇ ಎಂದು ಕೇರಳದ ರೈಲೊಂದರಲ್ಲಿ ಯುವತಿ ಅನುಭವಿಸಿದ ಕಹಿ ಘಟನೆ ಬಗ್ಗೆ ಹಂಚಿಕೊಂಡಿದ್ದಾರೆ. 
ಸಾರ್ವಜನಿಕ ಸ್ಥಳ ಅದರಲ್ಲೂ ರೈಲುಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ನಿಜಕ್ಕೂ ಅಸುರಕ್ಷತೆ ಕಾಡೋದು ಸಹಜ. ಕಳೆದ ವರ್ಷ 2025ರಲ್ಲಿ ಲೈಂಗಿಕ ಕಿರುಕುಳಕ್ಕೆ ಯತ್ನಿಸುತ್ತಿದ್ದಾಗ ಹೈದರಾಬಾದ್​ನಲ್ಲಿ ಯುವತಿಯೊಬ್ಬರು ರೈಲಿನಿಂದ ಕೆಳಕ್ಕೆ ಹಾರಿ ಸಣ್ಣಪುಟ್ಟ ಗಾಯ ಮಾಡಿಕೊಂಡಿದ್ದ ಘಟನೆ ನಡೆದಿತ್ತು. ಇಂತಹ ಪ್ರಕರಣ ಹೆಚ್ಚುತ್ತಿದ್ದರೂ ಸಹ ಮಹಿಳೆಯರ ಬಗ್ಗೆ ಆಯಾ ರಾಜ್ಯದ ಸರ್ಕಾರಗಳು ಕಾಳಜಿ ವಹಿಸುತ್ತಿಲ್ಲ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ. 

ಲೈಂಗಿಕ ಕಿರುಕುಳ?

ಎಲೀನಾ ಎಲಿಜಬೆತ್ ಕುರಿಯನ್ ಎಂಬ ಯುವತಿ ಒಬ್ಬಂಟಿಯಾಗಿ ಕೇರಳದ ರೈಲೊಂದರಲ್ಲಿ (kerala Train) ಪ್ರಯಾಣಿಸುತ್ತಿದ್ದರು. ಈ ವೇಳೆ ಸಹ ಪ್ರಯಾಣಿಕನೊಬ್ಬ ಅಸಭ್ಯವಾಗಿ ವರ್ತಿಸಿರುವ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಎಲೀನಾ ಅವರು ಮಾ.15ರಂದು ಚಂಗನಾಚೇರಿಯಿಂದ ಎರ್ನಾಕುಲಂ ಸೌತ್​ಗೆ ವಂಚಿನಾಡ್​ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುತ್ತಿದ್ದರು. ಅವರು ಮೇಲಿನ ಬರ್ತ್​​ನಲ್ಲಿ ಕುಳಿತಿದ್ದರು. ಅವರಿಗೆ ಸರಿಯಾಗಿ ಕಾಣುವಂತೆ 50 ರಿಂದ 60 ವರ್ಷ ವ್ಯಕ್ತಿಯೊಬ್ಬ ಕೆಳಗಿನ ಬರ್ತ್​ನಲ್ಲಿ ಕುಳಿತಿದ್ದ. ಆಕೆಯನ್ನೇ ದಿಟ್ಟಿಸಿ ನೋಡುತ್ತ ಕುಳಿತ ಅವನು ಕೆನ್ನೆಯ ಮೇಲೆ ಕೈಯಿಟ್ಟುಕೊಂಡು ಅಸಭ್ಯವಾಗಿ ಸನ್ನೆಗಳನ್ನು ಮಾಡಲು ಶುರು ಮಾಡಿದ. ವ್ಯಕ್ತಿಯ ಈ ನಡೆಯಿಂದ ಬೇಸತ್ತ ಎಲೀನಾ ಅವರು ವಿಡಿಯೋ ಚಿತ್ರೀಕರಿಸಿ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
ಗಂಡಸರು ನಮ್ಮನ್ನು ದುರುಗುಟ್ಟಿ ನೋಡುತ್ತಾರೆ ಎಂದರೆ ನೀನು ಯಾವ ಬಟ್ಟೆ ಧರಿಸಿದ್ದೆ, ಹೀಗಾಗಿಯೇ ಅವರು ನಿನ್ನನ್ನು ಕೆಟ್ಟದಾಗಿ ನೋಡಿರುತ್ತಾರೆ ಎಂದು ಹೇಳೋರೆ ಹೆಚ್ಚು. ಆದರೆ. ಅಂದು ನಾನು ಕುರ್ತಾ, ಲೂಸ್ ಪ್ಯಾಂಟ್ ಮತ್ತು ಮಾಸ್ಕ್  ಹಾಕಿಕೊಂಡಿದ್ದೆ. ಕಿರುಕುಳಕ್ಕೂ ನಾವು ಹಾಕುವ ಬಟ್ಟೆಗೂ ಸಂಬಂಧ ಇಲ್ಲ. ನೋಡುವ ನೋಟ ಮನಸ್ಥಿತಿ ಸರಿ ಇರ್ಬೇಕು. ಇದಕ್ಕೆ ಈ ವಿಡಿಯೋನೇ ಉದಾಹರಣೆ ಎಂದು ಆಕೆ ಹೇಳಿಕೊಂಡಿದ್ದಾರೆ.

ವ್ಯಕ್ತಿ ವಿರುದ್ಧ ದೂರು

ಕಳೆದ ಬಾರಿ ನಾನು ರೈಲಿನಲ್ಲಿ ಪ್ರಯಾಣಿಸುವಾಗ ವ್ಯಕ್ತಿಯೊಬ್ಬ ನನ್ನ ಖಾಸಗಿ ಅಂಗಾಗ ಮುಟ್ಟಿದ್ದ. ಅಂದು ನಾನು ಸುಮ್ಮನಿದ್ದೆ ಆದರೆ, ಇಂದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಎರ್ನಾಕುಲಂ ಸೌತ್​​ ಆರ್​ಪಿಎಫ್​ ಪೊಲೀಸರಿಗೆ ದೂರು ನೀಡಿದ್ದಾರೆ. ಸಾಕ್ಷಿಗಾಗಿ ವಿಡಿಯೋವನ್ನು ಹಸ್ತಾಂತರಿಸಿದ್ದು, ಪೊಲೀಸರು ಕ್ರಮ ಕೈಗೊಳ್ಳುವ ಭರಸವೆ ನೀಡಿದ್ದಾರೆ ಎನ್ನಲಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net