ಪಹಲ್ಗಾಮ್​ ಉಗ್ರರ ದಾಳಿ ಪರ ಪೋಸ್ಟ್: ಸೌದಿಯಿಂದ ಬರುತ್ತಿದ್ದಂತೆ ಕೇರಳ ಏರ್‌ಪೋರ್ಟ್‌ನಲ್ಲಿ ಯುವಕನ ಬಂಧನ..Pahalgam

Kerala man arrested for supporting Pahalgam attack
Kerala man arrested for supporting Pahalgam attack
Published on

ಪ್ರಮುಖ ಮುಖ್ಯಾಂಶಗಳು

  • ಪಹಲ್ಗಾಮ್ ಭಯೋತ್ಪಾದಕ ದಾಳಿ ಬೆಂಬಲಿಸಿ ಕಾಮೆಂಟ್ ಮಾಡಿದ್ದ ಯುವಕ ಬಂಧನ
  • ಸೌದಿ ಅರೇಬಿಯಾದಿಂದ ಕೋಝಿಕ್ಕೋಡ್‌ನ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಅರೆಸ್ಟ್
  • ದೇಶವಿರೋಧಿ ಕಾಮೆಂಟ್ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ಕಠಿಣ ಕಾನೂನಿನ ಅಡಿ ಪ್ರಕರಣ ದಾಖಲು.
ಇಡುಕ್ಕಿ: 2025 ಏಪ್ರಿಲ್ 22ರಂದು ಜಮ್ಮು ಕಾಶ್ಮೀರ್ ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇದನ್ನು ಬೆಂಬಲಿಸಿ ಕೇರಳದ ಯುವಕನೊಬ್ಬ ಸೋಶಿಯಲ್​ ಮೀಡಿಯಾದಲ್ಲಿ ದೇಶವಿರೋಧಿ ಕಾಮೆಂಟ್​ ಮಾಡಿದ್ದ. ಸದ್ಯ ಆತನನ್ನು  ಪೊಲೀಸರು ಬಂಧಿಸಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ' ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ಬಂಧಿತ ಆರೋಪಿ ಎರ್ನಾಕುಲಂ ಜಿಲ್ಲೆಯ ನಾರ್ತ್ ಪರವೂರ್ ನಿವಾಸಿ ಮೊಹಮ್ಮದ್ ಸನೂಪ್  ಎಂದು ಪೊಲೀಸರು ಗುರುತಿಸಿದ್ದಾರೆ. ಈತ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ. ಶುಕ್ರವಾರ ಮುಂಜಾನೆ ಕರಿಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ, ಮಾಹಿತಿ ಪಡೆದುಕೊಂಡ ಕರಿಪುರ ಪೊಲೀಸರು ಆತನನ್ನು ಕೂಡಲೇ ವಶಕ್ಕೆ ಪಡೆದಿದ್ದಾರೆ.

ಏನಿದು ಘಟನೆ?

ಕಳೆದ ಒಂದು ವರ್ಷದ ಹಿಂದೆ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮಲಯಾಳಿ ಮೂಲದ ರಾಮಚಂದ್ರನ್ ಎಂಬುವವರು ಮೃತಪಟ್ಟಿದ್ದರು. ಈ ಭೀಕರ ಘಟನೆಯ ಬಗ್ಗೆ  ವರದಿ ಮಾಡಲಾಗಿತ್ತು. ವರದಿಯಲ್ಲಿ ಮೃತ ರಾಮಚಂದ್ರನ್ ಅವರ ಪುತ್ರಿಯ ಹೇಳಿಕೆಯೂ ಇತ್ತು. ಆರೋಪಿ ಮೊಹಮ್ಮದ್ ಸನೂಪ್ ಆ ಮಾಧ್ಯಮದ ವರದಿಯ ಕೆಳಗೆ ಅತ್ಯಂತ ಆಕ್ಷೇಪಾರ್ಹ ಹಾಗೂ ದೇಶವಿರೋಧಿ ಕಾಮೆಂಟ್ ಮಾಡಿದ್ದನು.
ವಿದೇಶದಲ್ಲಿದ್ದಾಗ ಈ ಬಗ್ಗೆ ಕಾಮೆಂಟ್​ ಮಾಡಿದ್ದನ್ನು ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಅಡೀನಾ ಭಾರತಿ  ಅವರು  ಸ್ಕ್ರೀನ್‌ಶಾಟ್  ತೆಗೆದುಕೊಂಡು ತೇಡುಪುಳದ ಮುಟ್ಟಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು  ಆತನ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಿದ್ದರು. 

ಯುವಕ ಅರೆಸ್ಟ್

ಶುಕ್ರವಾರ ಮೊಹಮ್ಮದ್ ಸನೂಪ್  ಮುಂಜಾನೆ ಸೌದಿ ಅರೇಬಿಯಾದಿಂದ ಕರಿಪುರ ವಿಮಾನ ನಿಲ್ದಾಣಕ್ಕೆ ಸನೂಪ್ ಬರುತ್ತಿದ್ದಂತೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನನ್ನು ಮುಟ್ಟಂ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಬಂಧಿತ ಆರೋಪಿಯನ್ನು ಮುಟ್ಟಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್​ ಮೂಲಗಳು ಮಾಹಿತಿ ಹಂಚಿಕೊಂಡಿದೆ.

ಬಿಜೆಪಿ ಕಿಡಿ

"ಪಹಲ್ಗಾಮ್ ಉಗ್ರರ ದಾಳಿಯಲ್ಲಿ ನಮ್ಮದೇ ಕೇರಳದ ವ್ಯಕ್ತಿಯೊಬ್ಬರು ಕ್ರೂರವಾಗಿ ಹತ್ಯೆಯಾಗಿದ್ದನ್ನು ಸಂಭ್ರಮಿಸುವ ಮಟ್ಟಿಗೆ ಮಲಯಾಳಿ ಯುವಕನೊಬ್ಬನ ಮಿದುಳು ತೊಳೆಯಲ್ಪಟ್ಟಿರುವುದು ಹೇಗೆ?". ಇದೊಂದು ಎಚ್ಚರಿಕೆಯ ಗಂಟೆಯಾಗಿದ್ದು, ಇದು ಕೇವಲ ಪ್ರತ್ಯೇಕ ಘಟನೆಯಲ್ಲ, ಬದಲಿಗೆ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪಕ್ಷಗಳ ವರ್ಷಗಳ ತುಷ್ಟೀಕರಣ, ಮೂಲಭೂತವಾದ ಮತ್ತು ರಾಜಕೀಯ ಬೂಟಾಟಿಕೆಯ ಫಲಿತಾಂಶವಾಗಿದೆ ಎಂದು  ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net