ಎಐ ಮೂಲಕ ಜಿಪ್​ಲೈನ್ ಅಪಘಾತದ ವಿಡಿಯೋ ಸೃಷ್ಟಿ; ಕೇರಳದ ಯುವಕನನ್ನು ಬಂಧಿಸಿದ ಪೊಲೀಸರು| Arrest

ಬಂಧಿತ ಆರೋಪಿ ಕೆ. ಅಶ್ಕರ್
ಬಂಧಿತ ಆರೋಪಿ ಕೆ. ಅಶ್ಕರ್
Published on
ಅಲಪ್ಪುಳ: ಕೃತಕ ಬುದ್ದಿಮತ್ತೆ(AI) ಆಧಾರಿತ ಮಹಿಳೆ ಮತ್ತು ಮಗುವನ್ನು ಒಳಗೊಂಡ ಜಿಪ್​ಲೈನ್ ಅಪಘಾತವನ್ನು ಸೃಷ್ಟಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣ ಸಂಬಂಧಿಸಿದಂತೆ ವಯನಾಡ್ ಸೈಬರ್ ಕ್ರೈಂ ಪೊಲೀಸರು ಅಲಪ್ಪುಳ ಜಿಲ್ಲೆಯ 29 ವರ್ಷದ ಯುವಕನೊಬ್ಬನನ್ನು ಬಂಧಿಸಿದ್ದಾರೆ(Arrest) ಎಂದು ವರದಿಯಾಗಿದೆ.
ಬಂಧಿತ ವ್ಯಕ್ತಿಯನ್ನು ಆಲಪ್ಪುಳ ಜಿಲ್ಲೆಯ ತೈವೇಲಿಕ್ಕಂನ ತಿರುವಂಬಾಡಿಯ ಕೆ. ಅಶ್ಕರ್(29) ಎಂದು ಗುರುತಿಸಲಾಗಿದ್ದು, ಸೋಮವಾರ ಸಂಜೆ ವಶಕ್ಕೆ ಪಡೆಯಲಾಗಿದೆ. ಇನ್ನು ಆತನು ರಚಿಸಿರುವ ವಿಡಿಯೋವನ್ನು 'ಅಷ್ಕರ್ ಅಲಿ ರಿಯಾಕ್ಟ್' ಎಂಬ ಇನ್​ಸ್ಟಾಗ್ರಾಂ ಖಾತೆ ಮೂಲಕ ಹರಿಬಿಟ್ಟಿದ್ದು ವ್ಯಾಪಕವಾಗಿ ಪ್ರಸಾರವಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
ಈ ವಿಡಿಯೋ ವೈರಲ್ ಆದ ಬಳಿಕ, ವಯನಾಡ್ ಸೈಬರ್ ಪೊಲೀಸರು ಅ. 30 ರಂದು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದರು. ಅಂತಿಮವಾಗಿ ಆರೋಪಿಯನ್ನು ಅಲಪ್ಪುಳದಲ್ಲಿ ಪತ್ತೆ ಹಚ್ಚಿದ್ದಾರೆ. ಬಂಧಿತ ಅಶ್ಕರ್ ವಿರುದ್ಧ ಕೊಲೆ ಯತ್ನ, ಹಲ್ಲೆ ಮತ್ತು ಮಾದಕವಸ್ತು ಸಂಬಂಧಿತ ಅಪರಾಧಗಳು ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಿವೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ವಯನಾಡ್ ಎಸ್​ಪಿ, ಭಯ ಅಥವಾ ದ್ವೇಷವನ್ನು ಪ್ರಚೋದಿಸುವ ಮತ್ತು ಸಾರ್ವಜನಿಕ ನಂಬಿಕೆ ಅಥವಾ ಸ್ಥಳೀಯ ಆರ್ಥಿಕತೆಗೆ ಹಾನಿ ಮಾಡುವ ಇಂತಹ ದಾರಿತಪ್ಪಿಸುವ AI ವೀಡಿಯೊಗಳನ್ನು ರಚಿಸಿ ಹರಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net