ಕಣ್ಣೂರಿನಲ್ಲಿ ಓಣಂ ಸಂಭ್ರಮ; ವಿದ್ಯಾರ್ಥಿನಿಯ ಕಿಡ್ನಿ ಕಸಿಗಾಗಿ ಹೂ ಮಾರಾಟ ಮಾಡುತ್ತಿರುವ ಯುವಕರು, ಸ್ಥಳೀಯರಿಂದಲೂ ಸಾಥ್​..Kannur

Kannur residents raise funds for kidney transplant of class 11 student through flower sale ahead of Onam
Kannur residents raise funds for kidney transplant of class 11 student through flower sale ahead of Onam
Published on

ಪ್ರಮುಖ ಮುಖ್ಯಾಂಶಗಳು

  • ಕಣ್ಣೂರಿನಲ್ಲಿ ಓಣಂ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವ ವಿದ್ಯಾರ್ಥಿಗಳು.
  • 11ನೇ ತರಗತಿ ವಿದ್ಯಾರ್ಥಿಯ ಮೂತ್ರಪಿಂಡ ಕಸಿಗಾಗಿ ಹಣ ಸಂಗ್ರಹ.
  • ಹೂ ಮಾರುಕಟ್ಟೆ ತೆರೆದು ಸಿಗುವ ಲಾಭದ ಮೂಲಕ ಯುವತಿಯ ಚಿಕಿತ್ಸೆಗೆ ಹಣ ಸಂಗ್ರಹ.

Kannur residents raise funds for kidney transplant of class 11 student : 

ಕೇರಳದಲ್ಲಿ ಓಣಂ ಒಂದು ಪ್ರಸಿದ್ಧಿ ಹಬ್ಬ..ಬಿಳಿ ಸೀರೆ, ಕುರ್ತಾ ಧರಿಸಿ...ಬಣ್ಣ ಬಣ್ಣದ ಚೆಂಡು ಹೂ ಗಳಿಂದ ಸಿಂಗರಿಸಿ. ಬಾಳೆ ಎಲೆ ಮೇಲೆ  ತರಹೇವಾರಿ ಆಹಾರ ಬಡಿಸಿಕೊಂಡು ತಿನ್ನುವುದು ಸಂಪ್ರದಾಯ. ಅದರಂತೆ ಇದೊಂದು  ಸಂಭ್ರಮ-ಸಡಗರ ಹಾಗೂ ಮಾನವೀಯತೆಯ ಪ್ರತೀಕ. ಸದ್ಯ ಕಣ್ಣೂರಿನ ಚಾಲಾ ಪಟ್ಟಣದ ಯುವಕರು ಅರ್ಥ ಪೂರ್ಣವಾಗಿ ಹಬ್ಬವನ್ನು ಆಚರಿಸಿದ್ದಾರೆ.

ಹೌದು, ಓಣಂ ಸಮಯದಲ್ಲಿ ಹೆಚ್ಚಾಗಿ ಮಾರಾಟವಾಗುವ ಹೂವನ್ನೇ ಆದಾಯದ ಮೂಲವನ್ನಾಗಿಸಿಕೊಂಡು, 11ನೇ ತರಗತಿಯ ವಿದ್ಯಾರ್ಥಿನಿ ಶ್ರೀದೇವಿನಾ ಅವರ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಾಗಿ ಧನಸಂಗ್ರಹಿಸುವ ಅಭಿಯಾನವನ್ನು ಆರಂಭಿಸಿದ್ದಾರೆ. 

ಕಿಡ್ನಿ ಕಸಿಗಾಗಿ ಹೋರಾಟ

ಚಾಲಾದಲ್ಲಿ ವ್ಯಾಸಂಗ ಮಾಡುತ್ತೀರುವ ಶ್ರೀ ದೇವಿನಾ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಅವರು ನಿತ್ಯ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಿದೆ. ಈ ದುಬಾರಿ ಚಿಕಿತ್ಸೆಯು ಆಕೆಯ ಕುಟುಂಬದ ಮೇಲೆ ತೀವ್ರ ಆರ್ಥಿಕ ಹೊರೆಯನ್ನುಂಟು ಮಾಡಿರುವ ಹಿನ್ನೆಲೆ,  ಕಿಡ್ನಿ ಕಸಿ ಮುಂದಿನ ಆರೈಕೆಗಾಗಿ ಸುಮಾರು 30 ಲಕ್ಷ ರೂಪಾಯಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದ್ದು, ಅದರ ವೆಚ್ಚ ಭರಿಸುವ ಸಲುವಾಗಿ ಧನ ಸಂಗ್ರಹ ಮಾಡುವ ಅಭಿಯಾನವನ್ನು ಮಾಡಲಾಗುತ್ತಿದೆ.

