ಕೇರಳ ಚುನಾವಣಾ ಫಲಿತಾಂಶ: ಇದು ನಿರೀಕ್ಷೆಗೆ ಮೀರಿದ ಸಾಧನೆ; ಕೇರಳದಲ್ಲಿ ಯುಡಿಎಫ್​ ಮುನ್ನಡೆ; ಶಶಿ ತರೂರ್​ ಸಂತಸ...Shashi Tharoor on Kerala Election

ಕೇರಳ ಚುನಾವಣೆ ಕುರಿತು ಶಶಿ ತರೂರ್
ಕೇರಳ ಚುನಾವಣೆ ಕುರಿತು ಶಶಿ ತರೂರ್
Published on
ಕೇರಳ: ಇಂದು (ಮೇ.4) ಭಾರತದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಕೇರಳದ 140 ವಿಧಾನಸಭಾ ಕ್ಷೇತ್ರಗಳ (Kerala Election Results) ಭವಿಷ್ಯ ಇವತ್ತೇ ಹೊರಬೀಳಲಿದೆ.
ಇಲ್ಲಿವರೆಗೆ ನಡೆದಿರುವ ಮತ ಎಣಿಕೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ನೇತೃತ್ವದ ಎಲ್​ಡಿಎಫ್​ 43 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಕಾಂಗ್ರೆಸ್​ ಹಾಗೂ ಯುಡಿಎಫ್​ ಮೈತ್ರಿ 96 ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದು, ಮತ ಎಣಿಕೆ ಪ್ರವೃತ್ತಿ ಹೀಗೆ ಮುಂದುವರಿದರೆ ಯುಎಡಿಎಫ್​ ಸರ್ಕಾರ ರಚಿಸುವ ಲಕ್ಷಣ ಕಂಡು ಬರುತ್ತಿದೆ.

ನಿರೀಕ್ಷೆಗೆ ಮೀರಿದ ಸಾಧನೆ: ಶಶಿ ತರೂರ್​

ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಪ್ರತಿಕ್ರಿಯೆ ನೀಡಿರುವ ಕೇರಳ ಲೋಕಸಭಾ ಸಂಸದ ಶಶಿ ತರೂರ್ (Shashi Tharoor on Kerala Election)​, ಈ ಭಾರಿ ಕೇರಳದ ಜನ ಬದಲಾವಣೆಯನ್ನು ಬಯಸಿದ್ದರು, ನಾವು ಮತ್ತು ಯುಡಿಎಫ್​ ತುಂಬಾ ಪ್ರಯತ್ನ ಪಟ್ಟಿದ್ದೆವು. ಆದರೆ ಇದು ನಿರೀಕ್ಷಗೆ ಮೀರಿದ ಹಾಗೆ ಸಂಖ್ಯೆಗಳು ಕಾಣಿಸುತ್ತಿವೆ, ನನಗೆ ವೈಯಕ್ತಿಕವಾಗಿ ಸಂತಸವಾಗುತ್ತಿದೆ ಎಂದು ಅವರು ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net