ವಿಜಯ್ ದಿವಸ್ ಅಂಗವಾಗಿ ಮಿಲಿಟರಿ ಗೌರವಗಳೊಂದಿಗೆ ಸಮಾರಂಭ ನಡೆಸಲಾಗಿದ್ದು, ಮೂರು ಸೇನಾ ಹೆಲಿಕಾಪ್ಟರ್‌ಗಳು ಬಾಣದ ಆಕಾರದಲ್ಲಿ ಹಾರಾಡಿ ಸ್ಮಾರಕದ ಮೇಲೆ ಹೂವುಗಳ ಸುರಿಮಳೆಗೈದವು. ಮತ್ತೊಂದೆಡೆ, ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ಭಾಗವಾಗಿ, ಭಾರತೀಯ ಸೇನೆಯು ಶನಿವಾರ ರಾತ್ರಿ ಡ್ರಾಸ್‌ನಲ್ಲಿರುವ ಯುದ್ಧ ಸ್ಮಾರಕದಲ್ಲಿ 'ಶೌರ್ಯ ಸಂಧ್ಯಾ' ಕಾರ್ಯಕ್ರಮವನ್ನು ಆಯೋಜಿಸಿತ್ತು.