"ಕೇರಳ ಸ್ಟೋರಿ-2 ಚಿತ್ರಮಂದಿರಗಳಲ್ಲಿ ಖಾಲಿ ಹೊಡೆಯುತ್ತಿದೆ ಎಂಬುದು ಉತ್ತಮ ವಿಷಯ. ಇದು ಕೇರಳದ ಸಂಸ್ಕೃತಿ ಮತ್ತು ಪರಂಪರೆಯನ್ನು ವಿಭಜಿಸಲು ಪ್ರಯತ್ನಿಸುವವರಿಗೆ ನೀಡಿದ ಉತ್ತರ," ಎಂದು ರಾಹುಲ್ ಹೇಳಿದರು. ಚಲನಚಿತ್ರಗಳು ಮತ್ತು ಮಾಧ್ಯಮಗಳನ್ನು ಜನರನ್ನು ವಿಭಜಿಸಲು, ಒಂದು ಸಮುದಾಯವನ್ನು ಗುರಿಯಾಗಿಸಲು ಮತ್ತು ಸಮಾಜದಲ್ಲಿ ದ್ವೇಷ ಬಿತ್ತಲು 'ಅಸ್ತ್ರ'ಗಳಾಗಿ ಬಳಸಲಾಗುತ್ತಿದೆ ಎಂದು ಅವರು ದೂರಿದರು. ಕೇರಳದ ಜನರು ಒಗ್ಗಟ್ಟು ಮತ್ತು ಪ್ರೀತಿಯಿಂದ ಬದುಕುವವರು. ರಾಜ್ಯದ ಘನತೆಗೆ ಧಕ್ಕೆ ತರುವಂತಹ ಪ್ರಯತ್ನಗಳನ್ನು ಇಲ್ಲಿನ ಜನರು ಸ್ವೀಕರಿಸುವುದಿಲ್ಲ ಎಂಬುದಕ್ಕೆ ಈ ಚಿತ್ರದ ವೈಫಲ್ಯವೇ ಸಾಕ್ಷಿ ಎಂದರು. ಇದೇ ಸಂದರ್ಭದಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ಆರ್‌ಎಸ್‌ಎಸ್ ಸಿದ್ಧಾಂತದ ಒತ್ತಡ ಹೆಚ್ಚುತ್ತಿದೆ ಮತ್ತು ಕುಲಪತಿಗಳ ನೇಮಕಾತಿಯಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.