ನೆಟ್ಟಿಗರ ಛೀಮಾರಿ... ಐಪಿಎಲ್​ನಿಂದ ಈಕೆಯ ತಂಡವನ್ನು ಮೊದಲು ಕಿತ್ತುಬಿಸಾಡಿ! ಕಾವ್ಯ ಮಾರನ್​ಗೆ ಮಸ್ಕ್​ ಬಿಗ್​ ಶಾಕ್ | Kavya Maran

ಸನ್​ರೈಸರ್ಸ್​ ಹೈದರಾಬಾದ್​ ಫ್ರಾಂಚೈಸಿ ಒಡತಿ ಕಾವ್ಯ ಮಾರನ್​
ಸನ್​ರೈಸರ್ಸ್​ ಹೈದರಾಬಾದ್​ ಫ್ರಾಂಚೈಸಿ ಒಡತಿ ಕಾವ್ಯ ಮಾರನ್​
Published on

ಪ್ರಮುಖ ಮುಖ್ಯಾಂಶಗಳು

  • ಇದೇ ಮಾರ್ಚ್​ 28ರಿಂದ ಐಪಿಎಲ್​ 19ನೇ ಆವೃತ್ತಿ
  • ಎಸ್​ಆರ್​ಎಚ್​ ಮಾಲೀಕರಾದ ಕಾವ್ಯಾ ಮಾರನ್ ನಿರ್ಧಾರಕ್ಕೆ ಛೀಮಾರಿ
  • ಪಾಕ್​ ಆಟಗಾರನ ಆಯ್ಕೆ ಅವಶ್ಯಕತೆ ಇತ್ತಾ? ನೆಟ್ಟಿಗರ ಪ್ರಶ್ನೆ
ನವದೆಹಲಿ: ಇದೇ ಮಾರ್ಚ್​ 28ರಿಂದ ಐಪಿಎಲ್​ 19ನೇ ಆವೃತ್ತಿ ಆರಂಭವಾಗಲಿದ್ದು, ಈ ಟಿ20 ಲೀಗ್​ಗಾಗಿ ಕ್ರಿಕೆಟ್​ ಪ್ರಿಯರು ತೀವ್ರ ಕಾತರದಿಂದ ಕಾಯುತ್ತಿದ್ದಾರೆ. ಇನ್ನೇನು ಸೀಸನ್‌ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳದಿದ್ದು, ಈ ಬೆನ್ನಲ್ಲೇ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಐಪಿಎಲ್​ನಿಂದ ಕಿತ್ತುಬಿಸಾಡಬೇಕು ಎಂಬ ಕೂಗುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜೋರಾಗಿದೆ.
ಎಸ್​ಆರ್​ಎಚ್​ ಸಹ ಮಾಲೀಕರಾದ ಕಾವ್ಯಾ ಮಾರನ್ ತೆಗೆದುಕೊಂಡ ನಿರ್ಧಾರವೇ ಈ ಮಟ್ಟಿಗಿನ ಟೀಕೆ, ವ್ಯಂಗ್ಯಗಳಿಗೆ ಮುಖ್ಯ ಕಾರಣ. 'ದಿ ಹಂಡ್ರೆಡ್ 2026' ಲೀಗ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸನ್‌ರೈಸರ್ಸ್ ಲೀಡ್ಸ್ ಪಾಕಿಸ್ತಾನಿ ಕ್ರಿಕೆಟಿಗ ಅಬ್ರಾರ್ ಅಹ್ಮದ್​ನನ್ನು ಭಾರಿ ಮೊತ್ತಕ್ಕೆ ಖರೀದಿಸಿದೆ. ಆಯ್ಕೆ ಮಾಡಿದ್ದು ಮೊದಲ ತಪ್ಪಾದರೆ, ದುಬಾರಿ ಮೊತ್ತಕ್ಕೆ ಆತನನ್ನು ಖರೀದಿಸಿದ್ದು ಇನ್ನೊಂದು ತಪ್ಪಾಗಿ ಕ್ರಿಕೆಟ್​ ಪ್ರಿಯರಿಗೆ ಕಂಡಿತು. ಅಬ್ರಾರ್​​ನನ್ನು 2.34 ಕೋಟಿ (190,000 ಪೌಂಡ್‌ಗಳು) ರೂ.ಗೆ ಪಿಕ್ ಮಾಡಲಾಯಿತು. 
