ಕಳೆದ ಜ.14 ರಂದು ಶಿಡ್ಲಘಟ್ಟ ಪೌರಾಯುಕ್ತ ಜಿ.ಅಮೃತಾಗೆ ಫ್ಲೆಕ್ಸ್ ತೆರವು ವಿಚಾರವಾಗಿ ರಾಜೀವ್ ಗೌಡ ಮೊಬೈಲ್ ಕರೆ ಮಾಡಿ ಬೆದರಿಕೆಯನ್ನೊಡ್ಡಿದ್ದ ಆಡಿಯೋ ವೈರಲ್ ಆಗಿತ್ತು. ಚಪ್ಪಲಿಯಲ್ಲಿ ಹೊಡೆಸುವ, ಜನರನ್ನು ದಂಗೆ ಏಳಿಸುವ, ಬೆಂಕಿ ಹಚ್ಚುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಆಕ್ರೋಶ ವ್ಯಕ್ತವಾಗಿತ್ತು.