ಹೂ ಅಂಗಡಿ ಸ್ಥಾಪನೆ

ಶ್ರೀ ದೇವಿನಾ ಕುಟುಂಬದ ಸಮಸ್ಯೆ ಅರೆತ  ವಿದ್ಯಾರ್ಥಿಗಳು 'ಚಾಲಾ ಚಾಂಗ್ಸ್' ಎನ್ನುವ ಸಮಿತಿ ರಚಿಸಿ ಸ್ಥಳೀಯರು ಮತ್ತು  ಮತ್ತು ವ್ಯಾಪಾರಿಗಳೊಂದಿಗೆ ಕೈಜೋಡಿಸಿ ನಿಧಿ ಸಂಗ್ರಹಕ್ಕೆ ಮುಂದಾಗಿದೆ. ಇದರ ಭಾಗವಾಗಿ ಕರ್ನಾಟಕ ಹಾಗೂ ಇತರೆಡೆಗಳಿಂದ ಸುಮಾರು 2.5 ಲಕ್ಷ ಮೌಲ್ಯದ ಹೂವುಗಳನ್ನು ತರಿಸಿ ಚಾಲಾದ ವಿವಿಧೆಡೆ ಮಳಿಗೆಗಳನ್ನು ತೆರೆಯಲಾಗಿದೆ.
ನಾವು ಎಂದಿನಂತೆ ನಿತ್ಯ ವ್ಯಾಪಾರ ಮಾಡುತ್ತಿದ್ದೆವು ಆದರೆ, ಈಗ ಆ ಮಗುವಿನ ಆರೋಗ್ಯಕ್ಕಾಗಿ, ಹಣ ಸಂಗ್ರಹ ಮಾಡುವ ಸಲುವಾಗಿ ಲಾಭ ಗಳಿಸುವುದನ್ನು ಬದಿಗಿಟ್ಟಿದ್ದೇವೆ ಎಂದು ಗುಂಪಿನ ಸದಸ್ಯರೊಬ್ಬರು ಮಾಧ್ಯಮಗಳಿಗೆ ಮಾಹಿತಿ ಕೊಟ್ಟರು.
ಹೂವಿನಿಂದ ಬರುವ ಸಂಪೂರ್ಣ ಹಣವನ್ನು ಯುವತಿಗಾಗಿ ಇಡಲಾಗಿದೆ. ಇಷ್ಟೇ ಅಲ್ಲದೇ ಯುವಕರ ಈ ಕಾರ್ಯ ಕಂಡ ಕೆಲವರು  ಕಿಡ್ನಿ ದಾನ ಮಾಡಲು ಸಹ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಇಲ್ಲಿ ಯಾವುದೇ ಜಾತಿ, ಧರ್ಮ ಅಥವಾ ರಾಜಕೀಯವಿಲ್ಲ. ಈ ಹೆಣ್ಣುಮಗಳ ಜೀವ ಉಳಿಸುವ ಒಂದೇ ಒಂದು ಉದ್ದೇಶದಿಂದ ಎಲ್ಲರೂ ಒಂದಾಗಿ ಬಂದಿದ್ದಾರೆ ಎಂದು ಕೆಲವರು ಹರ್ಷ ವ್ಯಕ್ತಪಡಿಸಿದರು. 
ಚಾಲಾ ಮತ್ತು ಕಣ್ಣೂರಿನ ಇತರ ಭಾಗಗಳಲ್ಲಿಯೂ ಹೆಚ್ಚಿನ ಹೂವಿನ ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ಯುವಕರು ಮತ್ತು ಸ್ಥಳೀಯರು ಸರದಿಯ ಸಾಲಿನಲ್ಲಿ ನಿಂತು ಮಳಿಗೆಗಳನ್ನು ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯ ಚಿಕಿತ್ಸೆಗಾಗಿ ಹೂವುಗಳ ಜೊತೆಗೆ ಪಾಯಸ ಮಾರಾಟವನ್ನೂ ಮಾಡಲಾಗುತ್ತಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net