ಐಪಿಎಲ್ ಫ್ರಾಂಚೈಸಿಗಳು ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್, ಎಂಐ ಲಂಡನ್, ಸದರ್ನ್ ಬ್ರೇವ್ ಮತ್ತು ಸನ್‌ರೈಸರ್ಸ್ ಲೀಡ್ಸ್‌ನಲ್ಲಿ ಪಾಲನ್ನು ಹೊಂದಿವೆ. ಹರಾಜಿನಲ್ಲಿ ಹ್ಯಾರಿಸ್​ ರೌಫ್ ಮತ್ತು ಶದಾಬ್ ಖಾನ್‌ರಂತಹ ಪ್ರಮುಖ ಪಾಕಿಸ್ತಾನಿ ಆಟಗಾರರಿದ್ದರೂ, ಉಳಿದ ಐಪಿಎಲ್ ತಂಡಗಳು ಪಾಕ್​ ಆಟಗಾರರನ್ನು ಖರೀದಿಸಲು ಧೈರ್ಯ ಮಾಡಲಿಲ್ಲ. ಆದರೆ, ಕಾವ್ಯಾ ಮಾರನ್ ಮಾತ್ರ, ಎಲ್ಲಾ ಗೊತ್ತಿದ್ದರೂ ಅಬ್ರಾರ್ ಅಹ್ಮದ್​ ಖರೀದಿಗೆ ಮುಂದಾಗಿದ್ದೇ ಸದ್ಯ ಇಷ್ಟೆಲ್ಲ ರಾದ್ಧಾಂತ ಸೃಷ್ಟಿಸಿದೆ. 
ಈ ವಿಷಯ ಹೊರಬೀಳುತ್ತಿದ್ದಂತೆ ಕಾವ್ಯಾ ಮಾರನ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ವಿರುದ್ಧ ಟೀಕೆಗಳ ಸುರಿಮಳೆಯನ್ನು ಶುರುವಾಯಿತು. ಸನ್‌ರೈಸರ್ಸ್ ಸಿಇಒ ಕಾವ್ಯಾ ಮಾರನ್ ಮತ್ತು ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ ಈ ಹರಾಜಿನಲ್ಲಿ ಭಾಗವಹಿಸಿದ್ದರು. ಸನ್‌ರೈಸರ್ಸ್ ಲೀಡ್ಸ್ ಅನ್ನು ಹ್ಯಾರಿ ಬ್ರೂಕ್ ಮುನ್ನಡೆಸುತ್ತಿದ್ದು, ಹಂಡ್ರೆಡ್ 2026ರ ಲೀಗ್​ ಜುಲೈ 21ರಿಂದ ಆಗಸ್ಟ್ 16 ರವರೆಗೆ ಇಂಗ್ಲೆಂಡ್‌ನಲ್ಲಿ ನಡೆಯಲಿದೆ.

'ಎಕ್ಸ್​' ಖಾತೆ ಅಮಾನತು

ಒಂದೆಡೆ, ಟ್ವಿಟರ್​ನಲ್ಲಿ ವ್ಯಾಪಕ ಟೀಕೆಗಳು ಹರಿದುಬಂದ ಬೆನ್ನಲ್ಲೇ ಎಕ್ಸ್‌ನಲ್ಲಿ ಸನ್‌ರೈಸರ್ಸ್ ಲೀಡ್ಸ್​ ಖಾತೆಯನ್ನು ಎಲಾನ್​ ಮಸ್ಕ್​ ಒಡೆತನದ ಎಕ್ಸ್ ಅಮಾನತುಗೊಳಿಸಿದೆ. ಇದಕ್ಕೆ ಸ್ಪಷ್ಟ ಕಾರಣವೇನು ಎಂಬುದು ತಿಳಿದಿಲ್ಲ. ಆದರೆ, ಈ ಘಟನೆ ಬೆನ್ನಲ್ಲೇ ಆಗಿರುವುದು ಕೊಂಚ ಲಿಂಕ್​ ಮಾಡುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ. ಹಲವರು ಎಕ್ಸ್​ ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕಾಗಿ ಅಧಿಕೃತ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net