ಟ್ರೋಲ್​ಗೊಳಗಾದ ಬೆನ್ನಲ್ಲೇ ವರಸೆ ಬದಲಿಸಿದ ಕಂಗನಾ; ಜೆನ್​ ಜಿ ದೇಶದ ಶಕ್ತಿ, ಅಸ್ಮಿತೆ ಎಂದು ಹೊಗಳಿಕೆ..Kangana Ranaut

Kangana takes a U-turn on Gen Z
Kangana takes a U-turn on Gen Z
Published on

ಪ್ರಮುಖ ಮುಖ್ಯಾಂಶಗಳು

  • ಜೆನ್​ ಜಿ ಜನರೇಷನ್​ ಗಟರ್ ಎಂದಿದ್ದ ಕಂಗನಾ ರಣಾವತ್​ ಯೂಟರ್ನ್​.
  • ಜೆನ್​ಜಿಗಳು ಭಾರತದ ಅತಿ ದೊಡ್ಡ ಶಕ್ತಿ ಹಾಗೂ ಸಂಸ್ಕೃತಿ, ಅಸ್ಮಿತೆಯ ರಾಯಭಾರಿಗಳು ಎಂದ ಕಂಗನಾ.
  • ಕೆಲವು ಜನರಿಂದಾಗಿ ದೇಶದ ಘನತೆ ಹಾಳಾಗುತ್ತಿದೆ ಎಂದು ಅಸಮಾಧಾನ.
ನವದೆಹಲಿ: ಜೆನ್​ಜಿಗಳನ್ನು (Gen Z) ಜನರೇಷನ್​ ಗಟರ್​ ಎಂದು ಕರೆದು ಸಾಕಷ್ಟು ಟ್ರೋಲ್​​ ಹಾಗೂ ಮೀಮ್ಸ್​ಗಳಿಗೆ ಗುರಿಯಾಗಿದ್ದ ಬಿಜೆಪಿ ಸಂಸದೆ ಕಂಗನಾ ರಣಾವತ್(Kangana Ranaut)​ ಅವರು ಸದ್ಯ ತಮ್ಮ ವರಸೆ ಬದಲಿಸಿದ್ದಾರೆ. ಜೆನ್​ಜಿಗಳು ಭಾರತದ ಅತಿ ದೊಡ್ಡ ಶಕ್ತಿ ಹಾಗೂ ಸಂಸ್ಕೃತಿ, ಅಸ್ಮಿತೆಯ ರಾಯಭಾರಿಗಳು. ಕೆಲವು ಮಂದಿಗಾಗಿ ಎಲ್ಲರನ್ನೂ ದೋಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕಂಗನಾ ಹೇಳಿದ್ದಿಷ್ಟು

ಶುಕ್ರವಾರ ಸಂಸತ್ತಿನ ಆವರಣದಲ್ಲಿ ಕೊಡೆ ಹಿಡಿದು ನಡೆದು ಸಾಗುತ್ತಿರುವ ಅವರನ್ನು ಮಾತನಾಡಿಸಿದ ಅವರನ್ನು ಜೆನ್​ಜಿಗಳ ಬಗ್ಗೆ ಪ್ರಶ್ನೆ ಕೇಳಲಾಯ್ತು ಈ ವೇಳೆ ಅವರು ಹೊಸ ವ್ಯಾಖ್ಯಾನವನ್ನು ನೀಡಿದರು. ಈ ಪೀಳಿಗೆಯೇ ನಮ್ಮ ನಿಜವಾದ ಶಕ್ತಿ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಕೆಲವು ವ್ಯಕ್ತಿಗಳಿಂದಾಗಿ ಇಡೀ ಯುವ ಪೀಳಿಗೆಯನ್ನು ತಪ್ಪಾಗಿ ಬಿಂಬಿಸಬಾರದು ಎಂದು ಅವರು ಹೇಳಿದರು.

ನಾವು ಗೌರವಿಸುವ ಮೋಹನ್​ ಭಾಗವತ್​ ಅವರ ಮಾತು ಆಲಿಸುವ ಮತ್ತು ಅವರ ಅನುಭವದಿಂದ ಹಾಗೂ ಜ್ಞಾನದಿಂದ ಲಾಭ ಪಡೆಯುವ ಅವಕಾಶ ನಮಗೆ ಸಿಕ್ಕಿದೆ. ದೇಶದ ಯುವಜನರು ನಮ್ಮ ಸರ್ಕಾರದೊಂದಿಗೆ ಬೆರೆತಿರುವುದು ನಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿರುವುದು ಸಂತೋಷದ ವಿಚಾರ ಎಂದು ಕಂಗನಾ ಹೇಳಿದರು.

