ಕೇರಳ ಆಯ್ತು, ಈಗ ದೆಹಲಿ ಸರದಿ! ಬಿಜೆಪಿ ಸಂಸದ ಅಮಿತ್ ಷಾಗೆ ಬರೆದ ಪತ್ರದಲ್ಲಿ ಅಡಗಿದೆಯಾ ಮಹಾ ಸ್ಕೆಚ್..? Delhi Name Change

ಕೇರಳ ಆಯ್ತು, ಈಗ ದೆಹಲಿ ಸರದಿ! ಬಿಜೆಪಿ ಸಂಸದ ಅಮಿತ್ ಷಾಗೆ ಬರೆದ ಪತ್ರದಲ್ಲಿ ಅಡಗಿದೆಯಾ ಮಹಾ ಸ್ಕೆಚ್..?
ಕೇರಳ ಆಯ್ತು, ಈಗ ದೆಹಲಿ ಸರದಿ! ಬಿಜೆಪಿ ಸಂಸದ ಅಮಿತ್ ಷಾಗೆ ಬರೆದ ಪತ್ರದಲ್ಲಿ ಅಡಗಿದೆಯಾ ಮಹಾ ಸ್ಕೆಚ್..?
Published on
ನವದೆಹಲಿ: ಭಾರತದ ಇತಿಹಾಸದ ಪುಟಗಳಲ್ಲಿ ದೆಹಲಿಗೆ ವಿಶೇಷ ಸ್ಥಾನವಿದೆ. ಆದರೆ, ಈಗಿನ ದೆಹಲಿ(Delhi Name Change) ಎಂಬ ಹೆಸರು ಕೇವಲ ಮಧ್ಯಕಾಲೀನ ಮತ್ತು ವಸಾಹತುಶಾಹಿ ಕಾಲದ ಕುರುಹಾಗಿದೆ ಎಂದು ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ. ಅಲ್ಲದೆ, ರಾಜಧಾನಿಗೆ ಅದರ ಪುರಾತನ ಮತ್ತು ಸಾಂಸ್ಕೃತಿಕ ಹೆಸರಾದ ಇಂದ್ರಪ್ರಸ್ಥವನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೇರಳ 'ಕೇರಳಂ' ಆದ ಬೆನ್ನಲ್ಲೇ ಹೊಸ ಕಿಚ್ಚು..!

