ಕಂಗನಾ ರಣಾವತ್ ಹೊಸ ಪಾರ್ಲಿಮೆಂಟ್ ಲುಕ್ ವೈರಲ್: ಕೈಲಿದ್ದ ಬ್ಯಾಗ್ ಬೆಲೆಗೆ ಒಂದು ಐಷಾರಾಮಿ ಮನೆಯೇ ಸಿಗುತ್ತೆ! Kangana Ranaut

Kangana Ranaut  ಚಿತ್ರ Instagram
Kangana Ranaut ಚಿತ್ರ Instagram
Published on

ನವದೆಹಲಿ: ದೆಹಲಿಯ ಮುಂಗಾರು ಮಳೆಯ ವಾತಾವರಣವೇ ಒಂದು ರೀತಿಯ ಸಿನಿಮೀಯ ಅನುಭವ ನೀಡುತ್ತದೆ. ಕೆಂಪು ಕಲ್ಲುಗಳ ಸಂಸತ್ ಭವನದ ಆವರಣ, ತಂಪಾದ ವಾತಾವರಣ ಮತ್ತು ಹಗುರವಾದ ಗಾಳಿಗೆ ಹಾರುವ ರೇಷ್ಮೆ ಸೀರೆ ಈ ಸುಂದರ ವಾತಾವರಣಕ್ಕೆ ತಕ್ಕಂತೆ ಸಂಸದೆ ಕಂಗನಾ ರಣಾವತ್ (Kangana Ranaut) ಅವರ ಇತ್ತೀಚಿನ ಪಾರ್ಲಿಮೆಂಟ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗ್ತಿದೆ.

 ಕೈಯಲ್ಲಿ ಅನನ್ಯ ಶೈಲಿಯ ಕೊಡೆ ಹಿಡಿದು ಅವರು ನಡೆದುಬಂದ ರೀತಿ ಎಲ್ಲರ ಗಮನವನ್ನು ಸೆಳೆಯಿತು.

6,100 ರೂಪಾಯಿಯ ವಿಶಿಷ್ಟ ಛತ್ರಿ!

ಕಂಗನಾ ಅವರ ಈ ಲುಕ್‌ನಲ್ಲಿ ಎಲ್ಲರ ಕಣ್ಣು ನೆಟ್ಟಿದ್ದು ಅವರು ಹಿಡಿದಿದ್ದ ಆಕರ್ಷಕ ಛತ್ರಿಯ ಮೇಲೆ. 'ಗುಡ್ ಅರ್ಥ್' ಬ್ರ್ಯಾಂಡ್‌ನ ಈ ಆಕ್ವಾ-ಟೋನ್ ವರ್ಣದ ಕೊಡೆಯ ಬೆಲೆ ಸುಮಾರು 6,100 ರೂ. ಎನ್ನಲಾಗಿದೆ. 
ಸಾಮಾನ್ಯವಾಗಿ ಮಳೆಯಲ್ಲಿ ಎಲ್ಲರೂ ಕಪ್ಪು ಬಣ್ಣದ ರಕ್ಷಾ ಕೊಡೆಗಳನ್ನು ಬಳಸಿದರೆ, ಕಂಗನಾ ಮಾತ್ರ ವಿಶೇಷತೆಯಿಂದ ಕೂಡಿದ ಟ್ರಾಪಿಕಲ್ ವಿನ್ಯಾಸ ಮತ್ತು ಕೆಳಭಾಗದಲ್ಲಿ ಜ್ಯಾಮಿತೀಯ ಶೈಲಿಯ ಗ್ರಾಫಿಕ್‌ಗಳಿದ್ದ ಮರದ ಹಿಡಿಕೆಯ ಛತ್ರಿಯನ್ನು ಬಳಸಿದ್ದರು. ಮಳೆಯಿಂದ ರಕ್ಷಣೆ ಪಡೆಯುವ ವಸ್ತುವನ್ನೂ ತಮ್ಮ ಫ್ಯಾಷನ್‌ನ ಒಂದು ಭಾಗವಾಗಿ ಮಾಡಿಕೊಂಡಿರುವ ಅವರ ಸಮಯ ಪ್ರಜ್ಞೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. 

