ಲಕ್ನೋ ತಂಡ 200 ರನ್‌ಗಳ ಗಡಿ ದಾಟಲು ಹೋರಾಡುತ್ತಿದ್ದಾಗ ಕ್ರೀಸ್‌ನಲ್ಲಿದ್ದ ಯುವ ಆಟಗಾರ ಅರ್ಜುನ್ ತೆಂಡೂಲ್ಕರ್ ಹಾಗೂ ಅಬ್ದುಲ್ ಸಮದ್ ನಡುವೆ ಅಂತಿಮ ಓವರ್‌ನಲ್ಲಿ ಸ್ವಾರಸ್ಯಕರ ಪ್ರಸಂಗ ನಡೆಯಿತು. ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದ ಅಬ್ದುಲ್ ಸಮದ್ ಕೇವಲ 20 ಎಸೆತಗಳಲ್ಲಿ ಪ್ರಮುಖ 37 ರನ್ ಗಳಿಸಿ ಅಜೇಯರಾಗುಳಿದರು. ಆದರೆ, ತಂಡದ ಮೊತ್ತವನ್ನು ಗರಿಷ್ಠ ಮಟ್ಟಕ್ಕೆ ಕೊಂಡೊಯ್ಯುವ ಆತುರದಲ್ಲಿದ್ದ ಸಮದ್, ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ಅರ್ಜುನ್ ತೆಂಡೂಲ್ಕರ್ ಅವರಿಗೆ ಸಿಂಗಲ್ಸ್ ನೀಡಿ ಸ್ಟ್ರೈಕ್ ಬಿಟ್ಟುಕೊಡಲು ನಿರಾಕರಿಸಿದರು. ಭಾರಿ ರನ್ ಗಳಿಸುವ ಜವಾಬ್ದಾರಿಯನ್ನು ತಾವೇ ಹೊತ್ತ ಸಮದ್ ಸಿಡಿಸಿದ ಬೌಂಡರಿಗಳ ನೆರವೇನಿಂದ ಲಕ್ನೋ 196 ರನ್‌ಗಳ ಸವಾಲಿನ ಮೊತ್ತ ತಲುಪಲು ಸಾಧ್ಯವಾಯಿತು.