ನಮ್ಮ ಧಾರ್ಮಿಕ ನಾಯಕನ ಸಾವು ಸಹಿಸಲ್ಲ: ಖಮೇನಿ ಹತ್ಯೆ ವಿರೋಧಿಸಿ ಬೀದಿಗಿಳಿದ ಪ್ರತಿಭಟನಾಕಾರರು; ಅಮೆರಿಕ-ಇಸ್ರೇಲ್ ವಿರುದ್ಧ ಘೋಷಣೆ | Kashmir Protest

ಖಮೇನಿ ಸಾವಿನ ಬೆನ್ನಲ್ಲೆ ಕಾಶ್ಮೀರದಲ್ಲಿ ಪ್ರತಿಭಟನೆ
ಖಮೇನಿ ಸಾವಿನ ಬೆನ್ನಲ್ಲೆ ಕಾಶ್ಮೀರದಲ್ಲಿ ಪ್ರತಿಭಟನೆ
Published on

ಪ್ರಮುಖ ಮುಖ್ಯಾಂಶಗಳು

  • ಖಮೇನಿ ಸಾವಿನ ಬೆನ್ನಲ್ಲೆ ಕಾಶ್ಮೀರದಲ್ಲಿ ಪ್ರತಿಭಟನೆ
  • ಕಣಿವೆ ರಾಜ್ಯದಲ್ಲಿ ಇಂರ್ಟನೆಟ್​ ಸ್ಥಗಿತ
  • ನಮ್ಮ ಧಾರ್ಮಿಕ ನಾಯಕನ ಸಾವನ್ನು ಸಹಿಸುವುದಿಲ್ಲ ಎಂದ ಪ್ರತಿಭಟನಾಕಾರರು
  • ಅಮೆರಿಕ ಮತ್ತು ಇಸ್ರೇಲ್​ ವಿರುದ್ಧ ಘೋಷಣೆ
ಜಮ್ಮು-ಕಾಶ್ಮೀರ: ಇರಾನಿನ ಸವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಅಮೆರಿಕ ಮತ್ತು ಇಸ್ರೇಲಿ ಪಡೆಗಳು ಕೊಂದ ಹಿನ್ನಲೆ ಜಮ್ಮು-ಕಾಶ್ಮೀರದಲ್ಲಿ ಭಾರಿ ಪ್ರತಿಭಟನೆ (Kashmir Protest) ನಡೆದಿದೆ ಎಂದು ವರದಿಯಾಗಿದೆ.
ಕಾಶ್ಮೀರದಲ್ಲಿರುವ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕ ಕಚೇರಿಯ ಮುಂದೆ ಜಮಾಯಿಸಿದ ಸಾವಿರಾರು ಜನ ಅಮೆರಿಕ ಮತ್ತು ಇಸ್ರೇಲ್​ ವಿರುದ್ಧ ಘೋಷಣೆ ಕೂಗಿರುವುದಾಗಿ ಹೇಳಲಾಗುತ್ತಿದೆ. ಶ್ರೀನಗರದ ಸುತ್ತ ಮುತ್ತಲಿನ ಪ್ರದೇಶದ ಸಾವಿರಾರು ಜನರು ನಗರದ ಲಾಲ್​ ಚೌಕ್​ನಲ್ಲಿ ಸೇರಿಕೊಂಡಿ ಖಮೇನಿ ಅವರ ಹತ್ಯೆಗೆ ಕಾರಣರಾದ ಅಮೆರಿಕ ಮತ್ತು ಇಸ್ರೇಲಿನ ನಾಯಕರ ವಿರುದ್ಧ ಘೋಷಣೆ ಕೂಗಿದ್ದಾರೆ.
ಪ್ರತಿಭಟನೆ ತಾರಕ್ಕೇರಿದ ಹಿನ್ನಲೆಯಲ್ಲಿ ಶ್ರೀನಗರದಲ್ಲಿ ಇಂರ್ಟನೆಟ್​ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ನಾಳೆ ಶ್ರೀನಗರ ಸಂಪೂರ್ಣ ಬಂದ್​ ಆಗಲಿದೆ ಎಂದು ತಿಳಿದು ಬಂದಿದೆ. ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ವಿರೋಧಿಸಿರುವ ಮುಖ್ಯಮಂತ್ರಿ ಓಮರ್​ ಅಬ್ದುಲ್ಲಾ, ರಾಜ್ಯದ ಜನರು ಶಾಂತತೆಯನ್ನು ಕಾಪಾಡಬೇಕಾಗಿ ಮನವಿ ಮಾಡಿದ್ದಾರೆ.
ಇರಾನಿನ್ನಲ್ಲಿರುವ ಕಾಶ್ಮೀರದ ವಿದ್ಯಾರ್ಥಿಗಳ ಯೋಗಕ್ಷೇಮದ ಬಗ್ಗೆ ಮಾಹಿತಿಯನ್ನು ಪಡೆಯಲು ವಿದೇಶಾಂಗ ಸಚಿವಾಲಯದೊಂದಿದೆ ನಾವು ನಿರಂತರ ಸಂಪರ್ಕದಲ್ಲಿದ್ದು, ಅಗತ್ಯಬಿದ್ದರೆ ಅಲ್ಲಿಗೆ ಹೋಗಿ ಕಾಶ್ಮೀರಿಗಳನ್ನು ಭಾರತಕ್ಕೆ ತರುವುದಾಗಿ ಅವರು ಹೇಳಿದ್ದಾರೆ.

