ಕೊನೆಗೂ ವದಂತಿಗಳಿಗೆ ತೆರೆ! ಪತ್ರಕರ್ತೆ ನಿಧಿ ಕೈಹಿಡಿದ ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ; ಫೋಟೋಸ್​ ವೈರಲ್​ | Omar Abdullah

Omar Abdullah
ಕೊನೆಗೂ ವದಂತಿಗಳಿಗೆ ತೆರೆ! ಪತ್ರಕರ್ತೆ ನಿಧಿ ಕೈಹಿಡಿದ ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ; ಫೋಟೋಸ್​ ವೈರಲ್​ | Omar Abdullah
Published on: 

ನವದೆಹಲಿ: ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಮತ್ತು ಹಿರಿಯ ಪತ್ರಕರ್ತೆ ನಿಧಿ ರಜ್ದಾನ್ ವಿವಾಹಕ್ಕೆ ಸಂಬಂಧಿಸಿದ ವದಂತಿಗಳು ಕೊನೆಗೂ ಸತ್ಯವಾಗಿದ್ದು, ಸ್ವತಃ ಓಮರ್​ ತಮ್ಮಿಬ್ಬರ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ಅದುವೇ ತಮ್ಮ ಜೋಡಿಯ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಎಂಬುದೇ ವಿಶೇಷ.

ಶನಿವಾರ ವಿವಾಹ ಸಮಾರಂಭದ ಫೋಟೋಗಳನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿರುವ ಓಮರ್​ ಅಬ್ದುಲ್ಲಾ, ಇದೆಲ್ಲ ಇಲ್ಲಿಗೆ ಮುಗಿಯಿತು ಬ್ರೋ. ನಿನ್ನೆ ಹೊಸ ಜೀವನದ ಪಯಣ ಆರಂಭವಾಯಿತು ಎಂದು ಬರೆದುಕೊಳ್ಳುವ ಮೂಲಕ ನಿಧಿ ರಜ್ದಾನ್ ಜತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಅನೇಕರ ಗಮನ ಸೆಳೆದಿದ್ದು, ಹರಿದಾಡುತ್ತಿದ್ದ ವದಂತಿಗಳೇ ನಿಜ ಎಂಬುದನ್ನು ಕೊನೆಗೂ ಸಾಬೀತುಪಡಿಸಿದೆ.

ಸುಪ್ರೀಂ ಕೋರ್ಟ್‌ನಲ್ಲಿ ವಿಚ್ಛೇದನ

ಈ ಶುಭ ಕಾರ್ಯಕ್ರಮಕ್ಕೂ ಮೊದಲು, ಜುಲೈ 31ರಂದು ಸುಪ್ರೀಂಕೋರ್ಟ್ ಓಮರ್ ಅಬ್ದುಲ್ಲಾ ಹಾಗೂ ಅವರ ಮೊದಲ ಪತ್ನಿ ಪಾಯಲ್ ಅಬ್ದುಲ್ಲಾ ಅವರ ದಾಂಪತ್ಯ ಜೀವನಕ್ಕೆ ಕಾನೂನಾತ್ಮಕವಾಗಿ ವಿಚ್ಛೇದನ ಮಂಜೂರು ಮಾಡಿತು. ಮಧ್ಯಸ್ಥಿಕೆ ಮೂಲಕ ಇಬ್ಬರೂ ತಮ್ಮ ದಾಂಪತ್ಯ ಬಿಕ್ಕಟ್ಟನ್ನು ಪರಸ್ಪರ ಸಮ್ಮತಿಯಿಂದ ಬಗೆಹರಿಸಿಕೊಂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಲಾಯಿತು. ಇದಾದ ಬಳಿಕವೇ ನಿಧಿ ರಜ್ದಾನ್ ಅವರೊಂದಿಗೆ ಎಂಗೇಜ್​ಮೆಂಟ್​, ಮದುವೆ ಕಾರ್ಯಗಳು ನಡೆದಿವೆ.

Also Read
ರಕ್ತ ಹರಿದು ಉಸಿರು ಚೆಲ್ಲುವವರೆಗೂ ಕುಣಿಸುತ್ತಿತ್ತು ಈ ಕಾಯಿಲೆ! ಕೋವಿಡ್​ಗಿಂತಲೂ ಮಹಾಮಾರಿ 1518ರ ಈ ಡ್ಯಾನ್ಸಿಂಗ್​ ಪ್ಲೇಗ್ | Dancing plague
Omar Abdullah

1994ರ ಸೆಪ್ಟೆಂಬರ್‌ನಲ್ಲಿ ಮೊದಲ ವಿವಾಹವಾಗಿದ್ದ ಓಮರ್ ಮತ್ತು ಪಾಯಲ್ ದಂಪತಿ ಕಳೆದ ಹಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಓಮರ್ ಅಬ್ದುಲ್ಲಾ 2024ರ ಜುಲೈನಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. 2025ರ ಏಪ್ರಿಲ್‌ನಲ್ಲಿ ನ್ಯಾಯಾಲಯ ಇಬ್ಬರಿಗೂ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚಿಸಿತ್ತು. ಅಂತಿಮವಾಗಿ ಈ ವರ್ಷದ ಜುಲೈ 31ರಂದು ಸುಪ್ರೀಂ ಕೋರ್ಟ್ ದಂಪತಿಯ ವಿಚ್ಛೇದನವನ್ನು ಅಂಗೀಕರಿಸಿತು.

ಯಾರೀ ನಿಧಿ ರಜ್ದಾನ್?

ನಿಧಿ ರಜ್ದಾನ್ ದೇಶದ ಖ್ಯಾತ ಪತ್ರಕರ್ತೆಯಾಗಿದ್ದು, ರಾಷ್ಟ್ರೀಯ ರಾಜಕೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ವರದಿಗಾರಿಕೆಯಲ್ಲಿ ಸುದೀರ್ಘ ಅನುಭವ ಹೊಂದಿದ್ದಾರೆ. ಅವರು 'ಲೆಫ್ಟ್, ರೈಟ್ ಅಂಡ್ ಸೆಂಟರ್: ದಿ ಐಡಿಯಾ ಆಫ್ ಇಂಡಿಯಾ' ಎಂಬ ಹೆಸರಾಂತ ಪುಸ್ತಕದ ಲೇಖಕಿಯೂ ಹೌದು,(ಏಜೆನ್ಸೀಸ್).