

ಪ್ರಮುಖ ಮುಖ್ಯಾಂಶಗಳು
ನವದೆಹಲಿ:ಕೇಂದ್ರ ಸರ್ಕಾರದಮಹತ್ವಾಕಾಂಕ್ಷಿ ಜಲ ಸಂಚಯ್ ಜನ್ಭಾಗಿದಾರ್ ಯೋಜನೆಯನ್ನುಅನುಷ್ಟಾನಗೊಳಿಸುವಲ್ಲಿಯಶಸ್ವಿಯಾಗಿದ್ದಕ್ಕೆ ಮಧ್ಯಪ್ರದೇಶದಖಾಂಡ್ವಾ ಜಿಲ್ಲೆ ದೇಶದಲ್ಲೇಪ್ರಥಮ ಸ್ಥಾನ ಗಳಿಸಿದ್ದು,ಇತ್ತೀಚೆಗೆನವದೆಹಲಿಯ ವಿಜ್ಞಾನ ಭವನದಲ್ಲಿಮಂಗಳವಾರ ನಡೆದ ಸಮಾರಂಭದಲ್ಲಿರಾಷ್ಟ್ರಪತಿ ದ್ರೌಪದಿ ಮುರ್ಮುಪ್ರಶಸ್ತಿ ಪ್ರದಾನ ಮಾಡಿದರು.
ವಿಶೇಷಎಂಬಂತೆ ಯೋಜನೆಯ ಅನುಷ್ಟಾನದಲ್ಲಿಪ್ರಮುಖ ಪಾತ್ರ ವಹಿಸಿರುವ ಖಾಂಡ್ವಾಜಿಲ್ಲಾ ಪಂಚಾಯಿತಿ ಸಿಇಓ ಡಾ.ನಾಗಾರ್ಜುನಬಿ.ಗೌಡಕನ್ನಡದವರಾಗಿದ್ದು,ತುಮಕೂರು ಮೂಲದಯುವ ಐಎಎಸ್ ಅಧಿಕಾರಿಗಳಾಗಿದ್ದಾರೆ.ನಾಗಾರ್ಜುನ ಗೌಡಹಾಗೂ ಜಿಲ್ಲಾಧಿಕಾರಿ ರಿಷಬ್ಗುಪ್ತಾ ಜಂಟಿಯಾಗಿ ರಾಷ್ಟ್ರಪತಿಗಳಿಂದಪ್ರಶಸ್ತಿ ಸ್ವೀಕರಿಸಿದರು.
ಹರಿದುಹೋಗುವ ನೀರಿನ ಸಂರಕ್ಷಣೆಯನ್ನುಬಲಪಡಿಸುವ,ಮಳೆನೀರು ಕೊಯ್ಲುಉತ್ತೇಜಿಸುವ ಮತ್ತು ಸಾಂಪ್ರದಾಯಿಕಜಲಮೂಲಗಳನ್ನು ಪುನರುಜ್ಜೀವನಗೊಳಿಸುವಜಲ ಸಂಚಯ್ ಜನ್ ಭಾಗಿದಾರ್ ಯೋಜನೆಯನ್ನುಖಾಂಡ್ವಾ ಜಿಲ್ಲಾ ಪಂಚಾಯಿತಿಮೂಲಕ ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗಿತ್ತು.
2024ರಲ್ಲಿ ಸೂರತ್‌ನಲ್ಲಿ ಪ್ರಾರಂಭವಾದ ಈಉಪಕ್ರಮವು ದೇಶವನ್ನು ಐದು ವಲಯಗಳಾಗಿವಿಂಗಡಿಸಿ, ಪ್ರತಿಜಿಲ್ಲೆಗೆ ಕನಿಷ್ಠ 10ಸಾವಿರ ಕೃತಕನೀರು ಸಂಗ್ರಹಣಾ ಗುರಿಯನ್ನುನಿಗದಿಪಡಿಸಲಾಗಿತ್ತು.ಖಾಂಡ್ವಾ ಜಿಲ್ಲೆಯು1.3 ಲಕ್ಷನೀರು ಸಂಗ್ರಹಣಾ ರಚನೆಗಳನ್ನುನಿರ್ಮಾಣ ಮಾಡಿ ದೇಶದ ಗಮನ ಸೆಳೆದಿದೆ.