ನಮ್ಮ ಧಾರ್ಮಿಕ ನಾಯಕನ ಸಾವನ್ನು ಸಹಿಸುವುದಿಲ್ಲ

ಖಮೇನಿಯ ಭಾವಚಿತ್ರವನ್ನು ಹಿಡಿದು ಪ್ರತಿಭಟನಾಕಾರರು, ತಮ್ಮ ಧಾರ್ಮಿಕ ನಾಯಕವನ್ನು ಹತ್ಯರಗೈದವರ ವಿರುದ್ಧ ಕಿಡಿಕಾರಿದರು. ಈ ಪ್ರತಿಭಟನೆಯಲ್ಲಿ ಪುರುಷರಿಗಿಂತ ಮಹಿಳೆಯರು ಹಾಗೂ ಮಕ್ಕಳೇ ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಂಡರು.
ಖಮೇನಿ ನಮಗೆ ಹೆತ್ತವರಿಗಿಂತ ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿಯಾಗಿದ್ದರು, ಅವರ ಸಾವು ನಮಗೆ ತುಂಬಾಲಾರದ ನಷ್ಟವಾಗಿದೆ. ಇಸ್ಲಾಂನ ಆಧಾರ ಸ್ತಂಭದಂತಿದ್ದ ಖಮೇನಿ ಇಸ್ಲಾಂಗಾಗಿ ಹುತಾತ್ಮರಾಗಿದ್ದಾರೆ ಎಂದು ಪ್ರತಿಬಟನೆಯಲ್ಲಿ ನಿರತರಾಗಿದ್ದ ಮಹಿಳೆಯೊಬ್ಬಳು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಯಾರು ಅಮೆರಿಕದ ಸ್ನೇಹಿತರೋ ಅವರು ನಮ್ಮ ವಿರೋಧಿಗಳು, ಯಾರು ಇಸ್ರೇಲ್​ನ ಸ್ನೇಹಿತರೋ ಅವರು ನಮ್ಮ ವಿರೋಧಿಗಳು, ಅಮೆರಿಕ ಮತ್ತು ಇಸ್ರೇಲ್​ನ ಸ್ನೇಹ ಬಯಸುವವರು ದೇಶದ್ರೋಹಿಗಳು ಎಂಬ ಘೋಷಣೆಗಳು ಕೇಳಿಬಂದಿವೆ.

ಸ್ಥಳಕ್ಕೆ ಪೊಲೀಸರ ಆಗಮನ

ಪ್ರತಿಭಟನಾ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಜಮ್ಮು-ಕಾಶ್ಮೀರ ಪೊಲೀಸ್​ ಮತ್ತು ಅರೆ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದ್ದು, ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ನಳಿನ್ ಪ್ರಭಾತ್ ಸೇರಿದಂತೆ ಉನ್ನತ ಅಧಿಕಾರಿಗಳು ಪ್ರತಿಭಟನಾ ಸ್ಥಳಗಳಲ್ಲಿ ವೈಯಕ್ತಿಕವಾಗಿ ಹಾಜರಿದ್ದಾಗಿ ಮಾಹಿತಿ ಲಭ್ಯವಾಗಿದೆ. ಪ್ರತಿಭಟನೆ ಶಾಂತಿಪೂರ್ವವಾಗಿ ನಡೆದ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net