ಕಣ್ಣೂರಿನಿಂದಲೇ ಸ್ಪರ್ಧಿಸಬೇಕೆಂದು ಹಠ ಹಿಡಿದಿದ್ದ ಸುಧಾಕರನ್, ಒಂದು ಹಂತದಲ್ಲಿ ಪಕ್ಷ ತೊರೆದು ಸ್ವತಂತ್ರವಾಗಿ ಸ್ಪರ್ಧಿಸುವ ಬೆದರಿಕೆ ಹಾಕಿದ್ದರು. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಎ.ಕೆ. ಆಂಟನಿ ಸಹಿತ ಹಿರಿಯ ನಾಯಕರ ಮನವೊಲಿಕೆಯ ಬಳಿಕ ಸುಧಾಕರನ್ ಶಾಂತರಾಗಿದ್ದಾರೆ ಎನ್ನಲಾಗಿದ್ದು, ಈಗ ಕಣ್ಣೂರು ಕ್ಷೇತ್ರದಿಂದ ಟಿ.ಒ. ಮೋಹನನ್ಗೆ ಅದೃಷ್ಟ ಖುಲಾಯಿಸಿದೆ.