RSS ಅಣಕಿಸುವ ಟಿ-ಶರ್ಟ್: ಹಾಸ್ಯನಟ ಕುನಾಲ್ ಕಮ್ರಾ ಮತ್ತೊಂದು ವಿವಾದ!

RSS
RSS
Published on
ನವದೆಹಲಿ: ಸ್ಟ್ಯಾಂಡ್​-ಅಪ್ ಹಾಸ್ಯನಟ ಕುನಾಲ್ ಕಮ್ರಾ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅನ್ನು ಅಪಹಾಸ್ಯ ಮಾಡುವ ಟಿ-ಶರ್ಟ್ ಧರಿಸಿದ ಫೋಟೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಬಳಿಕ ವಿವಾದಕ್ಕೆ ಸಿಲುಕಿದ್ದಾರೆ.
ಕಮ್ರಾ ಈ ಫೋಟೋವನ್ನು ಪೋಸ್ಟ್ ಮಾಡಿದ ನಂತರ ಈ ವಿವಾದ ಭುಗಿಲೆದ್ದಿದೆ. ಆರ್‌ಎಸ್‌ಎಸ್ ಅನ್ನು ಉಲ್ಲೇಖಿಸುವ ಜೊತೆಗೆ ನಾಯಿಯ ಚಿತ್ರವನ್ನು ತೋರಿಸಿರುವ ಫೋಟೋ ಇದಾಗಿದೆ. ಈ ಫೋಟೋಗೆ 'ಕಾಮಿಡಿ ಶೋನಲ್ಲಿ ಕ್ಲಿಕ್ಕಿಸಲಾಗಿಲ್ಲ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.

ಕೆಂಡಮಂಡಲವಾದ ಬಿಜೆಪಿ

ಮಹಾರಾಷ್ಟ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಚಂದ್ರಶೇಖರ್ ಬವಾಂಕುಲೆ ಅವರು ಸರ್ಕಾರವು ಅಂತಹ ಪೋಸ್ಟ್‌ಗಳನ್ನು ನಿರ್ಲಕ್ಷಿಸುವುದಿಲ್ಲ. "ಇಂತಹ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಾಕುವ ಯಾರ ವಿರುದ್ಧವೂ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ" ಎಂದು ಎಚ್ಚರಿಕೆ ನೀಡಿದ್ದಾರೆ.

ಕಮ್ರಾ ವಿವಾದ ಇದೇ ಮೊದಲಲ್ಲ

ಆದಾಗ್ಯೂ, ಇದು ವಿವಾದಕ್ಕೆ ಸಿಲುಕಿದ ಅವರ ಮೊದಲ ಪ್ರಯತ್ನವಲ್ಲ.ರಾಜಕೀಯ ನಾಯಕರೊಂದಿಗೆ ಕಮ್ರಾ ಅವರ ಘರ್ಷಣೆ ನಡೆಯುತ್ತಲೇ ಇದೆ. ಕಳೆದ ಮಾರ್ಚ್‌ನಲ್ಲಿ, ಜನಪ್ರಿಯ ಹಿಂದಿ ಚಲನಚಿತ್ರ ಹಾಡಿನ ಸಾಹಿತ್ಯವನ್ನು ತಿರುಚುವ ಮೂಲಕ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಶಿಂಧೆ ಅವರನ್ನು ಅಣಕಿಸಿದ್ದರು.(ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net