ಫೆಬ್ರವರಿ 24ರಂದು ಕೇಂದ್ರ ಸರ್ಕಾರವು ಕೇರಳದ ಹೆಸರನ್ನು ಅಧಿಕೃತವಾಗಿ ಕೇರಳಂ ಎಂದು ಬದಲಿಸಲು ಒಪ್ಪಿಗೆ ನೀಡಿತು. ಈ ಬೆಳವಣಿಗೆಯಿಂದ ಪ್ರೇರಿತರಾದ ಚಾಂದಿನಿ ಚೌಕ್ ಸಂಸದ ಪ್ರವೀಣ್ ಖಂಡೇಲ್ವಾಲ್, ಅಮಿತ್ ಶಾ ಅವರಿಗೆ ಪತ್ರ ಬರೆದು, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ರಾಜಧಾನಿಯು ತನ್ನ ನಾಗರಿಕತೆಯ ಬೇರುಗಳನ್ನು ಪ್ರತಿಬಿಂಬಿಸಬೇಕು. ದೆಹಲಿ ಎಂಬ ಹೆಸರು ಒಂದು ಕಾಲಘಟ್ಟಕ್ಕೆ ಸೀಮಿತವಾಗಿದೆ. ಆದರೆ ಇಂದ್ರಪ್ರಸ್ಥವು ನಮ್ಮ ಅನಾದಿ ಕಾಲದ ಸಂಸ್ಕೃತಿಯ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ.
ಕೇರಳದ ಮಾದರಿ
ಕೇರಳ ರಾಜ್ಯವನ್ನು 'ಕೇರಳಂ' ಎಂದು ಬದಲಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಬೆನ್ನಲ್ಲೇ, ದೆಹಲಿಯನ್ನೂ ಅದರ ಮೂಲ ಹೆಸರಿಗೆ ಮರಳಿ ತರುವುದು ಸೂಕ್ತ ಸಮಯ ಎಂದು ಬಿಜೆಪಿ ಸಂಸದ ಅಭಿಪ್ರಾಯಪಟ್ಟಿದ್ದಾರೆ.
ಮಹಾಭಾರತದ ಕಾಲದ ವೈಭವದ ಮರುಕಳಿಕೆ..?
ಪಾಂಡವರು ಸ್ಥಾಪಿಸಿದ ಪುರಾಣ ಪ್ರಸಿದ್ಧ ನಗರ ಇಂದ್ರಪ್ರಸ್ಥವು ಇಂದಿನ ದೆಹಲಿಯ ಹಳೆಯ ಕೋಟೆಯ ಪ್ರದೇಶದಲ್ಲಿದೆ ಎಂಬ ನಂಬಿಕೆ ಬಲವಾಗಿದೆ. ಪುರಾತತ್ವ ಇಲಾಖೆಯ ಉತ್ಖನನದಲ್ಲೂ ಸುಮಾರು 1000 BCE ಕಾಲದ ನಾಗರಿಕತೆಯ ಕುರುಹುಗಳು ಪತ್ತೆಯಾಗಿವೆ.
ಸಂಸದರ ಪ್ರಸ್ತಾವನೆಯಲ್ಲಿ ಕೇವಲ ನಗರದ ಹೆಸರಲ್ಲದೆ, ಹಳೆ ದೆಹಲಿ ರೈಲ್ವೆ ನಿಲ್ದಾಣವನ್ನು ಇಂದ್ರಪ್ರಸ್ಥ ಜಂಕ್ಷನ್ ಎಂದು ಮತ್ತು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಂದ್ರಪ್ರಸ್ಥ ಏರ್ಪೋರ್ಟ್ ಎಂದು ಮರುನಾಮಕರಣ ಮಾಡುವಂತೆ ಸೂಚಿಸಲಾಗಿದೆ.
ಅಲ್ಲದೆ, ದೆಹಲಿಯ ಪ್ರಮುಖ ಸ್ಥಳಗಳಲ್ಲಿ ಪಾಂಡವರ ಭವ್ಯ ಪ್ರತಿಮೆಗಳನ್ನು ಸ್ಥಾಪಿಸಿ ಯುವ ಪೀಳಿಗೆಗೆ ಇತಿಹಾಸದ ಅರಿವು ಮೂಡಿಸಬೇಕು ಎಂಬ ಬೇಡಿಕೆಯನ್ನೂ ಇಡಲಾಗಿದೆ.

ವಿರೋಧ ಪಕ್ಷಗಳ ಆಕ್ರೋಶ ಮತ್ತು ರಾಜಕೀಯ ಹಗ್ಗಜಗ್ಗಾಟ

ಹೆಸರು ಬದಲಾವಣೆಯ ಈ ಪ್ರಸ್ತಾವನೆಯು ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಒಂದು ಕಡೆ ಮುಂಬೈ, ಕೋಲ್ಕತ್ತಾ, ಚೆನ್ನೈ ಮತ್ತು ಪ್ರಯಾಗ್‌ರಾಜ್ ಮಾದರಿಯಲ್ಲಿ ದೆಹಲಿಯನ್ನೂ ಬದಲಿಸಬೇಕು ಎಂಬ ವಾದ ಕೇಳಿಬರುತ್ತಿದ್ದರೆ, ವಿರೋಧ ಪಕ್ಷಗಳು ಇದನ್ನು ಚುನಾವಣಾ ಗಿಮಿಕ್ ಮತ್ತು ಮೂಲಭೂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ಎಂದು ಟೀಕಿಸುತ್ತಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net