ಅಧಿಕೃತ ಎಸ್‌ಎಸ್‌ಎಲ್‌ಸಿ (SSLC) ಅಂಕಪಟ್ಟಿಯ ಪ್ರಕಾರ ಅವರ ಜನ್ಮ ದಿನಾಂಕ ಮೇ 27, 1966 ಎಂದಿದೆ. ಅಂದರೆ ಕಳೆದ ವಾರವಷ್ಟೇ (ಮೇ 27, 2026) ಅವರಿಗೆ 60 ವರ್ಷ ತುಂಬಿ ನಿವೃತ್ತಿಯ ವಯೋಮಿತಿಯನ್ನು ಮೀರಿದ್ದಾರೆ. ಆದರೆ, ಮಜೀದ್ ಅವರ ವಾದವೇ ಬೇರೆ ಇದೆ. ತಾವು ಜನಿಸಿದ್ದು ಮೇ 27, 1967 ರಲ್ಲಿ, ಅಂದರೆ ದಾಖಲೆಗಿಂತ ಒಂದು ವರ್ಷ ತಡವಾಗಿ ಜನಿಸಿರುವುದಾಗಿ ಅವರು ವಾದಿಸುತ್ತಿದ್ದಾರೆ.