ಕಾಳಿ ವಿಗ್ರಹಕ್ಕೆ ಮದರ್​ ಮೇರಿಯ ಅಲಂಕಾರ! ಅರ್ಚಕ ಅರೆಸ್ಟ್​​.. Kali idol

Kali idol
Kali idol
Published on
ಮುಂಬೈ : ಚೆಂಬೂರಿನ ಉಪನಗರದಲ್ಲಿರುವ ದೇವಾಲಯದಲ್ಲಿ ಕಾಳಿ ಮಾತೆಯ ವಿಗ್ರಹಕ್ಕೆ ( Kali idol) ಮದರ್ ಮೇರಿಯಂತೆ ವೇಷ ಹಾಕಿರುವ ವಿಡಿಯೋ ವೈರಲ್​ ​​ಆಗುತ್ತಿದ್ದಂತೆ ಪೊಲೀಸರು ಅರ್ಚಕನನ್ನು ಅರೆಸ್ಟ್​​ ಮಾಡಿದ್ದಾರೆ.
ಅನಿಕ್ ಗ್ರಾಮದ ಹಿಂದೂ ಸ್ಮಶಾನದ ಒಳಗಿರುವ ಕಾಳಿ ದೇವಸ್ಥಾನದ ದೇವಿಯ ವಿಗ್ರಹವು ಸಾಂಪ್ರದಾಯಿಕವಾಗಿ ಕಪ್ಪು ಅಥವಾ ಗಾಢ ನೀಲಿ ಬಣ್ಣ ಇರುವ ದೇವತೆಯ ಮುಖಕ್ಕೆ ಬಿಳಿ ಬಣ್ಣ ಬಳಿದಿದ್ದಾನೆ. ವಿಗ್ರಹದ ಕೈಯಲ್ಲಿ ಮಗುವಿನ ಆಕೃತಿ ಇಡಲಾಗಿದೆ. ದೇವಿಯ ಕಿರೀಟವನ್ನು ತೆಗೆದು ಚಿನ್ನದ ಶಿಲುಬೆಯನ್ನು ಇಡಲಾಗಿದೆ. ದೇವಾಲಯದಲ್ಲಿರುವ ಅಲಂಕಾರಿಕ ದೀಪಗಳನ್ನು ಹಾಕಲಾಗಿದೆ.
ಭಕ್ತರು ದೇವಾಲಯದ ಅರ್ಚಕರನ್ನು ಏನಾಯಿತು ಎಂದು ಕೇಳಿದಾಗ, ದೇವತೆ ತನ್ನ ಕನಸಿನಲ್ಲಿ ಕಾಣಿಸಿಕೊಂಡಳು ಮತ್ತು "ತಾಯಿ ಮೇರಿಯ ರೂಪದಲ್ಲಿ ಅವಳನ್ನು ಅಲಂಕರಿಸಿ" ಎಂದು ಸೂಚಿಸಿದಳು ಎಂದು ಅವರು ಹೇಳಿಕೊಂಡಿದ್ದಾನೆ.
ಈ ಪ್ರಕರಣ ವರದಿಯಾದ ನಂತರ ಪೊಲೀಸರು ಕಾರ್ಯಪ್ರವೃತ್ತರಾದರು. ಪ್ರದೇಶದಲ್ಲಿ ವದಂತಿಗಳು ಅಥವಾ ಅಶಾಂತಿ ಹರಡುವುದನ್ನು ತಡೆಯಲು ಪೊಲೀಸರ ಸಮ್ಮುಖದಲ್ಲಿ ಕಾಳಿ ವಿಗ್ರಹವನ್ನು ಅದರ ಮೂಲ ಸ್ಥಿತಿಗೆ ಪುನಃಸ್ಥಾಪಿಸಲಾಯಿತು. ಬಂಧನದ ನಂತರ ದೇವಾಲಯದ ಅರ್ಚಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು.
ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 299 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇದು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು ಮತ್ತು ಪೂಜಾ ಸ್ಥಳಕ್ಕೆ ಹಾನಿ ಮಾಡುವುದಕ್ಕೆ ಸಂಬಂಧಿಸಿದೆ. ಈ ನಿಬಂಧನೆಯ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net