ಭಾರತೀಯ ಹಸ್ತಾಲಂಕಾರ ಹಾಗೂ ಪಾರಂಪರಿಕ ಸೀರೆ

ಕಂಗನಾ ಅವರ ಸೀರೆ ಆಯ್ಕೆ ಎಂದಿಗೂ ಭಾರತೀಯ ಪಾರಂಪರಿಕ ನೇಯ್ಗೆಗೆ ಆದ್ಯತೆ ನೀಡುತ್ತದೆ. ಈ ಬಾರಿಯೂ ಈಶಾನ್ಯ ಭಾರತದ ಪ್ರಸಿದ್ಧ 'ಎರಿ ಸಿಲ್ಕ್' ಸೀರೆಯನ್ನು ಉಟ್ಟಿದ್ದ ಅವರು, ಅದಕ್ಕೆ ಕಾಂಟ್ರಾಸ್ಟ್ ಆಗಿ ಸರಳ ಬಿಳಿ ಬಣ್ಣದ ಬ್ಲೌಸ್ ಧರಿಸಿದ್ದರು. ಸೀರೆಯ ನೀಲಿ ಬಣ್ಣ ಹಾಗೂ ಸೂಕ್ಷ್ಮವಾದ ಬಾರ್ಡರ್ ಸರಳ ಹಾಗೂ ಆಕರ್ಷಕ ನೋಟವನ್ನು ನೀಡಿದೆ. 

35 ಲಕ್ಷಕ್ಕೂ ಅಧಿಕ ಮೌಲ್ಯದ ಲಕ್ಸುರಿ ಆಕ್ಸೆಸರೀಸ್!

ಸರಳ ಹ್ಯಾಂಡ್‌ಲೂಮ್ ಸೀರೆಯ ಜೊತೆಗೆ ಕಂಗನಾ ಜೋಡಿಸಿಕೊಂಡ 'ಹೈ-ಫ್ಯಾಷನ್' ಬ್ರ್ಯಾಂಡ್‌ಗಳು ಈ ಲುಕ್‌ನ ನಿಜವಾದ ಹೈಲೈಟ್.
ಬಿರ್ಕಿನ್ ಹ್ಯಾಂಡ್‌ಬ್ಯಾಗ್: ತಿಳಿ ನೀಲಿ ಸೀರೆಗೆ ಕಪ್ಪು ಬಣ್ಣದ 'ಟೋಗೋ ಲೇಸರ್' ಮಾದರಿಯ 'ಹರ್ಮ್ಸ್ ಬಿರ್ಕಿನ್' (Hermès Birkin) ಹ್ಯಾಂಡ್‌ಬ್ಯಾಗ್ ಹಿಡಿದಿದ್ದರು. ಇದರ ಬೆಲೆ ಬರೋಬ್ಬರಿ 35 ಲಕ್ಷ ರೂ. ಎನ್ನಲಾಗಿದೆ. 
ರೋಲೆಕ್ಸ್ ವಾಚ್: ಅವರು ಧರಿಸಿರುವ ರೋಲೆಕ್ಸ್​ ಲೇಡಿ ಡೇಟ್​ಜಸ್ಟ್ ವಾಚ್​ನ ಬೆಲೆ ಸುಮಾರು 21 ಲಕ್ಷ ರೂ. ಅಂದರೆ, ಅವರು ಕೈಯಲ್ಲಿ ಹಿಡಿದಿದ್ದ ಬ್ಯಾಗ್ ಹಾಗೂ ವಾಚ್‌ಗಳ ಒಟ್ಟು ಮೌಲ್ಯವೇ ಬರೋಬ್ಬರಿ 56 ಲಕ್ಷ ರೂ. ಆಗಿದೆ.

ಭಾರತೀಯ ಪರಂಪರೆ ಮತ್ತು ಮಾಡರ್ನ್ ಫ್ಯಾಷನ್ ಸಮ್ಮಿಲನ:

ದೇಶೀಯ ನೇಯ್ಗೆಯ 6,100 ಮೌಲ್ಯದ ಕರಕುಶಲ ಛತ್ರಿ ಹಾಗೂ 56 ಲಕ್ಷ ಮೌಲ್ಯದ ಅಂತರರಾಷ್ಟ್ರೀಯ ಲಕ್ಸುರಿ ಆಭರಣ-ಬ್ಯಾಗ್‌ಗಳನ್ನು ಒಟ್ಟಿಗೆ ಪ್ರದರ್ಶಿಸಿದ ಕಂಗನಾ, ತಮ್ಮ ವಿಶಿಷ್ಟ ಫ್ಯಾಷನ್ ಗ್ರಹಿಕೆಯನ್ನು ಸಾಬೀತುಪಡಿಸಿದ್ದಾರೆ. ಸಂಸತ್ತಿನಲ್ಲಿ ಸಾಂಪ್ರದಾಯಿಕ ರಾಜಕಾರಣಿಗಳ ಶೈಲಿಗಿಂತ ಭಿನ್ನವಾಗಿ, ಭಾರತೀಯ ಕೈಮಗ್ಗ ಹಾಗೂ ಜಾಗತಿಕ ರಾಯಲ್ ಶೈಲಿಯನ್ನು ಸಮ್ಮಿಳಿತಗೊಳಿಸಿ ತಮ್ಮದೇ ಆದ 'ಪಾರ್ಲಿಮೆಂಟ್ ಫ್ಯಾಷನ್ ಸ್ಟೇಟ್‌ಮೆಂಟ್' ಸೃಷ್ಟಿಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net