ಅಪಘಾತದ ನಂತರ ರೆಕಾರ್ಡ್ ಮಾಡಲಾದ ವೀಡಿಯೊದಲ್ಲಿ ಲಂಬೋರ್ಘಿನಿ ಕಾರಿನ ಹಿಂದೆ ವಾಹನದಿಂದ ಬೌನ್ಸರ್ಗಳು ಹೊರಬರುವುದನ್ನು ತೋರಿಸಲಾಗಿದೆ. ಅವರು ಇಟ್ಟಿಗೆಯಿಂದ ವಿಂಡ್ಶೀಲ್ಡ್ನ್ನು ಓಡೆದು, ಬಾಗಿಲು ತೆರೆದು, ಶಿವಂನನ್ನು ಚಾಲಕನ ಸೀಟಿನಿಂದ ಹೊರಗೆಳೆದು ಮತ್ತೊಂದು ವಾಹನದಲ್ಲಿ ಕರೆದೊಯ್ಯುವುದನ್ನು ಕಾಣಬಹುದು. ಈ ದೃಶ್ಯಗಳಲ್ಲಿ ಚಾಲಕನ ಬದಿಯಿಂದ ಯಾವುದೇ ಎರಡನೇ ವ್ಯಕ್ತಿ ಹೊರಬರುವುದನ್ನು ತೋರಿಸಲಾಗಿಲ್ಲ.