ಕೇರಳ ವಿಧಾನಸಭಾ ಚುನಾವಣೆ: 84 ರೂಪಾಯಿ ಆಸ್ತಿ ಘೋಷಿಸಿ ಸ್ವರ್ಧೆಗಿಳಿದ ಅಶ್ನಾ ಥಂಪಿ! Ashna Thampi
ಎಟ್ಟುಮನೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಶ್ನಾ ಥಂಪಿ
Published on:
Copied
Follow Us
ಕೇರಳ: ರಾಜಕೀಯ ಎಂದರೆ ಅದೊಂದು ದುಷ್ಟರ ಕೂಟ, ಅಲ್ಲಿ ಪ್ರಾಮಾಣಿಕ ವ್ಯಕ್ತಿಗಳು ಗಟ್ಟಿಯಾಗಿ ನಿಲ್ಲ ಲು ಸಾಧ್ಯವಿಲ್ಲ ಎಂಬ ಮಾತುಗಳನ್ನು ನಾವು ಕೇಳಿಸಿಕೊಂಡಿರುತ್ತೆವೆ.
ಅದರಲ್ಲಿಯೂ ಚುನಾವಣೆಗೆ ಹಣವನ್ನು ನೀರಿನಂತೆ ಸುರಿಸದಿದ್ದರೆ ಗೆಲ್ಲಲೂ ಖಂಡಿತ ಸಾಧ್ಯವಿಲ್ಲ ಎನ್ನುವುದನ್ನು ತಳ್ಳಿ ಹಾಕುವ ಪರಿಸ್ಥಿತಿಯಲ್ಲಿ ನಾವಿಲ್ಲ. ಆದರೆ ಈ ಭಾರಿಯ ಕೇರಳ ವಿಧಾನಸಭಾ ಚುನಾವಣೆಯಲ್ಲಿ ನಿಂತಿರುವ ಅಭ್ಯರ್ಥಿಯೊಬ್ಬರ ಅಕೌಂಟ್ನಲ್ಲಿ ಇರುವುದು ಕೇವಲ 44 ರೂಪಾಯಿ ಎಂದರೆ ನೀವು ನಂಬಲೇ ಬೇಕು.
ಕೈಯಲ್ಲಿ 40; ಬ್ಯಾಂಕ್ನಲ್ಲಿ 44 ರೂಪಾಯಿ
ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಷ್ಟ್) [SUCI(C)] ಪಕ್ಷದಿಂದ ಎಟ್ಟುಮನೂರು (Ettumanoor) ಕ್ಷೇತ್ರದಿಂದ ಸ್ಪರ್ಧಿಸಲಿರುವ ಪತ್ರಕರ್ತೆ ಅಶ್ನಾ ಥಂಪಿ (Ashna Thampi) ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿಯ ಮೌಲ್ಯ ಒಟ್ಟು 84 ರೂಪಾಯಿಯಾಗಿದೆ. ಈ 84 ರೂಪಾಯಿಗಳಲ್ಲಿ 40 ರೂಪಾಯಿ ಕ್ಯಾಶ್ ಇದ್ದು ಉಳಿದ 44 ರೂಪಾಯಿ ಬ್ಯಾಂಕ್ ಖಾತೆಯಲ್ಲಿದೆ ಎಂದು ಅಶ್ನಾ ಥಂಪಿ ದಾಖಲಿದ್ದಾರೆ.
ಅಶ್ನಾ ಥಂಪಿ ಸಲ್ಲಿಸಿರುವ ಅಫಿಡಿವಿಟ್ನಲ್ಲಿ ಅವರ ಬಳಿ ಯಾವುದೇ ಮನೆ, ಭೂಮಿ, ವಾಹನ, ಆಭರಣ ಮತ್ತು ನಿವೇಶನಗಳು ಇಲ್ಲ ಎಂದು ತಿಳಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಕೋಟಿ-ಕೋಟಿ ಆಸ್ತಿಯನ್ನು ತೋರಿಸುವ ರಾಜಕಾರಣಿಗಳ ಮಧ್ಯೆ ಈ ಅಶ್ನಾ ಥಂಪಿ ಎಂಬ ಅಭ್ಯರ್ಥಿ ವಿಶಿಷ್ಟವಾಗಿ ಕಾಣಿಸಿಕೊಂಡಿದ್ದಾರೆ.
ಯಾರು ಈ ಅಶ್ನಾ ಥಂಪಿ?
ಆಸ್ತಿ ಸಂಪಾದನೆಯಲ್ಲಿ ಹಿಂದೆ ಬಿದ್ದಿದ್ದರೂ ಹೋರಾಟದಲ್ಲಿ ಈ ಅಶ್ನಾ ಥಂಪಿ ಮುನ್ನಲೆಯ ನಾಯಕಿ ಎಂದರೆ ತಪ್ಪಾಗದು. ಸಾಹಿತ್ಯದಲ್ಲಿ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತ್ತಕೋತ್ತರ ಡಿಪ್ಲೊಮಾ ಪಡೆದಿರುವ ಇಕೆ, ವಿದ್ಯಾರ್ಥಿ ಜೀವನದಲ್ಲಿದಾಗಲೇ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (AIDSO) ಸೇರುವ ಮೂಲಕ ಅನೇಕ ಹೋರಾಟಗಳಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಿದ್ದರು.
ವಿಶೇಷವಾಗಿ ಆಶಾ ಕಾರ್ಯಾಕರ್ತೆಯರ ಹಕ್ಕುಗಳಿಗಾಗಿ ನಡೆದ ಹೋರಾಟದಲ್ಲಿ ತಮ್ಮ ತಲೆ ಬೋಳಿಸಿಕೊಳ್ಳುವ ಮೂಲಕ ಆಶ್ನಾ ಥಂಪಿ ಜನರ ಗಮನ ಸೆಳೆದಿದ್ದರು. ಈಗ ಎಟ್ಟುಮನೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಆಶ್ನಾ ಹಣದ ನೆರಲಿಲ್ಲದೆ ಹೇಗೆ ಚುನಾವಣೆ ನಡೆಸುತ್ತಾರೆ ಎನ್ನುವುದು ಬಹುತೇಕರ ಪ್ರಶ್ನೆಯಾಗಿದೆ.
ಚುನಾವಣೆಯ ಯಶಸ್ಸನ್ನು ಕೇವಲ ಹಣದಿಂದ ನಿರ್ಧರಿಸ ಬಾರದು, ಜನರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ನೀಡಿದರೆ ಮಾತ್ರ ಪ್ರಜಾಪ್ರಭುತ್ವದ ನಿಜವಾದ ಗೆಲುವು ಎನ್ನುವುದು ಆಶ್ನಾ ಥಂಪಿ ಅವರ ಸಮರ್ಥನೆಯಾಗಿದೆ.
ಏಪ್ರಿಲ್ 9 ರಂದು 143 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಈ ಚುನಾವಣೆಯ ಫಲಿತಾಂಶವು ಮೇ 4 ರಂದು ಹೊರಬೀಳಲಿದ್ದು, ಆಗ ಜನ ಈ ಆಶ್ನಾ ಥಂಪಿಯ ಕೈ ಹಿಡಿಯುತ್ತಾರೋ? ಇಲ್ಲ ಕೈ ಕೊಡುತ್ತಾರೋ ಎಂದು ತಿಳಿದು ಬರಲಿದೆ,(ಏಜನ್ಸೀಸ್).