ಫಿಫಾ ವಿಶ್ವಕಪ್ ಫೈನಲ್ ಹಿನ್ನೆಲೆ ಕೇರಳದ ಶಾಲಾ-ಕಾಲೇಜುಗಳಿಗೆ ರಜೆ
ಸೋಮವಾರ ಕುಲೈ 20 ರಂದು ರಜೆ ಘೋಷಿಸಿದ ಸಿಎಂ ವಿ.ಡಿ. ಸತೀಶನ್
ಅರ್ಜೆಂಟೀನಾ vs ಸ್ಪೇನ್ ನಡುವೆ ನಡೆಯಲಿರುವ ಫೈನಲ್ ಪಂದ್ಯ
ತಿರುವನಂತಪುರ: ಕೇರಳದವರಿಗೆ ಫುಟ್ಬಾಲ್ ಎಂದರೆ ಅದು ಕೇವಲ ಕ್ರೀಡೆಯಲ್ಲ, ಅದೊಂದು ಅಲ್ಲಯ ಜನರ ಅವಿಭಾಜ್ಯ ಅಂಗ ಎಂದರೂ ತಪ್ಪಾಗದು. ಸ್ಥಳೀಯ ಮಟ್ಟದಲ್ಲಿ ನಡೆಯುವ ಕ್ಲಬ್ ಪಂದ್ಯಗಳಿಂದ ಹಿಡಿದು, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ತಪ್ಪದೇ ನೋಡುನ ಜನ ಎಂದರೆ ಅದು ಮಳಿಯಾಳಿಗಳಾಗಿದ್ದಾರೆ.
ಹೀಗಾಗಿ ಇಂದು ರಾತ್ರಿ (ಭಾನುವಾರ, ಜು.19) ನಡೆಯಲಿರುವ ವಿಶ್ವ ಪ್ರಸಿದ್ಧ ಫಿಫಾ ವಿಶ್ವಕಪ್ ಫೈನಲ್ ಪಂದ್ಯಾವಳಿ ಮುಗಿಯಲು ಮಧ್ಯರಾತ್ರಿಯಾಗುವ ಕಾರಣ ಸೋಮವಾರ (ಜು.20) ಕೇರಳದಾದ್ಯಂತ ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರ ರಜೆ (Kerala School Holiday for FIFA Final) ಘೋಷಿಸಿದೆ.
ಫೈನಲ್ ಪಂದ್ಯ ಮುಗಿಯಲು ಹೆಚ್ಚು ಕಡಿಮೆ ಬೆಳಗ್ಗಿನ ಜಾವ 3-4 ಆಗುವ ಕಾರಣ, ಮಕ್ಕಳು ನಿದ್ದೆಗೆಟ್ಟು ಪಂದ್ಯ ನೋಡಿದರೆ, ಮರುದಿನ ಶಾಲೆಗೆ ಬರುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ವಿ.ಡಿ. ಸತೀಶನ್ ಸರ್ಕಾರ ರಜೆಯನ್ನು ನೀಡಿದೆ.
ಸೋಷಿಯಲ್ ಮೀಡಿಯಾನಲ್ಲಿ ಒತ್ತಾಯ; ಮಣಿದ ಸರ್ಕಾರ!
ಜು. 19 ರ ಮಧ್ಯರಾತ್ರಿ ಪಂದ್ಯ ಆರಂಭವಾಗುವ ಕಾರಣ ಮಾರನೇ ದಿನ ಶಾಲೆಗೆ ಬರಲು ಕಷ್ಟವಾಗುತ್ತದೆ, ಮುಖ್ಯಮಂತ್ರಿಗಳೇ ದಯವಿಟ್ಟು ರಜೆ ನೀಡಿ ಎಂದು ಕೇರಳದ ಮಕ್ಕಳು ಸೋಷಿಯಲ್ ಮೀಡಿಯಾನಲ್ಲಿ ಮನವಿ ಮಾಡಿದ್ದರು.
ಮಕ್ಕಳ ಮನವಿ ಹಾಗೂ ಕೇರಳದ ಫುಟ್ಬಾಲ್ ಕ್ರೇಜ್ ಬಗ್ಗೆ ಗೊತ್ತಿರುವ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಸೋಮವಾರ ಕೇರಳದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಎಲ್ಲರೂ ಖುಷಿಯಿಂದ ಫಿಫಾ ಫೈನಲ್ ಮ್ಯಾಚ್ ನೋಡಿ ಎಂದು ಹೇಳಿದ್ದಾರೆ. ಆದರೆ ಕೇರಳದಲ್ಲಿ ನಡೆಯುತ್ತಿರುವ ಲೋಕಸೇವಾ ಆಯೋಗದ ಪರೀಕ್ಷೆ ಹಾಗೂ ವಿಶ್ವ ವಿದ್ಯಾಲಯದ ಪರೀಕ್ಷೆಗಳಿಗೆ ಈ ರಜೆ ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಭಾರಿಯ ಫಿಫಾ ವಿಶ್ವಕಪ್ ಅನ್ನು ಅಮೆರಿಕ, ಮೆಕ್ಸಿಕೊ ಹಾಗೂ ಕೆನಡ ದೇಶಗಳು ಜಂಟಿಯಾಗಿ ಆಯೋಜನೆ ಮಾಡಿದ್ದು, ಇಂದು ಮಧ್ಯರಾತ್ರಿ ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ಸ್ಪೇನ್ ಹಾಗೂ ಅರ್ಜೆಂಟೀನಾ ಮುಖಾಮುಖಿ ಆಗಲಿದ್ದು, ಕ್ರೀಡಾಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸುತ್ತಿದ್ದಾರೆ.
ಅರ್ಜೆಂಟೀನಾ ತಂಡದ ಸ್ಟಾರ್ ಆಟಗಾರ ಲಿಯೊನಲ್ ಮೆಸ್ಸಿ ಮೇಲೆ ಎಲ್ಲರ ಕಣ್ಣಿದ್ದರೆ, ಇತ್ತ ಸ್ಪೇನ್ ತಂಡ ಮತ್ತೊಮ್ಮೆ ಫಿಫಾ ಕಪ್ ಗೆಲ್ಲಿಸಲು ಲ್ಯಾಮಿನ್ ಯಮಲ್ ಸಿದ್ಧರಾಗಿದ್ದಾರೆ. ಆದರೆ ಈ ಪಂದ್ಯಾವಳಿಯಲ್ಲಿ ಅಂತಿಮವಾಗಿ ಯಾರು ಗೆಲ್ಲುತ್ತಾರೆ? ಫಿಫಾ 2026 ರ ಚಾಂಪಿಯನ್ಸ್ ಯಾರಾಗುತ್ತಾರೆ? ಎಂದು ಇಂದು ಮಧ್ಯರಾತ್ರಿ ತಿಳಿದು ಬರಲಿದೆ, (ಏಜನ್ಸೀಸ್).