ನವದೆಹಲಿ: ಬಿಹಾರದ ಕಿರಿಯ ಶಾಸಕಿ ಹಾಗೂ ಪ್ರಸಿದ್ಧ ಗಾಯಕಿ ಮೈಥಿಲಿ ಠಾಕೂರ್ ಅವರು 13 ಕೋಟಿಯ ಐಷಾರಾಮಿ ಕಾರು, ಸೋಶಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಚರ್ಚೆಗೆ ನಾಂದಿ ಹಾಡಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡಿವಿಟ್ ಪ್ರಕಾರ, ಅವರ ಒಟ್ಟು ನಿವ್ವಳ ಆಸ್ತಿ 4 ಕೋಟಿ ರೂ. ಇದೆ. 4 ಕೋಟಿ ಆಸ್ತಿ ಹೊಂದಿರುವವರು 13 ಕೋಟಿ ಕಾರು ಖರೀದಿಸಿದ್ದು ಹೇಗೆ ಎಂದು ನೆಟ್ಟಿಗರು ಪ್ರಶ್ನಿಸಿ ಟ್ರೋಲ್ ಮಾಡುತ್ತಿದ್ದಾರೆ. ಸದ್ಯ ಈ ವಿವಾದದಲ್ಲಿ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಅವರು ಶಾಸಕಿ ಮೈಥಿಲಿ ಪರ ನಿಂತಿದ್ದಾರೆ.