ತನ್ನ ಮನೆಯಲ್ಲಿ ಸಿಕ್ಕ ವಿಶಾಲ್ ಬರೆದಿಟ್ಟ ಪತ್ರವನ್ನು ವಶಪಡಿಸಿಕೊಂಡ ಖಾಕಿ, ಅದರಲ್ಲಿದ್ದ ವಿಷಯವನ್ನು ತಿಳಿದು ಬೆರಗಾದರು. ಬಿಳಿ ಹಾಳೆಯ ಪೇಪರ್ನಲ್ಲಿ ತನ್ನ ಪಾಪ ಕೃತ್ಯದ ಇಂಚಿಂಚೂ ಮಾಹಿತಿಯನ್ನು ಬರೆದಿದ್ದ ಆರೋಪಿ, ಹೆಂಡತಿಯ ದೇಹದ ಬಗ್ಗೆಯೂ ಸುಳಿವು ನೀಡಿದ್ದ. ಲೆಟರ್ನಲ್ಲಿದ್ದ ಅಂಶಗಳನ್ನು ಬೆನ್ನತ್ತಿದ ಪೊಲೀಸರಿಗೆ, ನಗರದ ಸಲಾಬತ್‌ಪುರ ಪ್ರದೇಶದಲ್ಲಿ ಒಂದು ಪಾಳುಬಿದ್ದ, ಶಿಥಿಲಗೊಂಡ ಮನೆಗೆ ಹೋಗುವ ಪರಿಸ್ಥಿತಿ ಎದುರಾಯಿತು. ಅಲ್ಲಿದ್ದ ಮರದ ತುಂಡುಗಳನ್ನು ತೆಗೆದ ಖಾಕಿಗೆ, ಸಿಮೆಂಟ್ ಮಿಕ್ಸಿಂಗ್ನಿಂದ ಕೊಳೆಯುತ್ತಿದ್ದ ಶಿಲ್ಪಾಳ ದೇಹ ಪತ್ತೆಯಾಯಿತು. ಮೃತದೇಹವನ್ನು ವಶಪಡಿಸಿಕೊಂಡ ಬೆನ್ನಲ್ಲೇ ಆರೋಪಿಗಾಗಿ ಹುಡುಕಾಡಿದ ಪೊಲೀಸರು, ಕಡೆಗೂ ಆತನನ್ನು ನಗರದ ಹೊರವಲಯದಲ್ಲಿರುವ ಗ್ರಾಮೀಣ ಪ್ರದೇಶದಲ್ಲಿ ವಿಶಾಲ್ನನ್ನು ಬಂಧಿಸಿದರು.