ರಾಹುಲ್​ ವಿರುದ್ಧ ಕಿಡಿ

ಜಾರ್ಖಂಡ್ ನೇಮಕಾತಿ ಪರೀಕ್ಷೆಗಳಲ್ಲಿ ಉಂಟಾದ ಅಕ್ರಮ ವಿರುದ್ಧ ಅಲ್ಲಿನ ಅಭ್ಯರ್ಥಿಗಳು 14 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ಅವರು ಇಲ್ಲಿಯವರೆಗೂ ಅಲ್ಲಿಗೆ ಭೇಟಿ ಕೊಟ್ಟಿಲ್ಲ ಮಾತನಾಡಿಲ್ಲ ಎಂದು ಟೀಕೆ ಮಾಡಿದರು.
ಜೆನ್​ ಜಿಗಳು ಸರ್ಕಾರದ ಒಂದು ಭಾಗ ಅವರ ಬೇಡಿಕೆಗಳನ್ನು ಈಡೇರಿಸುವ ಕೆಲಸವನ್ನು ಕೇಂದ್ರ ಮಾಡುತ್ತಿದೆ. ಕಾಮನ್​ ವೆಲ್ತ್​ನಲ್ಲಿ ಸ್ಪರ್ಧಿಸಿ, ಗೆದ್ದು ಬೀಗಿದ ಸ್ಪರ್ಧಿಗಳು ಪದಕವನ್ನು ಮೋದಿಗೆ ಅರ್ಪಸಿದ ಕ್ಷಣವನ್ನು ಕಂಗನಾ ಅವರು ಶ್ಲಾಘಿಸಿದರು. ಕೆಲವು ಜೆನ್​ ಜಿಗಳು ದೇಶದ ಘನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದರು.

ನೆಟ್ಟಿಗರಿಂದ ಲೇವಡಿ

ಕಂಗನಾ ಮೋಯೆ ಮೋಯೆ ಎನ್ನುತ್ತಾ ಪೋಸ್ಟ್ ಹಂಚಿಕೊಂಡ ನೆಟ್ಟಿಗರೊಬ್ಬರು ಜುಲೈ 28ರಂದು ಕಂಗನಾ ಅವರು ಜೆನ್​ಜಿಗಳು ಜನರೇಷನ್​ ಗಟರ್ ಪೀಳಿಗೆಯವರು ಎಂದಿದ್ದರು ಆಗಸ್ಟ್ 7 ಜೆನ್​ಜಿ ನಮ್ಮ ಶಕ್ತಿ ಮತ್ತು ಈ ದೇಶಕ್ಕೆ ಒಂದು ಆಸ್ತಿ ಎಂದಿರುವುದಾಗಿ ಎಕ್ಸ್​​ನಲ್ಲಿ ಕಂಗನಾ ಮಾತನಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಭಾರಿ ಟ್ರೋಲ್​
ಜೆನ್​ ಜಿಗಳ ರೀಲ್ಸ್​ ವಿರುದ್ಧ ಕಿಡಿಕಾರಿದ್ದ ಕಂಗನಾ ಇವರನ್ನು ಹೆತ್ತವರು ಯಾರು ಎಂದಿದ್ದರು. ಅಲ್ಲದೆ, ಅವರ ರೀಲ್ಸ್​ಗಳು ವಾಕರಿಕೆ ಬರುವಂತೆ ಇದೆ ಎಂದು ನಿಂದಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದ ಸಿಜೆಪಿ ವಕ್ತಾರ ಸೌರವ್​ ದಾಸ್ ಅವರು ಕಂಗನಾರನ್ನು ಬಿಜೆಪಿ ಗಂಭೀರವಾಗಿ ಪರಿಗಣನೆ ಮಾಡೋದಿಲ್ಲ. ಇನ್ನೂ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಕಂಗನಾ ಅವರು ಸೌರವ್​ ದಾಸ್​ ಒಬ್ಬ ನಿಷ್ಪ್ರಯೋಜಕ, ಕೆಲಸವಿಲ್ಲದ ಅಲೆಮಾರಿ ಎಂದು ನಿಂದಿಸಿದ್ದರು. ಆ ಬೆನ್ನಲ್ಲೇ ಕಂಗನಾರ ಕೇನ್ಸ್​ ಪಾರ್ಟಿ ವಿಡಿಯೋಗಳ ವೈರಲ್​ ಆಗಿ ಭಾರಿ ಟೀಕೆಗೆ ಗುರಿಯಾಗಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ ಕಂಗನಾ ತಮ್ಮ ವರಸೆ ಬದಲಿಸಿದ್ದಾರೆ.

(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net