ಕಾನ್ಪುರ: ಏನಾದರೂ ಪುಕ್ಸಟ್ಟೆಗೆ ಸಿಗುತ್ತೇ ಎಂದರೆ ಅಲ್ಲಿ ನೂಕು ನುಗ್ಗಲು ಇರುತ್ತೆ. ಮೈ ಪರಚಿಕೊಳ್ಳುವ ಮೂಲಕ ಆ ಪದಾರ್ಥಗಳನ್ನು ಸಂಗ್ರಹಿಸಿಕೊಳ್ಳುವುದು ಕೆಲವರ ಅಭ್ಯಾಸ. ಇದಕ್ಕೆ ದುಬಾರಿ ಜೀವನಶೈಲಿಯೂ ಕಾರಣ. ಹೆದ್ದಾರಿ ಮಧ್ಯೆ ಬಿದ್ದ ಎಣ್ಣೆ ಟ್ಯಾಂಕರ್, ಹಣ್ಣುಗಳು, ಡ್ರೈ ಫ್ರೂಟ್ಸ್, ಸಿಲಿಂಡರ್ ಇವುಗಳನ್ನು ಆಯ್ದುಕೊಳ್ಳಲು ಜನರು ಊರುಗಳಿಂದ ಘಟನಾ ಸ್ಥಳಕ್ಕೆ ಬಂದುಬಿಡುತ್ತಾರೆ.