ಇವರಿಗೆಲ್ಲ ಜನ್ಮಕೊಟ್ಟ... ಜೆನ್​ಝಿ ಹೋರಾಟದ ವಿಡಿಯೋ ನೋಡಿದ್ರೆ ವಾಂತಿ ಬರುತ್ತೆ: ನಟಿ ಕಂಗನಾ ಓಪನ್ ಟಾಕ್​

ಜೆನ್​ಝಿ ಪ್ರತಿಭಟನೆ ಬಗ್ಗೆ ನಟಿ ಕಂಗನಾ ರಣಾವತ್ ಹೇಳಿಕೆ
ಜೆನ್​ಝಿ ಪ್ರತಿಭಟನೆ ಬಗ್ಗೆ ನಟಿ ಕಂಗನಾ ರಣಾವತ್ ಹೇಳಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಸಿಜೆಪಿ ಪ್ರತಿಭಟನೆಗಳ ಇನ್‌ಸ್ಟಾಗ್ರಾಮ್ ರೀಲ್‌ಗಳು ಅಸಹ್ಯಕರ
  • ಸಿಜೆಪಿ, ಜೆನ್​ಝಿ ಪ್ರತಿಭಟನಾಕಾರರ ಭಾಷೆ ಮತ್ತು ನಡವಳಿಕೆ ಟೀಕಿಸಿದ ಬಾಲಿವುಡ್​ ನಟಿ
  • ಈ ಜೆನ್​ಝಿ ಪ್ರತಿಭಟನೆಯ ರೀಲ್‌ಗಳು ನೋಡಿ ವಾಂತಿ ಬರುವಂತಾಯಿತು ಎಂದ ಕಂಗನಾ
ಮುಂಬೈ: ನೀಟ್ ಪತ್ರಿಕೆ ಸೋರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಕಾಕ್ರೋಚ್​ ಜನತಾ ಪಕ್ಷ (ಸಿಜೆಪಿ) ನೇತೃತ್ವದಲ್ಲಿ ಜೆನ್​ಝಿ ನಡೆಸಿದ ಪ್ರತಿಭಟನೆಗಳ ರೀಲ್ಸ್​, ವಿಡಿಯೋಗಳು ನನಗೆ ವಾಂತಿ ಬರುವಂತೆ ಮಾಡಿತು ಎಂದು ಬಿಜೆಪಿ ಸಂಸದೆ, ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut)​ ಹೇಳಿದ್ದಾರೆ. ಈ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.
ಪ್ರತಿಭಟನೆಗಳಿಗೆ ಸಂಬಂಧಿಸಿದ ರೀಲ್‌ಗಳು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇವುಗಳನ್ನು ನೋಡಿ ನನಗೆ ಒಂದು ನಿಮಿಷ ವಾಂತಿ ಮಾಡುವಂತಾಯಿತು. ಆ ರೀಲ್ಸ್​ಗಳಲ್ಲಿ ಹೋರಾಟಕ್ಕೆಂದು ಬಂದವರ ಭಾಷೆ ಮತ್ತು ನಡವಳಿಕೆಯು ನನಗೆ ಭಾರಿ ನೋವುಂಟು ಮಾಡಿದೆ. ಒಬ್ಬೊಬ್ಬರು ಬಳಸುವ ಭಾಷೆ, ಅಂತಹ ವಿವಾದಾತ್ಮಕ ಮತ್ತು ಅಸಭ್ಯ ವಿಷಯಗಳನ್ನು ಇಲ್ಲಿಯವರೆಗೆ ನೋಡಿರಲಿಲ್ಲ. ಜೆನ್​ಝಿ ಏಕೆ ಹೀಗೆ ವರ್ತಿಸುತ್ತಿದ್ದಾರೆ ಎಂಬ ಪ್ರಶ್ನೆ ನನ್ನಲ್ಲಿ ಕಾಡಿತು ಎಂದಿದ್ದಾರೆ.
ಅಷ್ಟಕ್ಕೂ ಇವರನ್ನು ಹೆತ್ತವರು ಯಾರು? ಹೇಗೆ ಬೆಳೆದು ಬಂದರು? ಭಾರತವು ಶ್ರೀಮಂತ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಘನತೆಯನ್ನು ಹೊಂದಿರುವ ರಾಷ್ಟ್ರ. ಇಂತಹ ದೇಶದಲ್ಲಿ ಇಂಥಾ ನಡವಳಿಕೆಯು ನಿಜಕ್ಕೂ ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿದೆ. ಕಾಕ್ರೋಚ್​ ಎಂದು ಕರೆಯಲ್ಪಡುವ ನೀವು ಸಹ ಒಂದೇ ರೀತಿ ಕಾಣುತ್ತೀರಿ ಮತ್ತು ವರ್ತಿಸುತ್ತೀರಿ. ಎರಡರ ನಡುವೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ನೀವು ಈ ಜಗತ್ತಿಗೆ ಕಸ ಮತ್ತು ಅಸಹ್ಯವನ್ನು ತೋರಿಸುತ್ತಿದ್ದೀರಿ ಎಂದು ತಮ್ಮ ಇನ್​ಸ್ಟಾ ಖಾತೆಯಲ್ಲಿ ಬರೆದು ವ್ಯಂಗ್ಯವಾಡಿದ್ದಾರೆ.
ಕಡೆಯಲ್ಲಿ, ಜೆನ್​ಝಿ ವಿಡಿಯೋಗಳನ್ನು ನೋಡಿದ ಬಳಿಕ ನಾನು ಸ್ವಲ್ಪ ಸಮಯದವರೆಗೆ ಸೋಷಿಯಲ್​ ಮೀಡಿಯಾದಿಂದ ದೂರವಿದ್ದರೆ ತುಂಬಾ ಉತ್ತಮ ಅನಿಸಿದೆ ಎಂದಿದ್ದಾರೆ. ಪ್ರಸ್ತುತ, ಕಂಗನಾ ಅವರ ಬಿಸಿ ಬಿಸಿ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಜೆನ್​ಝಿಗಳನ್ನು ಅಕ್ಷರಶಃ ಕೆರಳಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net